Miss Universe 2021: ಭಾರತದ ಹರ್ನಾಜ್ ಸಂಧುಗೆ ಒಲಿದ 'ಭುವನ ಸುಂದರಿ 2021' ಪಟ್ಟ

Miss Universe 2021: 70ನೇ ಭುವನ ಸುಂದರಿ 2021 (Miss Universe 2021) ಆಗಿ 21 ವರ್ಷದ ಹರ್ನಾಜ್ ಸಂಧು ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ.   

Edited by - Zee Kannada News Desk | Last Updated : Dec 13, 2021, 10:25 AM IST
  • ಎರಡು ದಶಕಗಳ ನಂತರ ಭಾರತದ ಚೆಲುವೆಗೆ 'ಭುವನ ಸುಂದರಿ' ಪಟ್ಟ
  • ಭುವನ ಸುಂದರಿ 2021 ಹೊರಹೊಮ್ಮಿದ ಭಾರತದ ಹರ್ನಾಜ್ ಸಂಧು
  • ಇಸ್ರೇಲ್‌ನ ಐಲಾಟ್‌ನಲ್ಲಿ ನಡೆದ ಮಿಸ್ ಯೂನಿವರ್ಸ್ 2021 ರ ಸ್ಪರ್ಧೆ
Miss Universe 2021: ಭಾರತದ ಹರ್ನಾಜ್ ಸಂಧುಗೆ ಒಲಿದ 'ಭುವನ ಸುಂದರಿ 2021' ಪಟ್ಟ  title=
ಹರ್ನಾಜ್ ಸಂಧು

ಐಲಾಟ್‌ (ಇಸ್ರೇಲ್):  ಎರಡು ದಶಕಗಳ ನಂತರ ಭಾರತದ ಚೆಲುವೆಗೆ 'ಭುವನ ಸುಂದರಿ' ಪಟ್ಟ ಒಲಿದಿದೆ. 2000 ರಲ್ಲಿ ಲಾರಾ ದತ್ತಾ ಈ ಪ್ರಶಸ್ತಿಯನ್ನು ಗೆದ್ದಿದ್ದರು.

ಇದೀಗ 70ನೇ ಭುವನ ಸುಂದರಿ 2021 (Miss Universe 2021) ಆಗಿ 21 ವರ್ಷದ ಹರ್ನಾಜ್ ಸಂಧು ಕಿರೀಟವನ್ನು ಮುಡಿಗೇರಿಸಿಕೊಂಡಿದ್ದಾರೆ. 

ಇಸ್ರೇಲ್‌ನ ಐಲಾಟ್‌ನಲ್ಲಿ ನಡೆದ ಮಿಸ್ ಯೂನಿವರ್ಸ್ 2021 ರ ಸ್ಪರ್ಧೆ ಕಿರೀಟವನ್ನು ಗೆಲ್ಲುವ ಮೂಲಕ ಹರ್ನಾಜ್ (Harnaaz Sandhu) ಇಡೀ ದೇಶವೇ ಹೆಮ್ಮೆಪಡುವಂತೆ ಮಾಡಿದ್ದಾರೆ.

 

 

ಹರ್ನಾಜ್ ಸ್ಪರ್ಧಿಗಳಾದ ಪರಾಗ್ವೆ ಮತ್ತು ದಕ್ಷಿಣ ಆಫ್ರಿಕಾವನ್ನು ಹಿಂದಿಕ್ಕಿ ಭುವನ ಸುಂದರಿ ಪಟ್ಟ ಪಡೆದಿದ್ದಾರೆ. ಆಕೆಯ ಹೆಸರನ್ನು ವಿಜೇತರೆಂದು ಘೋಷಿಸಿದ ಕ್ಷಣ, ಹರ್ನಾಜ್ ಆನಂದ ಬಾಷ್ಪ ಸುರಿಸಿದರು. ಧನ್ಯತಾಭಾವದಿಂದ ಅವಳ ಕೈಜೋಡಿಸುವುದನ್ನೂ ನೋಡಬಹುದು. 

2020 ರ ಭುವನ ಸುಂದರಿ ಮೆಕ್ಸಿಕೋದ ಆಂಡ್ರಿಯಾ ಮೆಜಾ ತನ್ನ ಕಿರೀಟವನ್ನು ಹೊಸ ಉತ್ತರಾಧಿಕಾರಿಗೆ ಹಸ್ತಾಂತರಿಸಿದರು. 

ಭಾರತ ಈ ಹಿಂದೆ 1994 ರಲ್ಲಿ ಸುಶ್ಮಿತಾ ಸೇನ್ ಮತ್ತು 2000 ರಲ್ಲಿ ಲಾರಾ ದತ್ತಾ ಪ್ರಶಸ್ತಿಯನ್ನು ಬಾಚಿಕೊಳ್ಳುವ ಮೂಲಕ ಎರಡು ಬಾರಿ ಭುವನ ಸುಂದರಿ (Miss Universe)ಪ್ರಶಸ್ತಿ ಗೆದ್ದಿತ್ತು.

ಇದನ್ನೂ ಓದಿ: Deepika Padukone : ಪ್ರಭಾಸ್ ಜೊತೆ ಸಿನಿಮಾ ಕೆಲಸ ಆರಂಭಿಸಿದ ದೀಪಿಕಾ : ಇದರಲ್ಲಿ ಬಿಗ್ ಬಿ ಕೂಡ ಇದ್ದಾರೆ!

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News