ಕೆಜಿಎಫ್ 2 ದಲ್ಲಿ ಪ್ರಕಾಶ್ ರೈ ಪಾತ್ರ ಹೊಸ ಎಂಟ್ರಿ, ಅನಂತ್ ನಾಗ್ ಬದಲಿಗೆ ಅಲ್ಲ - ಪ್ರಶಾಂತ್ ನೀಲ್ ಸ್ಪಷ್ಟನೆ

ಕೆಜಿಎಫ್ ನ ಮುಂಬರುವ ಎರಡನೇ ಭಾಗದಲ್ಲಿ ನಟ ಪ್ರಕಾಶ್ ರಾಜ್ ಅವರ ಪಾತ್ರ ಹಿರಿಯ ನಟ ಅನಂತ್ ನಾಗ್ ಬದಲಿ ಅಲ್ಲ ಎಂದು ಚಿತ್ರದ ನಿರ್ದೇಶಕ ಪ್ರಶಾಂತ್ ನೀಲ್ ಖಚಿತಪಡಿಸಿದ್ದಾರೆ.

Last Updated : Aug 28, 2020, 11:06 PM IST
ಕೆಜಿಎಫ್ 2 ದಲ್ಲಿ ಪ್ರಕಾಶ್ ರೈ ಪಾತ್ರ ಹೊಸ ಎಂಟ್ರಿ, ಅನಂತ್ ನಾಗ್ ಬದಲಿಗೆ ಅಲ್ಲ - ಪ್ರಶಾಂತ್ ನೀಲ್ ಸ್ಪಷ್ಟನೆ title=
Photo Courtsey : facebook

ಬೆಂಗಳೂರು: ಕೆಜಿಎಫ್ ನ ಮುಂಬರುವ ಎರಡನೇ ಭಾಗದಲ್ಲಿ ನಟ ಪ್ರಕಾಶ್ ರಾಜ್ ಅವರ ಪಾತ್ರ ಹಿರಿಯ ನಟ ಅನಂತ್ ನಾಗ್ ಬದಲಿ ಅಲ್ಲ ಎಂದು ಚಿತ್ರದ ನಿರ್ದೇಶಕ ಪ್ರಶಾಂತ್ ನೀಲ್ ಖಚಿತಪಡಿಸಿದ್ದಾರೆ.

ಕೆಜಿಎಫ್: 1ರಲ್ಲಿ, ಅನಂತ್ ನಾಗ್ ಚಿತ್ರದ ನಿರೂಪಕನ ಪ್ರಮುಖ ಪಾತ್ರವನ್ನು ನಿರ್ವಹಿಸಿದ್ದಾರೆ. ಸೆಟ್‌ಗಳಲ್ಲಿ ಗುರುತಿಸಿಕೊಂಡ ನಂತರ ನಟ ಅನಂತ್ ನಾಗ್ ಅವರ ಸ್ಥಾನಕ್ಕೆ ಬಂದಿದ್ದಾರೆ ಎಂಬ ವದಂತಿ ಹಬ್ಬಿದ ಬೆನ್ನಲ್ಲೇ ಅವರ ಸ್ಪಷ್ಟನೆ ಬಂದಿದೆ.

ಸಿನೆಮಾ ಎಕ್ಸ್‌ಪ್ರೆಸ್‌ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ನಿರ್ದೇಶಕ ಪ್ರಶಾಂತ್ ನೀಲ್ ಅವರು ಅನಂತ್  ನಾಗ್ ಬದಲಿಗೆ ಪ್ರಕಾಶ್ ರಾಜ್  ಬಂದಿಲ್ಲ ಮತ್ತು ಸಂಪೂರ್ಣವಾಗಿ ವಿಭಿನ್ನ ಪಾತ್ರವನ್ನು ನಿರ್ವಹಿಸಲು ಬೋರ್ಡ್ ಗೆ ಬಂದಿದ್ದಾರೆ ಎಂದು ದೃಢಪಡಿಸಿದರು.ಪ್ರಕಾಶ್ ರಾಜ್ ಖಂಡಿತವಾಗಿಯೂ ಅನಂತ್ ನಾಗ್ ಬದಲಿಯಲ್ಲ. ಅವರದ್ದು ಹೊಸ ಎಂಟ್ರಿ ಮತ್ತು ಇದು ಚಲನಚಿತ್ರದಲ್ಲಿ ಹೊಸ ಪಾತ್ರವಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಕೆಜಿಎಫ್ 2 ಚಿತ್ರದ ಚಿತ್ರೀಕರಣ ಈ ವಾರದ ಆರಂಭದಲ್ಲಿ ಬೆಂಗಳೂರಿನಲ್ಲಿ ಪುನರಾರಂಭವಾಯಿತು. ಇನ್ನೂ ಕೆಲವು ಪ್ರಮುಖ ಆಕ್ಷನ್ ಸನ್ನಿವೇಶಗಳನ್ನು ಚಿತ್ರೀಕರಿಸಲು ಇನ್ನೂ 25 ದಿನಗಳ ಶೂಟಿಂಗ್ ಉಳಿದಿದೆ ಎಂದು ನಿರ್ದೇಶಕರು ತಿಳಿಸಿದ್ದಾರೆ. ಪ್ರಸ್ತುತ ಕ್ಯಾನ್ಸರ್ ಚಿಕಿತ್ಸೆಯಲ್ಲಿರುವ ಸಂಜಯ್ ದತ್ ಅವರೊಂದಿಗೆ 3 ದಿನಗಳ ಚಿತ್ರೀಕರಣವೂ ಬಾಕಿ ಉಳಿದಿದೆ.

ಕಳೆದ ತಿಂಗಳು ಸಂಜಯ್ ದತ್ ಅವರ ಜನ್ಮದಿನದ ಸಂದರ್ಭದಲ್ಲಿ, ನಿರ್ಮಾಪಕರು ಅವರ ಪಾತ್ರದ ಮೊದಲ ನೋಟವನ್ನು ಅನಾವರಣಗೊಳಿಸಿದರು.
 

Trending News