ತಮ್ಮ 'ಚಮಕ್' ಚಿತ್ರಕ್ಕಾಗಿ ಸಾಕಷ್ಟು ತಾಲೀಮು ನಡೆಸುತ್ತಿರುವ ಗೋಲ್ಡನ್ ಸ್ಟಾರ್ ಗಣೇಶ್, ಮುವಾಯ್ ಥಾಯ್ ಕಲಿಯುತ್ತಿದ್ದಾರೆ. ಆದರೆ ವಿಷಯ ಅದಲ್ಲ, ಗಣಿ ಈಗ ಪ್ರಜ್ವಲ್ ಮತ್ತು ದೂದ್ ಪೇಡ ದಿಗಂತ್ ಗೆ ಕಾಲಿನ ಕಿಕ್ ಮೂಲಕ ಕೈಯಲ್ಲಿರುವ ಕಲ್ಲಂಗಡಿ ಹಣ್ಣನ್ನು ಪೀಸ್ ಮಾಡಬೇಕೆಂದು ಫೇಸ್ ಬುಕ್ ಮತ್ತು ಟ್ವಿಟ್ಟರ್ನಲ್ಲಿ ಚಾಲೆಂಜ್ ಮಾಡಿದ್ದಾರೆ.
Hi friends..
Muay Thai kick #challenge tag us on #teepaday #isupportmuaythai @PrajwalDevaraj @diganthmanchale pic.twitter.com/OR10yqeh6u— Ganesh (@Official_Ganesh) October 17, 2017
ಗಣಿ-ಪ್ರಜ್ಜು-ದಿಗ್ಗಿ ಸ್ಯಾಂಡಲ್ವುಡ್ ನಲ್ಲಿ ಬಹಳ ಒಳ್ಳೆಯ ಸ್ನೇಹಿತರು. ನಟ ಗಣೇಶ್ ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಗೆಳೆಯರಿಗೆ ಹೀಗೊಂದು ಬಹಿರಂಗ ಸವಾಲೆಸೆದಿದ್ದಾರೆ. ಗಣೇಶ್ ಮುವಾಯ್ ಥಾಯ್ ಯನ್ನು ಸತತ ಮೂರು ತಿಂಗಳಿನಿಂದ ಅಭ್ಯಾಸ ಮಾಡಿದ್ದಾರೆ.
Good morning all😊
Muay Thai #padtraining
4 months old video. pic.twitter.com/PWCo0fXRtR— Ganesh (@Official_Ganesh) October 3, 2017
ಕಾಲಿನಲ್ಲಿ ಕಿಕ್ ಮಾಡುವ ಮುಖಾಂತರ ಕೈಯಲ್ಲಿರುವ ಕಲ್ಲಂಗಡಿ ಹಣ್ಣನ್ನು ಪ್ರಜ್ಜಲ್ ಹಾಗೂ ದೂದ್ ಪೇಡ ದಿಗಂತ್ ಹೊಡೆಯಬೇಕು ಎಂದು ಹೇಳುರುವ ಗಣೇಶ್, ಅಭಿಮಾನಿಗಳೂ ಕೂಡ ಈ ಚಾಲೆಂಜ್ ಸ್ವೀಕರಿಸಬಹುದು ಎಂದು ತಿಳಿಸಿದ್ದಾರೆ.
ಗಣಿಯ ಈ ಚಾಲೆಂಜ್ ಅನ್ನು ಪ್ರಜ್ಜು-ದಿಗ್ಗಿ ಸ್ವೀಕರಿಸುವರೇ? ಎಂಬುದನ್ನು ಕಾದು ನೋಡಬೇಕಿದೆ.