ಏಳು ದಿನಗಳಲ್ಲಿ ಈ ಚಿತ್ರ ಗಳಿಸಿದ್ದೆಷ್ಟು? ಕೇಳಿ ನೀವೂ ಬೆಚ್ಚಿಬೀಳುವಿರಿ

ಸದ್ಯ ಈ ಚಿತ್ರದ ಏಳು ದಿನಗಳ ಬಾಕ್ಸ್ ಆಫೀಸ್  ಕಲೆಕ್ಷನ್ ಪ್ರಕಟಗೊಂಡಿದ್ದು, ಈ ಚಿತ್ರಕ್ಕೆ ಅಭಿಮಾನಿಗಳಿಂದ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ ಎಂದೇ ಹೇಳಬಹುದು. 

Last Updated : Jan 3, 2020, 07:34 PM IST
ಏಳು ದಿನಗಳಲ್ಲಿ ಈ ಚಿತ್ರ ಗಳಿಸಿದ್ದೆಷ್ಟು? ಕೇಳಿ ನೀವೂ ಬೆಚ್ಚಿಬೀಳುವಿರಿ title=

ನವದೆಹಲಿ: ಬಾಲಿವುಡ್ ನಲ್ಲಿ 'ಖಿಲಾಡಿ' ಎಂದೇ ಖ್ಯಾತ ನಟ ಅಕ್ಷಯ್ ಕುಮಾರ್ ನಟಿಸಿರುವ ಚಿತ್ರ 'ಗುಡ್ ನ್ಯೂಸ್' ಬಿಡುಗಡೆಗೊಂಡು ಇಂದಿಗೆ 8 ದಿನಗಳು ಪೂರೈಸಿದೆ. ಡಿಸೆಂಬರ್ 27ರಂದು ದೇಶಾದ್ಯಂತದ ಚಲನಚಿತ್ರ ಮಂದಿರಗಳಲ್ಲಿ ಬಿಡುಗಡೆಗೊಂಡ ಈ ಚಿತ್ರ ಪ್ರೇಕ್ಷಕರ ಪ್ರೀತಿ ಗಳಿಸಲು ಯಶಸ್ವಿಯಾಗಿದೆ. ನಿರ್ದೇಶಕ ರಾಜ್ ಮೆಹ್ತಾ ಅವರ ನಿರ್ದೇಶನದಡಿ ಮೂಡಿಬಂದ ಈ ಚಿತ್ರದ ಬಿಡುಗಡೆಗೆ ಪ್ರೇಕ್ಷಕರು ಕಾತರದಿಂದ ಕಾಯುತ್ತಿದ್ದರು. ಈ ಚಿತ್ರದಲ್ಲಿ ಅಕ್ಷಯ್ ಕುಮಾರ್ ಸೇರಿದಂತೆ ಕರೀನಾ ಕಂಪೂರ್ ಖಾನ್, ದಿಲ್ಜೀತ್ ದೊಸಾಂಜ್ ಹಾಗೂ ಕಿಯಾರಾ ಅಡ್ವಾಣಿ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸದ್ಯ ಈ ಚಿತ್ರದ 7 ದಿನಗಳ ಬಾಕ್ಸ್ ಆಫೀಸ್ ಕಲೆಕ್ಷನ್ ಪ್ರಕಟಗೊಂಡಿದ್ದು, ಚಿತ್ರಕ್ಕೆ ಅಭಿಮಾನಿಗಳಿಂದ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ ಎಂದೇ ಹೇಳಬಹುದು.

ಬಾಕ್ಸ್ ಆಫೀಸ್ ಇಂಡಿಯಾ ಬಿಡುಗಡೆಗೊಳಿಸಿರುವ ಅಂಕಿ-ಅಂಶಗಳ ಪ್ರಕಾರ ಬಿಡುಗಡೆಯಾದ ಮೊದಲ ದಿನ ಸುಮಾರು 17.50 ಕೋಟಿ ರೂ. ಗಳಿಸಿದ್ದ ಈ ಚಿತ್ರ, ಎರಡನೇ ದಿನ 21.50 ಕೋಟಿ, ಮೂರನೇ ದಿನ 26 ಕೋಟಿ, ನಾಲ್ಕನೇ ದಿನ 13ಕೋಟಿ, ಐದನೇ ದಿನ 15.50ಕೋಟಿ ಹಾಗೂ ಆರನೇ ದಿನ 22.25ಕೋಟಿ ರೂಪಾಯಿ ಗಳಿಸುವಲ್ಲಿ ಯಶಸ್ವಿಯಾಗಿದೆ. ಅಷ್ಟೇ ಅಲ್ಲ ಏಳನೇ ದಿನವೂ ಕೂಡ ಬಾಕ್ಸ್ ಆಫೀಸ್ ಮೇಲೆ ತನ್ನ ನಾಗಾಲೋಟ ಮುಂದುವರೆಸಿದ್ದು, ಏಳನೇ ದಿನ ಸುಮಾರು 10.25 ಕೋಟಿ ರೂ.ಗಳ ಸಂಪಾದನೆ ಮಾಡಿದೆ. ಒಟ್ಟಾರೆ ಹೇಳುವುದಾದರೆ ಬಿಡುಗಡೆಗೊಂಡ ಏಳನೇ ದಿನಕ್ಕೆ ಈ ಚಿತ್ರ ಸುಮಾರು 126ಕೋಟಿ ರೂ.ಗಳಿಕೆ ಕಂಡಿದೆ.

ಚಿತ್ರದ ಕುರಿತು ಹೇಳುವುದಾದರೆ,  ಆರಂಭದಿಂದ ಚಿತ್ರ ಮುಗಿಯುವವರೆಗೆ ಪ್ರೇಕ್ಷಕರನ್ನು ಕುರ್ಚಿಯಲ್ಲಿ ಕಟ್ಟಿಹಾಕುವಲ್ಲಿ 'ಗುಡ್ ನ್ಯೂಸ್' ಯಶಸ್ವಿಯಾಗಿದೆ ಎಂದೇ ಹೇಳಲಾಗುತ್ತಿದೆ. 'ಕೇಸರಿ' ಚಿತ್ರದಲ್ಲಿ ಅದ್ಭುತ ಅಭಿನಯದ ಮೂಲಕ ತನ್ನ ಅಭಿಮಾನಿಗಳನ್ನು ರಂಜಿಸಿದ ಅಕ್ಷಯ ಕುಮಾರ್, 'ಹೌಸ್ ಫುಲ್-4' ಚಿತ್ರದಲ್ಲಿ ತಮ್ಮ ಸಾಮಾನ್ಯ ಪಾತ್ರದಲ್ಲಿ ಕಂಡುಬಂದಿದ್ದರು. 'ಗುಡ್ ನ್ಯೂಸ್' ಚಿತ್ರದಲ್ಲಿ ಅಕ್ಷಯ್ ಅವರ ನೈಸರ್ಗಿಕ ನಟನೆ ಪ್ರೇಕ್ಷಕರ ಮನ ಗೆದ್ದಿದ್ದು, ಮದುವೆಯ 7 ವರ್ಷಗಳ ಬಳಿಕವೂ ಕೂಡ ತಾಯಿ ಭಾಗ್ಯ ಕಾಣದ ಮಹಿಳೆಯ ಪಾತ್ರಕ್ಕೆ ಕರೀನಾ ಕೂಡ ಜೀವ ತುಂಬಿದ್ದಾರೆ. ಅಕ್ಷಯ್-ಕರೀನಾಗೆ ಹೋಲಿಸಿದರೆ ದಿಲ್ಜೀತ್-ಕಿಯಾರಾಗೆ ಪರದೆಯ ಮೇಲೆ ಕಾಣಿಸಿಕೊಳ್ಳಲು ಸ್ವಲ್ಪ ಕಡಿಮೆ ಅವಕಾಶ ಸಿಕ್ಕಿದ್ದರೂ ಕೂಡ ಚಿತ್ರದ ಹಲವು ದೃಶ್ಯಗಳಲ್ಲಿ ಇವರು ಪ್ರೇಕ್ಷಕರು ಹೊಟ್ಟೆ ಹಿಡಿದು ನಗುವಂತೆ ಮಾಡಿದ್ದಾರೆ ಎನ್ನಲಾಗಿದೆ. ಅಕ್ಷಯ್ ಕುಮಾರ್ ಅವರ ಕುರಿತು ಹೇಳುವುದಾದರೆ, ಅಕ್ಷಯ್ ಪರದೆಗೆ ಎಂಟ್ರಿ ಹೊಡೆದರೆ, ಅವರ ಪಕ್ಕದ ಕಲಾವಿದರ ಮೇಲೆ ಪ್ರೇಕ್ಷರ ಗಮನ ಹರಿಯುವುದೇ ಇಲ್ಲ. ಆದರೆ, ಈ ಚಿತ್ರದಲ್ಲಿ ಅಕ್ಷಯ್ ಉಪಸ್ಥಿತಿಯಲ್ಲಿಯೂ ಕೂಡ ದಿಲ್ಜೀತ್ ದೊಸಾಂಜ ತಮ್ಮ ಅಭಿನಯದ ಮೂಲಕ ಪ್ರೇಕ್ಷಕರ ಮನ ಗೆದ್ದಿದ್ದಾರೆ. ಕಿಯಾರಾ ಅಡ್ವಾಣಿ, ದಿಲ್ಜೀತ್ ಅವರ ಪಂಜಾಬಿ ಪತ್ನಿಯ ಭೂಮಿಕೆಯಲ್ಲಿ ಕಂಡುಬಂದಿದ್ದಾರೆ. ಪಂಜಾಬಿ ಪತ್ನಿಯರ ನಡೆ-ನುಡಿ ಬಾಡಿ ಲ್ಯಾಂಗ್ವೇಜ್ ಅನ್ನು ಉತ್ತಮ ರೀತಿಯಲ್ಲಿ ಪರದೆಯ ಮೇಲೆ ಇಳಿಸುವಲ್ಲಿ ಕಿಯಾರಾ ಬಹುತೇಕ ಯಶಸ್ವಿಯಾಗಿದ್ದಾರೆ.

Trending News