ಕೊನೆಗೂ ಪ್ರಿಯಾಂಕಾ ಚೋಪ್ರಾಗೆ ಸಿಕ್ಕನೊಬ್ಬ ಸಖ! ಯಾರಂತೀರಾ? ಇಲ್ಲಿದೆ ಪೂರ್ಣ ವಿವರ

    

Last Updated : Jun 4, 2018, 08:27 PM IST
ಕೊನೆಗೂ ಪ್ರಿಯಾಂಕಾ ಚೋಪ್ರಾಗೆ ಸಿಕ್ಕನೊಬ್ಬ ಸಖ! ಯಾರಂತೀರಾ? ಇಲ್ಲಿದೆ ಪೂರ್ಣ ವಿವರ title=

ಮುಂಬೈ: ಬಾಲಿವುಡ್ ಬೆಡಗಿ ಹಾಗೂ ಮಾಜಿ ವಿಶ್ವಸುಂದರಿ ಪ್ರಿಯಾಂಕಾ ಚೋಪ್ರಾ ಈವರೆಗೆ ಎಲ್ಲರಿಗೂ ತಿಳಿದಿರುವಂತೆ ಮೋಸ್ಟ್ ಬ್ಯಾಚುಲರ್ ನಟಿ ಎನ್ನುವುದು. ಆದರೆ ನಾವು ಈಗ ನಿಮಗೆ ಹೇಳುತ್ತಿರುವುದು ಈಗ ಬ್ಯಾಚುಲರ್ ಕುರಿತಾದ ವಿಷಯವಲ್ಲ ಬದಲಾಗಿ ಈ ನಟಿ ಹುಡುಕಿಕೊಂಡ ಸಖ ನ ಬಗ್ಗೆ.

ಹೌದು, ನಿಮಗೆ ಈ ಸಂಗತಿ ಆಶ್ಚರ್ಯವಲ್ಲವೇ? ಹಾಗಾದರೆ ನಿಮ್ಮ ಪ್ರಕಾರ ಈಕೆಯ ಸಖ ಬಾಲಿವುಡ್ ನಲ್ಲಿ ಯಾರಿರಬಹುದು ಎನ್ನುವ ಕೂತುಹಲವಲ್ಲವೇ? ಈಗ ನಿಮ್ಮ ಈ ಊಹೆಗೂ ಮೀರಿದ ಸಖನೊಬ್ಬ ಈ ಕ್ವಾಂಟಿಕೋ  ಬೆಡಗಿಯ ಜೀವನದಲ್ಲಿ ಪ್ರವೇಶಿಸಿದ್ದಾನೆ. ಹಾಗಾದರೆ ಆತ ಯಾರು ಗೊತ್ತೇ, ಅವನು ಬೇರೆ ಯಾರು ಅಲ್ಲ, ಅವನೇ ಅಮೇರಿಕಾದ ಖ್ಯಾತ ಸಿಂಗರ್ ನಿಕ್ ಜೋನಾಸ್ ! 

ಹೌದು, ಈ ಸಂಗತಿ ಕೆಲವು ದಿನಗಳಿಂದ ಈ ಇಬ್ಬರು ಜೋಡಿಗಳ ಮಧ್ಯವಿರುವ ಲವ್ವಿ ಡವ್ವಿಗೆ ಸಾಕ್ಷಿಗೆ ಪುಷ್ಟಿ ನೀಡುತ್ತಿರುವುದು ಇನ್ಸ್ತಾಗ್ರಾಂ ನಲ್ಲಿ ಇವರಿಬ್ಬರ ಪ್ರತಿಕ್ರಿಯೆಗಳು.ಅಧಿಕೃತವಾಗಿ ಈ ಬಗ್ಗೆ ಇಬ್ಬರು ಬಹಿರಂಗವಾಗಿ ಹೇಳಿಕೆ ನೀಡದಿದ್ದರೂ ಸಹಿತ ಈ ಸೋಶಿಯಲ್ ಮಿಡಿಯಾದಲ್ಲಿನ ಇಬ್ಬರ ಪ್ರತಿಕ್ರಿಯೆಗಳು ಇವರಿಬ್ಬರ ನಡುವೆ ಇರುವ ಸಂಬಂಧಕ್ಕೆ ಕನ್ನಡಿ ಹಿಡಿಯುತ್ತವೆ ಎನ್ನಬಹುದು.  

Trending News