ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾ ವಿರುದ್ಧ ಎಫ್ಐಆರ್ ದಾಖಲು

ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾ ವಿರುದ್ಧ ಹಣ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್ಐಆರ್ ದಾಖಲಾಗಿದೆ. 

Last Updated : Feb 24, 2019, 02:43 PM IST
ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾ ವಿರುದ್ಧ ಎಫ್ಐಆರ್ ದಾಖಲು title=

ನವದೆಹಲಿ: ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾ ವಿರುದ್ಧ ಹಣ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಫ್ಐಆರ್ ದಾಖಲಾಗಿದೆ. 

ಕಳೆದ ವರ್ಷ, ಸೆಪ್ಟೆಂಬರ್ 30, 2018ರಂದು ಸೋನಾಕ್ಷಿ ಸಿನ್ಹಾ ದೆಹಲಿಯಲ್ಲಿ ನಡೆಯಲಿದ್ದ ಕಾರ್ಯಕ್ರಮವೊಂದಕ್ಕೆ ಸೆಲೆಬ್ರಟಿಯಾಗಿ ಬರಬೇಕಿತ್ತು. ಕಂಪನಿಯೊಂದರ ಜೊತೆ ದೀಪಕ್ ಒಪ್ಪಂದ ಮಾಡಿಕೊಂಡಿದ್ದರು. ಆ ಕಂಪನಿ ಮಾಲೀಕರು ಸೋನಾಕ್ಷಿ ಜೊತೆ ಮಾತುಕತೆ ನಡೆಸಿ ಕಾರ್ಯಕ್ರಮಕ್ಕೆ ಭಾಗವಹಿಸುವ ಬಗ್ಗೆ ಸೋನಾಕ್ಷಿ ವೀಡಿಯೋ ಒಂದನ್ನು ಕೂಡ ಪೋಸ್ಟ್ ಮಾಡಿದ್ದರು. ಒಪ್ಪಂದದಂತೆ 37 ಲಕ್ಷ ರೂ. ಗಳನ್ನು ಕಂಪನಿ ಸೋನಾಕ್ಷಿ ಸಿನ್ಹಾ ಅವರ ಖಾತೆಗೆ ಹಾಕಿತ್ತು. ಆದರೆ ಸೋನಾಕ್ಷಿ ಆ ಕಾರ್ಯಕ್ರಮದಲ್ಲಿ ಭಾಗವಹಿಸಲೇ ಇಲ್ಲ.

ಈ ಸಂಬಂಧ ನವೆಂಬರ್ 24, 2018ರಲ್ಲಿ ದೀಪಕ್ ದೂರು ಸಲ್ಲಿಸಿದ್ದರು. ಈ ಬಗ್ಗೆ ಮಾಹಿತಿ ನೀಡಿರುವ ಡಿಎಸ್ಪಿ ಮೊರಾದಾಬಾದ್ ಗಜರಾಜ್ ಸಿಂಗ್, "ನಟಿ ಸೋನಾಕ್ಷಿ ಸಿನ್ಹಾ, ಅಭಿಷೇಕ್ ಸಿನ್ಹಾ, ಮಾಳ್ವಿಕಾ ಪಂಜಾಬಿ, ಧುಮಿಲ್ ಠಕ್ಕರ್ ಮತ್ತು ಈದ್ಗಾರ್ ಸೇರಿದಂತೆ ಐವರ ವಿರುದ್ಧ ಎಫ್ಐ ಆರ್ ದಾಖಲಾಗಿದೆ ಎಂದು ಎಎನ್ಐ ಗೆ ತಿಳಿಸಿದ್ದಾರೆ.
 

Trending News