ತೆಲುಗುನಾಡಿನಲ್ಲಿ ಮಿಂಚುತ್ತಿರುವ ಕನ್ನಡದ ಹಿಟ್ಲರ್ ಸೊಸೆ...!

Written by - CHARITHA PATEL | Edited by - Manjunath N | Last Updated : May 13, 2022, 05:47 PM IST
  • ಹಿಟ್ಲರ್‌ ಕಲ್ಯಾಣ ವಿಶೇಷ ಎಳೆಯನ್ನಿಟ್ಟುಕೊಂಡು ನೋಡುಗರನ್ನು ರಂಜಿಸುತ್ತಿರುವ ಧಾರವಾಹಿ..
  • ಇಲ್ಲಿ ಸಾಕಷ್ಟು ವಿಭಿನ್ನ ಅಂಶಗಳಿದ್ದು ತನ್ನದೆ ಆದ ವಿಶೇಷತೆಯನ್ನಿಟ್ಟುಕೊಂಡಿದೆ.
ತೆಲುಗುನಾಡಿನಲ್ಲಿ ಮಿಂಚುತ್ತಿರುವ ಕನ್ನಡದ ಹಿಟ್ಲರ್ ಸೊಸೆ...! title=

ಹಿಟ್ಲರ್‌ ಕಲ್ಯಾಣ ವಿಶೇಷ ಎಳೆಯನ್ನಿಟ್ಟುಕೊಂಡು ನೋಡುಗರನ್ನು ರಂಜಿಸುತ್ತಿರುವ ಧಾರವಾಹಿ..ಇಲ್ಲಿ ಸಾಕಷ್ಟು ವಿಭಿನ್ನ ಅಂಶಗಳಿದ್ದು ತನ್ನದೆ ಆದ ವಿಶೇಷತೆಯನ್ನಿಟ್ಟುಕೊಂಡಿದೆ.. ಈ ಧಾರವಾಹಿಯಲ್ಲಿ ಎಜೆ ಹಾಗೂ ಲೀಲಾ ಪಾತ್ರಕ್ಕೆ ಎಷ್ಟೂ ಪ್ರಾಮುಖ್ಯತೆಯಿದೆಯೊ ಅದೇ ರೀತಿ ಮೂರುವ ಸೊಸೆಯಂದಿರ ಸುತ್ತ ಕೂಡಾ ಕಥೆ ಸಾಗ್ತಾಯಿದೆ..ಹೀಗೆ ಪ್ರತಿಯೊಂದು ಪಾತ್ರಕ್ಕು ಹಿಟ್ಲರ್‌ ಕಲ್ಯಾಣ ಧಾರವಾಹಿಯಲ್ಲಿ ಪ್ರಾಮುಖ್ಯತೆಯಿದೆ..

No description available.

ಇದನ್ನೂ ಓದಿ: ಬೆಂಗಳೂರಿನ ಕೇಂದ್ರ ಕಾರಾಗೃಹದ ಕೈದಿಗಳಿಗೆ ಮಹರ್ಷಿ ಶ್ರೀ ಅರವಿಂದರ ತತ್ವಬೋಧನೆ

ಇದೀಗ ವಿಶೇಷ ಅಂದ್ರೆ, ಹಿಟ್ಲರ್‌ನ ಸೊಸೆಯಂದಿರಲ್ಲಿ ಒಬ್ಬ ಸೊಸೆ ಪಕ್ಕದ ರಾಜ್ಯದಲ್ಲಿ ಮಿಂಚಲು ಸಜ್ಜಾಗಿದ್ದಾರೆ...ಹೌದು ಮೂರು ಸೊಸೆಯರಲ್ಲಿ ಕೊನೆಯ ಸೊಸೆ ಪಾತ್ರ ಮಾಡ್ತಾಯಿರುವ ಸರಸ್ವತಿಯಾಗಿ ಕಾಣಿಸಿಕೊಂಡಿರುವ ಪದ್ಮಿನಿ ದೇವನಹಳ್ಳಿ ಇದೀಗ ತೆಲುಗು ರಾಜ್ಯದಲ್ಲಿ ಮಿಂಚಲು ಸಜ್ಜಾಗಿದ್ದಾರೆ.ಯೆಸ್‌.. ಜೀ ತೆಲುಗು ಸ್ಮಾಲ್‌ ಸ್ಕ್ರೀನ್‌ನಲ್ಲಿ ಸದ್ಯ ಟಾಪ್‌ ಸೀರಿಯಲ್‌ಗಳ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ವೈದೇಹಿ ಪರಿನಿಯಮ್‌ ಧಾರವಾಹಿಯಲ್ಲಿ ಕಾಣಿಸಿಕೊಳ್ಳಿದ್ದಾರೆ..ವಿಶೇಷ ಅಂದ್ರೆ ಇಲ್ಲಿ ಸೊಸೆಯಾಗಿ ಜನ ಮನ್ನಣೆ ಪಡೆದ ಪದ್ಮಿನಿ, ವೈದೆಹಿ ಎಂಬ ಪ್ರಮುಖ ಪಾತ್ರದಲ್ಲಿ ಪ್ರೇಕ್ಷರ ಮುಂದೆ ಬಂದಿದ್ದಾರೆ.

ಇದನ್ನೂ ಓದಿ: ಕನ್ನಡದ ಕೆಜಿಎಫ್ 2 ಸಿನಿಮಾ ನೋಡಿ...ವಾವ್ ಯಶ್..! ಎಂದ ಬಾಲಿವುಡ್ ನಟ ರಣವೀರ್ ಸಿಂಗ್..!

ಇನ್ನೂ ಧಾರವಾಹಿಯ ಬಗ್ಗೆ ಹೇಳೊದಾದ್ರೆ ವೈದೆಹಿ ಎಂಬ ರಾಮನ ಭಕ್ತೆಯ ಸುತ್ತ ಹೆಣೆದಿರುವ ಕಥೆಯಿದಾಗಿದ್ದು, ದೈವಾಂಶು ವೈದೇಹಿ ಕಲ್ಯಾಣವಾಗಿರತ್ತೆ..ಆದ್ರೆ ಕಾರಣಾಂತರಗಳಿಂದ ದೈವಾಂಶು ವೈದೇಹಿ ಒಟ್ಟಿಗೆ ಇರುವ ಸೌಭಾಗ್ಯ ಇರೋದಿಲ್ಲಾ.. ಅದರಿಂದ ದೈವಾಂಶು ಶ್ರವಂತಿ ಎಂಬ ಹುಡುಗಿಯನ್ನ ಮದುವೆಯಾಗ್ತಾನೆ.. ಆದ್ರೀಗಾ ಟ್ವಿಸ್ಟ್‌ ಅಂದ್ರೆ ವೈದೇಹಿ ದೈವಾಂಶುವನ್ನು ಅರಸಿ ಮತ್ತೆ ಬಂದಿದ್ದಾಳೇ..ಮಾತ್ರವಲ್ಲದೆ ವೈದೇಹಿಗೆ ದೈವಾಂಶೂ ಬೇರೊಂದು ಮದುವೆಯಾಗಿರೋದು ಕೂಡಾ ತಿಳಿದಿದೆ.. ಮುಂದೆ ಏನಾಗಬಹುದು ಎಂಬ ಕುತೂಹಲ ಸದ್ಯ ಎಲ್ಲಡೆ ಮನೆಮಾಡಿದೆ..ಇದಿಷ್ಟು ಸೀರಿಯಲ್‌ ಕಥೆ.

.No description available.

ಮತ್ತೊಂದು ವಿಚಾರ ಏನಪ್ಪ ಅಂದ್ರೆ ವೈದೇಹಿ ಪರಿನಿಯಮ್‌ ಧಾರವಾಹಿಯಲ್ಲಿ ನಾಯಕ ನಟನಾಗಿ ಕನ್ನಡ ನಟ ಪವನ್‌  ಕಾಣಿಸಿಕೊಂಡಿದ್ದಾರೆ.. ಒಂದೆ ಧಾರವಾಹಿಯಲ್ಲಿ ನಮ್ಮ ಕನ್ನಡದ ನಟ ಹಾಗೂ ನಟಿ ಒಂದೆ ಲೀಡ್‌ ರೋಲ್‌ನಲ್ಲಿ ಕಾಣಿಸಿಕೊಳ್ತಾಯಿರೋದು ಖುಷಿಯ ವಿಚಾರ..

ಒಟ್ಟಿನಲ್ಲಿ ಕನ್ನಡದ ನಟ ನಟಿಯರು ಸದ್ಯ ಪರಭಾಷೆಗಳಲ್ಲಿ ಸಖತ್‌ ಮಿಂಚುತ್ತಿದ್ದಾರೆ.. ಎಲ್ಲಿ ನೋಡಿದ್ರೂ ಕನ್ನಡಿಗರ ಹವಾ ಜೋರಾಗಿದೆ..ಇದು ಕನ್ನಡಿಗರಿಗೆ ಹೆಮ್ಮೆಯ ವಿಚಾರ..

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News