Godzilla x Kong : ಸದ್ದು ಮಾಡಲು ರೆಡಿಯಾದ ಗಾಡ್ಜಿಲ್ಲಾ x ಕಾಂಗ್ ದಿ ನ್ಯೂ ಎಂಪೈರ್..! ಸಿನಿಮಾ ಟ್ರೇಲರ್‌ ಗೆ ಫ್ಯಾನ್ಸ್‌ ಫಿದಾ

Godzilla x Kong: The New Empire : ಆಡಮ್‌ ವಿಂಗಾರ್ಡ್‌ ನಿರ್ದೇಶನದ ಗಾಡ್ಜಿಲ್ಲಾ x ಕಾಂಗ್ ದಿ ನ್ಯೂ ಎಂಪೈರ್ ಸಿನಿಮಾದ ಚಿತ್ರೀಕರಣ ಸಂಪೂರ್ಣ ಮುಗಿದಿದ್ದು, 2024 ಏಪ್ರಿಲ್‌ 24ಕ್ಕೆ ತೆರ ಕಾಣಲಿದೆ.   

Written by - Yashaswini V | Last Updated : Dec 15, 2023, 05:27 PM IST
  • ತೆರೆ ಕಾಣಲು ಸಜ್ಜಾದ ಗಾಡ್ಜಿಲ್ಲಾ x ಕಾಂಗ್ ದಿ ನ್ಯೂ ಎಂಪೈರ್
  • ಗಾಡ್ಜಿಲ್ಲಾ vs ಕಾಂಗ್ ಸಿನಿಮಾದ ಉತ್ತರಭಾಗ
  • 2024 ಏಪ್ರಿಲ್‌ 24ರಂದು ಸಿನಿಮಾ ಬಿಡುಗಡೆ
Godzilla x Kong : ಸದ್ದು ಮಾಡಲು ರೆಡಿಯಾದ ಗಾಡ್ಜಿಲ್ಲಾ x ಕಾಂಗ್ ದಿ ನ್ಯೂ ಎಂಪೈರ್..! ಸಿನಿಮಾ ಟ್ರೇಲರ್‌ ಗೆ ಫ್ಯಾನ್ಸ್‌ ಫಿದಾ title=

Godzilla x Kong Trailer: ಹಾಲಿವುಡ್‌ ಸಿನಿಮಾಗಲು ಸಿನಿಮಾ ರಂಗಕ್ಕೆ ತನ್ನದೇ ಆದ ಕೊಡುಗೆ ನೀಡುತ್ತಲೇ ಬರುತ್ತಿವೆ. ಹೊಸ ಹೊಸ ಆವಿಷ್ಕಾರಗಳನ್ನು ಮಾಡುತ್ತ ಜನರ ಮೆಚ್ಚುಗೆಯನ್ನು ಗಳಿಸಿದೆ. 2021 ರಲ್ಲಿ ಆಡಮ್ ವಿಂಗಾರ್ಡ್ ನಿರ್ದೇಶಿಸಿದ್ದ ಗಾಡ್ಜಿಲ್ಲಾ vs ಕಾಂಗ್ ಸಿನಿಮಾ ಭಾರಿ ಯಶಸ್ಸು ಕಂಡಿತ್ತು. ಕೋವಿಡ್‌ ಟೈಮ್‌ನಲ್ಲಿ ಬಿಡುಗಡಯಾಗಿದ್ದರು ಈ ಸಿನಿಮಾ ವಿಶ್ವದಾದಂತ್ಯ 470 ಮಿಲಿಯನ್‌ ಡಾಲರ್‌ ಗಳಿಸತ್ತು. ಸಿನಿಮಾ ಯಶಸ್ಸಿನ ಬೆನ್ನಲ್ಲೇ ನಿರ್ದೇಶಕ ಆಡಮ್‌ ವಿಂಗಾರ್ಡ್‌  ಗಾಡ್ಜಿಲ್ಲಾ vs ಕಾಂಗ್ ಸಿನಿಮಾದ ಉತ್ತರಭಾಗವನ್ನು ನಿರ್ಮಿಸಲು ಮುಂದಾಗಿದ್ಧಾರೆ. ಈಗಾಗಲೆ ನಿರ್ಮಾಣ ಹಂತವು  ಪೂರ್ಣಗೊಂಡಿದ್ದು ಚಿತ್ರ ತೆರೆ ಕಾಣುವುದು ಬಾಕಿಯಿದೆ.

ವಾರ್ನರ್‌ ಬ್ರದರ್ಸ್‌ ಪಿಕ್ಚರ್ಸ್‌ ಮತ್ತು ಲೆಜೆಂಡರಿ ಮಾರ್ಚ್ 2022 ರಲ್ಲಿ ಉತ್ತರಭಾಗವನ್ನು ಘೋಷಿಸಿತು.ಜುಲೈ 2022 ರಲ್ಲಿ ಕ್ವೀನ್ಸ್‌ಲ್ಯಾಂಡ್‌ನ ಗೋಲ್ಡ್ ಕೋಸ್ಟ್‌ನಲ್ಲಿ ಪ್ರಾರಂಭವಾಗಿದ್ದ ಚಿತ್ರೀಕರಣವು ನವೆಂಬರ್ 2022 ರಲ್ಲಿ ಮುಕ್ತಾಯವಾಗಿದೆ. ಈ ಸಿನಿಮಾಕೆ  ಗಾಡ್ಜಿಲ್ಲಾ x ಕಾಂಗ್ ದಿ ನ್ಯೂ ಎಂಪೈರ್ ಎಂಬ ಶೀರ್ಷಿಕೆಯನ್ನು ನೀಡಿದ್ದು, 2024ರ ಏಪ್ರಿಲ್‌ 24ರಲ್ಲಿ ಸಿನಿಮಾ ಬಿಡುಗಡೆಯಾಗಲು ಸಜ್ಜಾಗಿದೆ. 

ಇದನ್ನೂ ಓದಿ: ಬಿಗ್ ಬಾಸ್ ಕನ್ನಡನಲ್ಲಿ ಅತಿ ಹೆಚ್ಚು ಫಾಲೋವರ್ಸ್ ಹೊಂದಿರುವ ಸ್ಪರ್ಧಿ ಯಾರು ಗೊತ್ತಾ?

ಈ ಸಿನಿಮಾವನ್ನು ಅಮೇರಿಕನ್‌ ಫಿಲ್ಮ್‌ ಸ್ಟುಡಿಯೋ ಲೆಜೆಂಡರಿ ಪಿಕ್ಚರ್ಸ್‌ ನಿರ್ಮಿಸಿದ್ದು, ವಾರ್ನರ್‌ ಬ್ರದರ್ಸ್‌ ಪಿಕ್ಚರ್‌ ವತಿಯಿಂದ ವಿತರಿಸಲಾಗಿದೆ.ಗಾಡ್ಜಿಲ್ಲಾ vs ಕಾಂಗ್‌ ಸಿನಿಮಾದಲ್ಲಿ ನಟಿಸಿದ್ದ ಡ್ಯಾನ್‌ ಸ್ಟೀವನ್ಸ್‌, ರೆಗೆಕ್ಕಾ ಹಾಲ್‌, ಬ್ರಿಯಾನ್‌ ಟೈರಿ ಹೆನ್ರಿ, ಕೈಲೀ ಹಾಟಲ್‌ ಮುಂತಾದವರು ತಮ್ಮ ಪಾತ್ರಗಳನ್ನು ಪುನಾರವರ್ತಿಸಲಿದ್ಧಾರೆ.

ಗಾಡ್ಜಿಲ್ಲಾ vs ಕಾಂಗ್‌ ಮತ್ತು 2019ರಲ್ಲಿ ತೆರೆಕಂಡ ಮೈಕಲ್‌ ಡೊಗರ್ಟಿ ನಿರ್ದೇಶನದ ಗಾಡ್ಜಿಲ್ಲಾ ಕಿಂಗ್ ಆಫ್ ದಿ ಮಾನ್ಸ್ಟರ್ಸ್ ಸಿನಿಮಾಗಳ ಕಥೆಯನ್ನು ಆಧರಿಸಿ ಗಾಡ್ಜಿಲ್ಲಾ x ಕಾಂಗ್ ದಿ ನ್ಯೂ ಎಂಪೈರ್ ಸಿನಿಮಾವನ್ನು ನಿರ್ಮಿಸಿಲಾಗಿದೆ. ಇದು ಮಾನ್ಸ್ಟರ್‌ವರ್ಸ್‌ನಲ್ಲಿ ನಿರ್ಮಾಣಗೊಂಡ ಐದನೇ ಚಲನಚಿತ್ರವಾಗಿದ್ದು,ಗಾಡ್ಜಿಲ್ಲಾ ಫ್ರ್ಯಾಂಚೈಸಿಯ 38 ನೇ ಚಿತ್ರ ಹಾಗು ಕಿಂಗ್ ಕಾಂಗ್ ಫ್ರ್ಯಾಂಚೈಸ್‌ನಲ್ಲಿ 13 ನೇ ಚಿತ್ರ ಮತ್ತು ಅಮೇರಿಕನ್ ಫಿಲ್ಮ್ ಸ್ಟುಡಿಯೊದಿಂದ ಸಂಪೂರ್ಣವಾಗಿ ನಿರ್ಮಿಸಲಾದ ಐದನೇ ಗಾಡ್ಜಿಲ್ಲಾ ಚಲನಚಿತ್ರವಾಗಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News