ಸಿನಿರಂಗದಲ್ಲಿ ನಟಿಯರಿಗಷ್ಟೇ ಅಲ್ಲ, ನಟರಿಗೂ ಲೈಂಗಿಕ ಕಿರುಕುಳ..! ಶಾಕಿಂಗ್‌ ವಿಚಾರ ಬಹಿರಂಗ

Hema committee report : ಚಿತ್ರರಂಗದಲ್ಲಿ ಲೈಂಗಿಕ ಕಿರುಕುಳ ಇದೆ ಎಂಬ ವಿಚಾರ ಹೇಮಾ ಸಮಿತಿ ವರದಿಯ ಮೂಲಕ ಬಹಿರಂಗವಾಗಿದೆ.. ವಿಚಿತ್ರ ಎಂಬಂತೆ.. ನಟಿಯರಿಗಷ್ಟೇ ಅಲ್ಲ, ನಟರಿಗೂ ಸಹ ಲೈಂಗಿಕ ಕಿರುಕುಳ ನೀಡಲಾಗಿದೆ.. ಅಷ್ಟಕ್ಕೂ ಈ ವರದಿಯಲ್ಲಿ ಏನಿದೆ.. ಬನ್ನಿ ತಿಳಿಯೋಣ..

Written by - Krishna N K | Last Updated : Aug 24, 2024, 04:41 PM IST
    • ಚಿತ್ರರಂಗದಲ್ಲಿ ಲೈಂಗಿಕ ಕಿರುಕುಳ
    • ಹೇಮಾ ಸಮಿತಿ ವರದಿ ಬಹಿರಂಗ
    • ನಟರಿಗೂ ಸಹ ಲೈಂಗಿಕ ಕಿರುಕುಳ
ಸಿನಿರಂಗದಲ್ಲಿ ನಟಿಯರಿಗಷ್ಟೇ ಅಲ್ಲ, ನಟರಿಗೂ ಲೈಂಗಿಕ ಕಿರುಕುಳ..! ಶಾಕಿಂಗ್‌ ವಿಚಾರ ಬಹಿರಂಗ title=

Casting Couch : ಜುಲೈ 10, 2017 ಕೇರಳ ಚಿತ್ರರಂಗಕ್ಕೆ ಮರೆಯಲಾಗದ ದಿನವಾಗಿತ್ತು.. ನಟಿಯನ್ನು ಅಪಹರಿಸಿ ಕಾರಿನಲ್ಲಿ ಅತ್ಯಾಚಾರ ಮಾಡಿದ ಪ್ರಕರಣ ಸಂಚಲನ ಮೂಡಿಸಿತ್ತು.. ಇದರ ಬೆನ್ನಲ್ಲೇ ಮಲಯಾಳಂ ಚಿತ್ರರಂಗದಲ್ಲಿ ಮಹಿಳೆಯರ ಮೇಲಿನ ಅಪರಾಧಗಳ ಬಗ್ಗೆ ಸಾಕಷ್ಟು ದೂರುಗಳು ಬಂದಿದ್ದವು. 

ಇದರ ನಂತರ 2018 ರಲ್ಲಿ, ಕೇರಳ ಚಲನಚಿತ್ರೋದ್ಯಮದಲ್ಲಿ ಮಹಿಳೆಯರು ಎದುರಿಸುತ್ತಿರುವ ಲೈಂಗಿಕ ಸಮಸ್ಯೆಗಳನ್ನು ತನಿಖೆ ಮಾಡಲು ರಾಜ್ಯ ಸರ್ಕಾರವು ನಿವೃತ್ತ ನ್ಯಾಯಾಧೀಶೆ ಹೇಮಾ ನೇತೃತ್ವದಲ್ಲಿ ಸಮಿತಿಯನ್ನು ರಚಿಸಿತು. ಈ ಕುರಿತು ವಿಚಾರಣೆ ನಡೆಸಿದ ಸಮಿತಿಯು 2019ರ ಡಿಸೆಂಬರ್‌ನಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರಿಗೆ ದಾಖಲೆಗಳು, ಆಡಿಯೋ ಮತ್ತು ವಿಡಿಯೋ ಸಾಕ್ಷ್ಯಗಳೊಂದಿಗೆ 233 ಪುಟಗಳ ವರದಿಯನ್ನು ಸಲ್ಲಿಸಿತ್ತು. ಆದರೆ, ಕಾರಣಾಂತರಗಳಿಂದ ಸರಕಾರ ಈ ವರದಿಯನ್ನು ಪ್ರಕಟಿಸಿರಲಿಲ್ಲ.

ಇದನ್ನೂ ಓದಿ:ನಟ ದುನಿಯಾ ವಿಜಯ್‌ಗೆ ಸಂಕಷ್ಟ: ಭೀಮನಿಗೆ ಸಿಸಿಬಿ ನೋಟಿಸ್ ಸಾಧ್ಯತೆ

ಈ ಪ್ರಕರಣದಲ್ಲಿ ಕೇರಳ ಸರ್ಕಾರ ಹೇಮಾ ಸಮಿತಿ ವರದಿಯನ್ನು 19ರಂದು ಬಿಡುಗಡೆ ಮಾಡಿತ್ತು. ಅದರಲ್ಲಿ, ಮಲಯಾಳಂ ಚಿತ್ರರಂಗದಲ್ಲಿ ಅವಕಾಶಗಳಿಗಾಗಿ ಮಹಿಳಾ ಕಲಾವಿದರು ಲೈಂಗಿಕ ಕಿರುಕುಳಕ್ಕೆ ಒಳಗಾಗುತ್ತಾರೆ ಎಂದು ಉಲ್ಲೇಖಿಸಲಾಗಿದೆ. ಮಹಿಳೆಯರು ಮಾತ್ರವಲ್ಲ, ಪುರುಷರೂ ಲೈಂಗಿಕ ಕಿರುಕುಳಕ್ಕೆ ಒಳಗಾಗುತ್ತಾರೆ ವರದಿ ಬಹಿರಂಗ ಪಡಿಸಿದೆ.

ಇದೀಗ ಈ ವಿಚಾರ ಕೇರಳ ಚಿತ್ರರಂಗದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಈ ವರದಿಯ ವಿರುದ್ಧ ಪರ ಮತ್ತು ವಿರೋಧವಾಗಿ ಹೇಳಿಕೆಗಳು ಬರುತ್ತಿವೆ.. ಈ ವೇಳೆ ಹೇಮಾ ಸಮಿತಿ ವರದಿ ಕುರಿತು ನಟಿ ಪಾರ್ವತಿ ಮೆನನ್‌ ತಮ್ಮ ಅಭಿಪ್ರಾಯ ತಿಳಿಸಿದ್ದು, ವರದಿಯಲ್ಲಿನ ಕಾಮೆಂಟ್‌ಗಳನ್ನು ಆಧರಿಸಿ, ಚಿತ್ರರಂಗದ ಎಲ್ಲಾ ಮಹಿಳೆಯರು ಹೊಂದಾಣಿಕೆ ಮಾಡಿಕೊಂಡಿದ್ದಾರೆ ಎಂದು ಹೇಳುವುದು ಸ್ವೀಕಾರಾರ್ಹವಲ್ಲ ಎಂದಿದ್ದಾರೆ..

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News