'Thank God In Controversy': ಚಿತ್ರಗುಪ್ತನ ಪಾತ್ರವನ್ನು ತಮಾಷೆಯಾಗಿ ಚಿತ್ರಿಸಿದ್ದಕ್ಕಾಗಿ ನಟ ಅಜಯ್ ದೇವಗನ್ ಸೇರಿದಂತೆ ಹಲವರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಅಜಯ್ ದೇವಗನ್ ಅವರ ಥ್ಯಾಂಕ್ ಗಾಡ್ ಚಿತ್ರದಲ್ಲಿ ಚಿತ್ರಗುಪ್ತನ ಪಾತ್ರವನ್ನು ತಮಾಷೆಯಾಗಿ ಚಿತ್ರಿಸಿರುವ ಆರೋಪದ ಮೇಲೆ ಅಖಿಲ ಭಾರತೀಯ ಕಾಯಸ್ಥ ಮಹಾಸಭಾ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಈ ಹಿನ್ನೆಲೆ, ಉತ್ತರ ಪ್ರದೇಶದ ಇಟಾವಾದಲ್ಲಿರುವ ಸಿವಿಲ್ ಲೈನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಖಿಲ ಭಾರತೀಯ ಕಾಯಸ್ಥ ಮಹಾಸಭಾದ ಇಟಾವಾ ಘಟಕದ ಅಧ್ಯಕ್ಷ ನರೇಂದ್ರ ರೈಜಾಡಾ ಅವರು ಈ ಆನ್ಲೈನ್ ಎಫ್ಐಆರ್ ದಾಖಲಿಸಿದ್ದಾರೆ. ನರೇಂದ್ರ ರೈಜಾಡಾ ಅವರ ದೂರಿನ ಮೇರೆಗೆ ನಟ ಅಜಯ್ ದೇವಗನ್ ಸೇರಿದಂತೆ ಹಲವರ ವಿರುದ್ಧ ಪ್ರಕರಣ ದಾಖಲಾಗಿದೆ. ಥ್ಯಾಂಕ್ಗಾಡ್ ಚಿತ್ರದಲ್ಲಿ ಚಿತ್ರಗುಪ್ತನನ್ನು ವಿದೂಷಕನಂತೆ ಚಿತ್ರಿಸಿ ಅಸಭ್ಯ ಮತ್ತು ಅವಹೇಳನಕಾರಿ ಭಾಷೆಯ ಬಳಕೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿರುವುದರ ಕುರಿತು ಕಾಯಸ್ಥ ಮಹಾಸಭಾ ಪ್ರಕರಣವನ್ನು ದಾಖಲಿಸಿದೆ ಎಂದು ರೈಜಾಡಾ ಹೇಳಿದ್ದಾರೆ.
ಇದನ್ನೂ ಓದಿ-Urfi Javed Video : ಉರ್ಫಿಯ ಈ ವಿಚಿತ್ರ ಅವತಾರ ವರ್ಣಿಸಲು ಪದಗಳೇ ಸಿಗ್ತಿಲ್ಲ.!
ಚಿತ್ರದ ನಿರ್ದೇಶಕ ಇಂದರ್ ಕುಮಾರ್, ನಿರ್ಮಾಪಕ ಆನಂದ್ ಪಂಡಿತ್, ನಟ ಅಜಯ್ ದೇವಗನ್, ನಟಿ ರಾಕುಲ್ ಪ್ರೀತ್ ಸಿಂಗ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಅವರು ಹೇಳಿದ್ದಾರೆ. ಚಿತ್ರ ಪ್ರದರ್ಶನವನ್ನು ನಿಷೇಧಿಸುವ ಮೂಲಕ ಚಿತ್ರಗುಪ್ತ ದೇವರನ್ನು ಅವಮಾನಿಸುವವರ ವಿರುದ್ಧ ಕ್ರಮಕ್ಕೆ ಎಫ್ಐಆರ್ ನಲ್ಲಿ ಒತ್ತಾಯಿಸಲಾಗಿದೆ.
ಇದನ್ನೂ ಓದಿ-ಗಾಯಕ ಅರ್ಮಾನ್ ಮಲಿಕ್ ತಂದೆಗೆ ಐಷಾರಾಮಿ ಬಂಗಲೆ ಮಾರಿದ ಅಕ್ಷಯ್ ಕುಮಾರ್! ಬೆಲೆ ಎಷ್ಟು ಗೊತ್ತಾ?
ಥ್ಯಾಂಕ್ಗಾಡ್ ಚಿತ್ರದ ಟ್ರೈಲರ್ ಈಗಾಗಲೇ ಬಿಡುಗಡೆಯಾಗಿದೆ. ಅಕ್ಟೋಬರ್ನಲ್ಲಿ ದೀಪಾವಳಿಯಂದು ಚಿತ್ರ ಬಿಡುಗಡೆಯಾಗಲಿದೆ. ಚಿತ್ರಗುಪ್ತನು ಮನುಷ್ಯರ ಒಳ್ಳೆಯ ಮತ್ತು ಕೆಟ್ಟ ಕಾರ್ಯಗಳ ಲೆಕ್ಕ ಇಡುತ್ತಾನೆ ಎಂದು ಮಹಾಸಭಾ ಹೇಳುತ್ತದೆ. ಆದರೆ ಈ ಚಿತ್ರದಲ್ಲಿ ಅವರನ್ನು ವಿದೂಷಕನಂತೆ ತೋರಿಸಲಾಗಿದೆ. ನಿರ್ದೇಶಕ ಇಂದರ್ ಕುಮಾರ್, ನಿರ್ಮಾಪಕರಾದ ಆನಂದ್ ಪಂಡಿತ್, ಭೂಷಣ್ ಕುಮಾರ್, ಅಶೋಕ್ ಠಾಕೇರಿಯಾ, ಕೃಷ್ಣ ಕುಮಾರ್, ಸುನಿಲ್ ಖೇತ್ರಪಾಲ್ ಹಾಗೂ ಚಿತ್ರದ ನಾಯಕ ಅಜಯ್ ದೇವಗನ್ ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ನಟಿ ರಾಕುಲ್ ಪ್ರೀತ್ ಸಿಂಗ್ ಅವರ ಹೆಸರುಗಳನ್ನು ಎಫ್ಐಆರ್ನಲ್ಲಿ ಸೇರಿಸಲಾಗಿದೆ.
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.