Actress Tara : ಸ್ಯಾಂಡಲ್ವುಡ್ ಹಿರಿಯ ನಟಿ ತಾರಾ ವಿರುದ್ಧ FIR!

ActressTara ನಟಿ ತಾರಾ ಎಂದರೆ ಎಲ್ಲರಿಗೂ ಅಚ್ಚುಮೆಚ್ಚು ಸ್ಯಾಂಡಲ್​​ವುಡ್​ನಲ್ಲಿ ಹೆಚ್ಚಾಗಿ  ಪೋಷಕ ಪಾತ್ರಗಳ ಮೂಲಕ ಅವರು ಗಮನ ಸೆಳೆದಿದ್ದಾರೆ.‌ ಇದೀಗ ನಟಿಯ ವಿರುದ್ದ ಎಫ್ ಐ ಆರ್ ದಾಖಲಾಗಿದೆ.

Written by - Zee Kannada News Desk | Last Updated : Apr 26, 2023, 11:09 AM IST
  • ಹಿರಿಯ ನಟಿಯ ವಿರುದ್ದ ಎಫ್ ಐ ಆರ್ ದಾಖಲು
  • ಸಿನಿಮಾ, ರಿಯಾಲಿಟಿ ಶೋಗಳಲ್ಲಿ ಬ್ಯೂಸಿಯಾಗಿರುವ ನಟಿ ತಾರಾ
  • ಸಿನಿಮಾ ಮಾತ್ರವಲ್ಲದೇ ರಾಜಕೀಯ ಕ್ಷೇತ್ರದಲ್ಲೂ ಮುಂದಿರುವ ಹಿರಿಯ ನಟಿ
Actress Tara : ಸ್ಯಾಂಡಲ್ವುಡ್ ಹಿರಿಯ ನಟಿ ತಾರಾ ವಿರುದ್ಧ FIR! title=

ಬೆಂಗಳೂರು: ನಟಿ ತಾರಾ ಎಂದರೆ ಎಲ್ಲರಿಗೂ ಅಚ್ಚುಮೆಚ್ಚು ಸ್ಯಾಂಡಲ್​​ವುಡ್​ನಲ್ಲಿ ಹೆಚ್ಚಾಗಿ  ಪೋಷಕ ಪಾತ್ರಗಳ ಮೂಲಕ ಅವರು ಗಮನ ಸೆಳೆದಿದ್ದಾರೆ.‌ ಇದೀಗ ತಾರಾ ಅವರು ತಮ್ಮ ವೈಯಕ್ತಿಕ ಕೆಲಸಗಳಿಗೆ ಸರಕಾರಿ ಕಾರನ್ನು ಬಳಸಿರುವ ಆರೋಪದಡಿಯಲ್ಲಿ ನಟಿಯ ವಿರುದ್ದ ಎಫ್ ಐ ಆರ್ ದಾಖಲಾಗಿದೆ.

ಸರ್ಕಾರಿ ಕಾರು ಬಳಸಿರುವ ವಿಡೀಯೊ ಒಂದು ಹೊರ ಬಿದ್ದಿದೆ.  ಕೆಆರ್ ಎಸ್ ಪಕ್ಷದ ಕಾರ್ಯಕರ್ತರು ನಟಿಯ ವಿರುದ್ಧ ಕ್ರಮಕ್ಕೆ  ಒತ್ತಾಯಿಸಿದ್ದಾರೆ.  ವಿಡಿಯೋ ಆಧರಿಸಿ  ದೂರು ದಾಖಲಿಸಲಾಗಿದೆ ಎನ್ನಲಾಗುತ್ತಿದೆ.

ಇದನ್ನೂ ಓದಿ: Amala Paul Lip Kiss : ಹೆಬ್ಬುಲಿ ನಟಿ ಅಮಲಾ ಪೌಲ್​ ಲಿಪ್​ ಕಿಸ್​ ಫೋಟೋ ವೈರಲ್‌

ದೂರು ದಾಖಲಾದ ಹಿನ್ನಲೆ ತಾರಾ ಅವರ ಮನೆ ಬಳಿ ಪರಿಶೀಲನೆಯನ್ನೂ ನಡೆಸಲಾಗಿದೆ. ಅಧಿಕಾರಗಳು ಪರೀಶಿಲನೆ ನಡೆಸಲು ನಟಿ ಮನೆ ಬಳಿ ಹೋದಾಗ ಕಾರು ಕಂಡು ಬಂದಿಲ್ಲ. ಸದ್ಯ ನಗರದ  ಪುಟ್ಟೇನಹಳ್ಳಿ ಪೊಲೀಸರು ಪ್ರಕರಣ ಸಂಬಂಧ ತನಿಖೆ ನಡೆಸುತ್ತಿದ್ದಾರೆ. 

ಸದ್ಯ ಹಿರಿಯ ನಟಿ ತಾರಾ ಅವರು ಸಿನಿಮಾ, ರಿಯಾಲಿಟಿ ಶೋಗಳಲ್ಲಿ ಬ್ಯೂಸಿಯಾಗಿದ್ದಾರೆ.  ನಟಿ ಒಂದಷ್ಟು ಕಾಲಮಾನದಲ್ಲಿ ಸಹ ನಟಿಯಾಗಿ, ಬಳಿಕ  ಪೋಷಕ ನಟಿಯಾಗಿ ಹೆಚ್ಚು ಕಾಣಿಸಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ: Samantha Viral Video: ಇಂಗ್ಲಿಷ್ ಮಾತನಾಡಿ ಟ್ರೋಲ್ ಆದ ನಟಿ ಸಮಂತಾ

ನಟಿಯ ಕಾನೂರು ಹೆಗ್ಗಡಿತಿ, ಹಸೀನಾ, ಹೀಗೆ ಹಲವು ಸಿನಿಮಾಗಳಿಗೆ ರಾಷ್ರೀಯ ಪ್ರಶಸ್ತಿಗಳು ಲಭಿಸಿವೆ. ಇವರು ಮಾಡಿದ ಅನೇಕ ಸಿನಿಮಾಗಳು ಸೂಪರ್‌ ಹಿಟ್‌ ಆಗಿ ಪ್ರದಶನಗೊಂಡಿವೆ. ಸಿನಿಮಾ ಮಾತ್ರವಲ್ಲದೇ ರಾಜಕೀಯ ಕ್ಷೇತ್ರದಲ್ಲೂ ಮುಂದಿದ್ದಾರೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

 

Trending News