ಫೆಬ್ರವರಿಯಲ್ಲಿ ರಶ್ಮಿಕಾ ಮಂದಣ್ಣ ಜೊತೆ ನಿಶ್ಚಿತಾರ್ಥ ಫಿಕ್ಸ್..? ಮದುವೆ ಸುದ್ದಿಗೆ ಪ್ರತಿಕ್ರಿಯಿಸಿದ ವಿಜಯ್‌ ದೇವರಕೊಂಡ!

Rashmika-Vijay Engagement: ನ್ಯಾಷನಲ್ ಕ್ರಷ್‌ ರಶ್ಮಿಕಾ ಮಂದಣ್ಣ ಹಾಗೂ ರೌಡಿಬಾಯ್‌ ವಿಜಯ್‌ ದೇವರಕೊಂಡ ಇಬ್ಬರೂ ಫೆಬ್ರವರಿಯಲ್ಲಿ ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದಾರೆ ಎನ್ನಲಾಗಿತ್ತು.. ಇದೀಗ ಸುದ್ದಿಗೆ ಕ್ಲಾರಿಟಿ ಸಿಕ್ಕಿದೆ..  

Written by - Savita M B | Last Updated : Jan 20, 2024, 09:37 AM IST
  • ಟಾಲಿವುಡ್ ಆನ್-ಸ್ಕ್ರೀನ್ ಜೋಡಿ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ನಿಜ ಜೀವನದಲ್ಲೂ ಜೋಡಿಯಾಗಲಿದ್ದಾರೆ
  • ಈ ಬಗ್ಗೆ ಇತ್ತೀಚೆಗೆ ವಿಜಯ್ ದೇವರಕೊಂಡ ಮಾತನಾಡಿದ್ದಾರೆ
  • ಸದ್ಯ ಇಬ್ಬರೂ ತಮ್ಮ ತಮ್ಮ ವೃತ್ತಿಯಲ್ಲಿ ಬ್ಯುಸಿಯಾಗಿದ್ದಾರೆ.
ಫೆಬ್ರವರಿಯಲ್ಲಿ ರಶ್ಮಿಕಾ ಮಂದಣ್ಣ ಜೊತೆ ನಿಶ್ಚಿತಾರ್ಥ ಫಿಕ್ಸ್..? ಮದುವೆ ಸುದ್ದಿಗೆ ಪ್ರತಿಕ್ರಿಯಿಸಿದ ವಿಜಯ್‌ ದೇವರಕೊಂಡ!  title=

Rashmika Mandanna-Vijay Devarakonda: ಟಾಲಿವುಡ್ ಆನ್-ಸ್ಕ್ರೀನ್ ಜೋಡಿ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಮಂದಣ್ಣ ನಿಜ ಜೀವನದಲ್ಲೂ ಜೋಡಿಯಾಗಲಿದ್ದಾರೆ ಎಂಬ ವರದಿಗಳು ಬಂದಿವೆ. ವಿಜಯ್ ಮತ್ತು ರಶ್ಮಿಕಾ ಫೆಬ್ರವರಿಯಲ್ಲಿ ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದಾರೆ ಎಂದು ಇತ್ತೀಚೆಗೆ ರಾಷ್ಟ್ರೀಯ ಮಾಧ್ಯಮವೊಂದು ವರದಿ ಮಾಡಿತ್ತು.. ಸದ್ಯ ಈ ಸುದ್ದಿ ವೈರಲ್ ಆಗಿದೆ.

ಈ ಬಗ್ಗೆ ಇತ್ತೀಚೆಗೆ ವಿಜಯ್ ದೇವರಕೊಂಡ ಮಾತನಾಡಿದ್ದಾರೆ... ಸಂದರ್ಶನವೊಂದರಲ್ಲಿ ವಿಜಯ್ ಈ ಸುದ್ದಿಗೆ ಪ್ರತಿಕ್ರಿಯಿಸಿದ್ದಾರೆ.. “ಮಾಧ್ಯಮದವರು ಎರಡು ವರ್ಷಕ್ಕೊಮ್ಮೆ ಮದುವೆಯಾಗುತ್ತಿದ್ದಾರೆ... ಎನ್ನುವ ವದಂತಿಯನ್ನು ಸೃಷ್ಟಿಸುತ್ತಿರುತ್ತಾರೆ... ಅವರೆಲ್ಲರೂ ನನ್ನ ಮದುವೆಗಾಗಿ ಕಾಯುತ್ತಿದ್ದಾರೆಂದು ಕಾಣಿಸುತ್ತದೆ.. ಅದಕ್ಕಾಗಿಯೇ ಅವರು ಈ ಫೆಬ್ರವರಿಯಲ್ಲಿ ನನ್ನನ್ನು ತಳುಕುಹಾಕಿದ್ದಾರೆ... ಆದರೆ ಅವುಗಳಲ್ಲಿ ಯಾವುದೇ ಸತ್ಯಾಂಶವಿಲ್ಲ" ಎಂದಿದ್ದಾರೆ..

ಇದನ್ನೂ ಓದಿ-BBK 10: ಈ ಸ್ಪರ್ಧಿಗೆ ಬಿತ್ತು ಬರೋಬ್ಬರಿ 72 ಲಕ್ಷ ವೋಟ್! ಈ ಜನಮೆಚ್ಚಿದ ‘ಮಣ್ಣಿನ ಮಗನ’ ಪಾಲಾಗುತ್ತಾ ‘ಬಿಗ್ ಬಾಸ್ ಕಿರೀಟ’!

ಸದ್ಯ ಇಬ್ಬರೂ ತಮ್ಮ ತಮ್ಮ ವೃತ್ತಿಯಲ್ಲಿ ಬ್ಯುಸಿಯಾಗಿದ್ದಾರೆ. ವಿಜಯ್ ದೇವರಕೊಂಡ 'ಫ್ಯಾಮಿಲಿ ಸ್ಟಾರ್' ಸಿನಿಮಾದಲ್ಲಿ ನಟಿಸುತ್ತಿದ್ದು.. ಗೀತ ಗೋವಿಂದಂ ಚಿತ್ರ ನೀಡಿದ ಪರಶುರಾಮ್ ಈ ಚಿತ್ರವನ್ನು ನಿರ್ದೇಶಿಸುತ್ತಿದ್ದಾರೆ. ಸದ್ಯ ಈ ಸಿನಿಮಾದ ಶೂಟಿಂಗ್ ಶರವೇಗದಲ್ಲಿ ಸಾಗುತ್ತಿದೆ. ಇದೇ ಸಂಕ್ರಾಂತಿಯಂದೇ ಬಿಡುಗಡೆಯಾಗಬೇಕಿದ್ದ ಈ ಚಿತ್ರ ಬೇಸಿಗೆಗೆ ಮುಂದೂಡಿಕೆಯಾಗಿದೆ. ಇದರ ನಂತರ ಅವರು ಗೌತಮ್ ತಿನ್ನನೂರಿ ಅವರೊಂದಿಗೆ ಪ್ಯಾನ್ ಇಂಡಿಯಾ ಪ್ರಾಜೆಕ್ಟ್ VD13 ಅನ್ನು ಮಾಡಲಿದ್ದಾರೆ.

ರಶ್ಮಿಕಾಗೆ ಸಂಬಂಧಿಸಿದಂತೆ, ಅವರು ಇತ್ತೀಚೆಗೆ 'ಅನಿಮಲ್' ಚಿತ್ರದ ಮೂಲಕ ಭರ್ಜರಿ ಮಿಂಚಿದ್ದಾರೆ.. ಪ್ರಸ್ತುತ ಪುಷ್ಪ 2 ನಂತಹ ಮತ್ತೊಂದು ಪ್ರತಿಷ್ಠಿತ ಪ್ಯಾನ್ ಇಂಡಿಯಾ ಚಿತ್ರದಲ್ಲಿ ನಟಿಸುತ್ತಿದ್ದಾರೆ. ತೆಲುಗಿನ ‘ದಿ ಗರ್ಲ್‌ಫ್ರೆಂಡ್’ ಮತ್ತು ರೇನ್‌ಬೋ ಸಿನಿಮಾಗಳನ್ನೂ ಮಾಡುತ್ತಿದ್ದಾರೆ. ತಮಿಳಿನಲ್ಲಿ ಧನುಷ್ ಜೊತೆಗಿನ ಸಿನಿಮಾ ಹಾಗೂ ಹಿಂದಿಯಲ್ಲಿ ‘ಚಾವಾ’ ಎಂಬ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಇಷ್ಟು ಬ್ಯುಸಿ ಕೆರಿಯರ್ ನಲ್ಲಿ ಮದುವೆ ಆಗೋದು ಯಾವಾಗ ಎನ್ನುವುದನ್ನು ಕಾದುನೋಡಬೇಕಿದೆ.. 

ಇದನ್ನೂ ಓದಿ-ಶ್ರೀರಾಮನೂ ಮಾಂಸಾಹಾರಿ..! ʼಜೈ ಶ್ರೀರಾಮ್‌ʼ ಎಂದು ಕ್ಷಮೆ ಕೇಳಿದ ನಟಿ ನಯನತಾರ

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News