'ABCD' ಚಿತ್ರ ಖ್ಯಾತಿಯ ಡಾನ್ಸರ್-ನಟ ಕಿಶೋರ್ ಡ್ರಗ್ಸ್ ಪ್ರಕರಣದಲ್ಲಿ ಬಂಧನ

ಕಿಶೋರ್ ಅಮನ್ ಶೆಟ್ಟಿ (Kishore Aman Shetty) ಟಿವಿ ರಿಯಾಲ್ಟಿ ಶೋ 'ಡ್ಯಾನ್ಸ್ ಇಂಡಿಯಾ ಡ್ಯಾನ್ಸ್' ಮತ್ತು ಬಾಲಿವುಡ್ ಸೂಪರ್ಹಿಟ್ ಚಿತ್ರ 'ಎಬಿಸಿಡಿ-ಎನಿಬಡಿ ಕ್ಯಾನ್ ಡ್ಯಾನ್ಸ್' ನಲ್ಲಿ ನಟಿಸುವ ಮೂಲಕ ಖ್ಯಾತಿ ಪಡೆದಿದ್ದರು.

Last Updated : Sep 19, 2020, 10:46 PM IST
  • ABCD ಚಿತ್ರ ಹಾಗೂ ಡಾನ್ಸ್ ಇಂಡಿಯಾ ಡಾನ್ಸ್ ಖ್ಯಾತಿಯ ಕಿಶೋರ್ ಅಮನ್ ಶೆಟ್ಟಿ ಬಂಧನ
  • ಡ್ರಗ್ಸ್ ಹಾಗೂ ಡ್ರಗ್ಸ್ ಪ್ಯಾಡ್ಲಿಂಗ್ ಆರೋಪದ ಮೇಲೆ ಮಂಗಳೂರು ಪೊಲೀಸರಿಂದ ಬಂಧನ.
  • ಬಂಧಿತರಿಂದ MDMA ಮಾದಕ ಪದಾರ್ಥ ವಶಪಡಿಸಿಕೊಂಡ ಪೊಲೀಸರು.
'ABCD' ಚಿತ್ರ ಖ್ಯಾತಿಯ ಡಾನ್ಸರ್-ನಟ ಕಿಶೋರ್ ಡ್ರಗ್ಸ್ ಪ್ರಕರಣದಲ್ಲಿ ಬಂಧನ title=

ನವದೆಹಲಿ: ಡ್ರಗ್ಸ್ (Drug Case) ಮತ್ತು ಡ್ರಗ್ ಪ್ಯಾಡ್ಲಿಂಗ್ ಆರೋಪದ ಮೇಲೆ ಡ್ಯಾನ್ಸರ್-ನಟ ಕಿಶೋರ್ ಅಮನ್ ಶೆಟ್ಟಿ ಮತ್ತು ಇನ್ನೊಬ್ಬ ವ್ಯಕ್ತಿಯನ್ನು ಬಂಧಿಸಲಾಗಿದೆ. ಮಂಗಳೂರು ನಗರ ಪೊಲೀಸರು ಶನಿವಾರ ಈ ಮಾಹಿತಿ ನೀಡಿದ್ದಾರೆ. ಶೆಟ್ಟಿ ಕರಾವಳಿ ಪ್ರದೇಶದ ಪ್ರಸಿದ್ಧ ಸೆಲೆಬ್ ಆಗಿದ್ದಾರೆ. ಟಿವಿ ರಿಯಾಲ್ಟಿ ಶೋ 'ಡ್ಯಾನ್ಸ್ ಇಂಡಿಯಾ ಡ್ಯಾನ್ಸ್ (Dance India Dance)' ಮತ್ತು ಬಾಲಿವುಡ್ ಸೂಪರ್ಹಿಟ್ ಚಿತ್ರ 'ಎಬಿಸಿಡಿ-ಎನಿಬಡಿ ಕ್ಯಾನ್ ಡ್ಯಾನ್ಸ್' ನಲ್ಲಿ ನಟಿಸುವ ಮೂಲಕ ಅವರು ಭಾರಿ ಖ್ಯಾತಿಯನ್ನು ಗಳಿಸಿದ್ದರು. ಈ ಚಿತ್ರವನ್ನು ಡಾನ್ಸ್ ಸೂಪರ್ ಸ್ಟಾರ್  ಮತ್ತು ನಿರ್ದೇಶಕ ಪ್ರಭುದೇವ ನಿರ್ದೇಶಿಸಿದ್ದರು.

Also Read- ಎಲ್ಲಿದ್ದಾರೆ ಮನಸಾರೆ ಜೋಡಿ ಐಂದ್ರಿತಾ - ದಿಗಂತ್ ? ಕೇರಳದಲ್ಲೋ? ಬೆಂಗಳೂರಿನ ರಹಸ್ಯ ಸ್ಥಳದಲ್ಲೋ?

ಶೆಟ್ಟಿ (30 ) ಅವರನ್ನು ಹೊರತುಪಡಿಸಿ ಪೊಲೀಸರು ಅಕಿಲ್ ನೌಶಿಲ್ (28) ಹೆಸರಿನ ಓರ್ವ ವ್ಯಕ್ತಿಯನ್ನು ಸಿಂಥೆಟಿಕ್ ಡ್ರಗ್ MDMA ಇರಿಸಿಕೊಂಡ ಆರೋಪದ ಮೇಲೆ ಬಂಧಿಸಿದ್ದಾರೆ.

ಈ ಕುರಿತು ಸುದ್ದಿಗಾರರಿಗೆ ಮಾಹಿತಿ ನೀಡಿರುವ ನಗರ ಪೋಲೀಸ್ ಕಮಿಷನರ್ ಕುಮಾರ್ ವಿಕಾಸ್, "ಸಿಸಿಬಿ ಪೊಲೀಸರು ಆರೋಪಿಗಳನ್ನು (ಶೆಟ್ಟಿ ಹಾಗೂ ಅಕಿಲ್) ಇಂದು ಬೆಳಗ್ಗೆ ಬಂಧಿಸಲಾಗಿದೆ ಎಂದಿದ್ದು, ಈ ಇಬ್ಬರು ಮುಂಬೈನಲ್ಲಿ ಡ್ರಗ್ ಖರೀದಿಸಿ ಮಂಗಳೂರಿನಲ್ಲಿ ಮಾರಾಟಮಾಡುತ್ತಿದ್ದರು' ಎಂದು ಹೇಳಿದ್ದಾರೆ.

Also Read- ಡ್ರಗ್ಸ್ ಧಂಧೆ ಹಿನ್ನೆಲೆ: ನಟಿಯರಾದ ರಾಗಿಣಿ‌ ದ್ವಿವೇದಿ, ಸಂಜನಾ ಗುಲ್ರಾನಿಗೆ ಡಬಲ್ ಟಾರ್ಚರ್

ಆರೋಪಿಗಳ ಬಳಿಯಿಂದ ಪೊಲೀಸರು MDMA, ಒಂದು ಮೋಟರ್ ಸೈಕಲ್, ಎರಡು ಮೊಬೈಲ್ ಫೋನ್ ಅನ್ನು ವಶಕ್ಕೆ ಪಡೆದಿದ್ದಾರೆ.

ಇಬ್ಬರ ವಿರುದ್ಧ ನಾರ್ಕೊಟಿಕ್ ಡ್ರಗ್ಸ್ ಅಂಡ್ ಸೈಕೋಟ್ರೋಪಿಕ್ ಸಬ್ಸ್ಟನ್ಸ್ ಆಕ್ಟ್ ಅಡಿ ಪ್ರಕರಣ ದಾಖಲಿಸಲಾಗಿದೆ.

Also Read- ಬೆಂಗಳೂರಿನಲ್ಲಿ ಬೃಹತ್ ಡ್ರಗ್ಸ್ ಜಾಲ; ಖ್ಯಾತ ಸಂಗೀತಗಾರ ಮತ್ತು ಚಿತ್ರನಟರು ಭಾಗಿ ಶಂಕೆ

Trending News