ಬಾಲಾಕೊಟ್ ವಾಯುದಾಳಿ ಕುರಿತ ಚಿತ್ರದ ಹೆಸರು ಕೇಳಿ ಕಸಿವಿಸಿಗೊಂಡ ಪಾಕ್

ಪುಲ್ವಾಮಾದಲ್ಲಿ ಪಾಕ್ ಪ್ರಾಯೋಜಿತ ಉಗ್ರದಾಳಿಯ ಬಳಿಕ ಪಾಕಿಸ್ತಾನದ ಬಾಲಾಕೊಟ್ ನಲ್ಲಿದ್ದ ಉಗ್ರರ ಶಿಬಿರಗಳ ಮೇಲೆ ಭಾರತೀಯ ವಾಯುಸೇನೆ ನಡೆಸಿರುವ ಸರ್ಜಿಕಲ್ ಸ್ಟ್ರೈಕ್ ಕುರಿತಾದ ಚಿತ್ರದ ಹೆಸರು ಕೇಳಿ ಪಾಕಿಸ್ತಾನ ಆತಂಕಗೊಂಡಿದೆ.  

Last Updated : Dec 16, 2019, 08:28 PM IST
ಬಾಲಾಕೊಟ್ ವಾಯುದಾಳಿ ಕುರಿತ ಚಿತ್ರದ ಹೆಸರು ಕೇಳಿ ಕಸಿವಿಸಿಗೊಂಡ ಪಾಕ್ title=

ಇಸ್ಲಾಮಾಬಾದ್: ಪುಲ್ವಾಮಾದಲ್ಲಿ ಪಾಕ್ ಪ್ರಾಯೋಜಿತ ಉಗ್ರದಾಳಿಯ ಬಳಿಕ ಪಾಕಿಸ್ತಾನದ ಬಾಲಾಕೊಟ್ ನಲ್ಲಿದ್ದ ಉಗ್ರರ ಶಿಬಿರಗಳ ಮೇಲೆ ಭಾರತೀಯ ವಾಯುಸೇನೆ ನಡೆಸಿರುವ ಸರ್ಜಿಕಲ್ ಸ್ಟ್ರೈಕ್ ಕುರಿತಾದ ಚಿತ್ರದ ಹೆಸರು ಕೇಳಿ ಪಾಕಿಸ್ತಾನದ ಸೇನೆ ಆತಂಕಗೊಂಡಿದೆ. ಈ ಕುರಿತು ಟ್ವೀಟ್ ಮಾಡಿರುವ ಪಾಕ್ ಸೇನಾ ವಕ್ತಾರ ಭಾರತೀಯ ಚಿತ್ರ ನಿರ್ಮಾಪಕರಿಗೆ ತೀಕ್ಷಶಬ್ದಗಳಲ್ಲಿ ಎಚ್ಚರಿಕೆ ನೀಡಿದ್ದಾರೆ. ಕಳೆದ ಫೆಬ್ರುವರಿವಲ್ಲಿ ಈ ಕುರಿತು ಪತ್ರಿಕಾಗೋಷ್ಠಿ ನಡೆಸಿದ್ದ ಭಾರತೀಯ ಚಿತ್ರ ನಿರ್ದೇಶಕ ಸಂಜಯ್ ಲೀಲಾ ಭನ್ಸಾಲಿ ಹಾಗೂ ನಿರ್ಮಾಪಕ ಭೂಷಣ್ ಕುಮಾರ್, ಪಾಕಿಸ್ತಾನದ ಬಾಲಾಕೊಟ್ ನಲ್ಲಿರುವ ಉಗ್ರರ ಶಿಬಿರುಗಳ ಮೇಲೆ ಭಾರತೀಯ ವಾಯುಸೇನೆ ನಡೆಸಿದ್ದ ಸರ್ಜಿಕಲ್ ಸ್ಟ್ರೈಕ್ ಕುರಿತು ಚಿತ್ರ ಬಿಡುಗಡೆಗೊಳಿಸುವುದಾಗಿ ಪ್ರಕಟಿಸಿದ್ದರು. ಭಾರತ ನಡೆಸಿದ್ದ ಈ ಸರ್ಜಿಕಲ್ ಸ್ಟ್ರೈಕ್ ನಲ್ಲಿ ಅಪಾರ ಸಂಖ್ಯೆಯಲ್ಲಿ ಉಗ್ರರು ಹತರಾಗಿದ್ದರು.

ಈ ಕುರಿತು ಘೋಷಣೆ ಮಾಡಿದ್ದ ಭಾರತೀಯ ಚಿತ್ರ ನಿರ್ಮಾಪಕರು 'ಬನ್ನಿ ದೇಶದ ವೀರ ಸುಪುತ್ರರ ಬಗ್ಗೆ ನಮ್ಮ ಶ್ರದ್ಧೆ ವ್ಯಕ್ತಪಡಿಸೋಣ' ಎಂದು ಬರೆದುಕೊಂಡಿದ್ದರು. ರಾಷ್ಟ್ರೀಯ ಪುರಸ್ಕಾರ ಪಡೆದ ನಿರ್ದೇಶಕ ಅಭಿಷೇಕ್ ಕಪೂರ್ ಅವರ ಚಿತ್ರ 2019 ರಲ್ಲಿ ನಡೆದ ಬಾಲಾಕೊಟ್ ಸ್ಟ್ರೈಕ್ ಆಧಾರಿತ ಕಥಾ ಹಂದರವನ್ನು ಹೊಂದಿದೆ. ಈ ಕಥೆ ಭಾರತೀಯ ವಾಯುಸೇನೆಯ ಸಾಧನೆಗಳನ್ನು ಬಣ್ಣಿಸಲಿದೆ.

ನಿರ್ಮಾಪಕರು ನೀಡಿರುವ ಈ ಹೇಳಿಕೆ ಪಾಕ್ ಸೇನಾ ವಕ್ತಾರ  ಆಸೀಫ್ ಗಫೂರ್ ಅವರ ಪಾಲಿಗೆ ಕಹಿಯಾಗಿ ಪರಿಣಮಿಸಿದೆ. ಚಿತ್ರಕ್ಕೆ ಸಂಬಂಧಿಸಿದ ಒಂದು ಲಿಂಕ್ ಜೊತೆ ಟ್ವೀಟ್ ಮಾಡಿ, "ಭಾರತೀಯ ಚಿತ್ರ ನಿರ್ಮಾಪಕರು ತಮ್ಮ ಆಸೆಗಳನ್ನು ಕೇವಲ ಚಿತ್ರಗಳ ಮೂಲಕವೇ ಪೂರ್ಣಗೊಳಿಸಿಕೊಳ್ಳುತ್ತಾರೆ ಎಂದು ನಾನೋರ್ವ ಸೈನಿಕನಾಗಿ ಹಾಗೂ ಅಭಿನಂದನ್ ಅವರನ್ನು ಗೌರವಿಸಿ ಹೇಳಬಯಸುತ್ತೇನೆ" ಎಂದಿದ್ದಾರೆ.

ಖ್ಯಾತ ಬಾಲಿವುಡ್ ನಟ ಹಾಗೂ ನಿರ್ಮಾಪಕ ವಿವೇಕ್ ಒಬೆರಾಯ್ ಕೂಡ ವಿಂಗ್ ಕಮಾಂಡರ್ ಅಭಿನಂದನ್  ಅವರನ್ನು ಆಧರಿಸಿ 'ಬಾಲಾಕೊಟ್-ದಿ ಟ್ರೂ ಸ್ಟೋರಿ' ಟೈಟಲ್ ಅಡಿ ಚಿತ್ರ ನಿರ್ಮಿಸುವುದಾಗಿ ಘೋಷಿಸಿರುವುದು ಇಲ್ಲಿ ಗಮನಾರ್ಹವಾಗಿದೆ.

Trending News