ದಿ ವಿಲನ್ ನಲ್ಲಿ ಶಿವಣ್ಣನ ಕಡೆಗಣನೆ, ಫೇಸ್ಬುಕ್ ಮೂಲಕ ಅಭಿಮಾನಿ ಪತ್ರ

ದಿ ವಿಲನ್ ಈ ಚಿತ್ರ ಈಗ ವಿವಾದದ ರೂಪ ಪಡೆದುಕೊಂಡಿದ್ದು ಚಿತ್ರದಲ್ಲಿ ನಟ ಶಿವರಾಜ್ ಕುಮಾರ್ ಅವರನ್ನು ಕಡೆಗಣಿಸಲಾಗಿದೆ ಎಂದು ಅಭಿಮಾನಿಗಳು ಈಗ ರೊಚ್ಚಿಗೆದ್ದಿದ್ದಾರೆ. 

Last Updated : Oct 21, 2018, 12:28 PM IST
ದಿ ವಿಲನ್ ನಲ್ಲಿ ಶಿವಣ್ಣನ ಕಡೆಗಣನೆ, ಫೇಸ್ಬುಕ್ ಮೂಲಕ ಅಭಿಮಾನಿ ಪತ್ರ  title=

ಬೆಂಗಳೂರು: ದಿ ವಿಲನ್ ಈ ಚಿತ್ರ ಈಗ ವಿವಾದದ ರೂಪ ಪಡೆದುಕೊಂಡಿದ್ದು ಚಿತ್ರದಲ್ಲಿ ನಟ ಶಿವರಾಜ್ ಕುಮಾರ್ ಅವರನ್ನು ಕಡೆಗಣಿಸಲಾಗಿದೆ ಎಂದು ಅಭಿಮಾನಿಗಳು ಈಗ ರೊಚ್ಚಿಗೆದ್ದಿದ್ದಾರೆ. ಅದರಲ್ಲಿ ಒಬ್ಬ ಅಭಿಮಾನಿಯಂತೂ ಫೇಸ್ಬೂಕ್  ಮೂಲಕ ಬಹಿರಂಗ ಪತ್ರವನ್ನು ಬರೆದು "ನಿಮ್ಮ ಮನೆಯವರಿಗಿಂತಲೂ ನಿಮ್ಮನ್ನು ಹೆಚ್ಚಾಗೀ ಪ್ರೀತಿಸುವ ಅಸಂಖ್ಯಾತ ಅಭಿಮಾನಿಗಳ ಮನಸ್ಸಿಗೆ ನೋವಾಗುವಂತಹ ಪಾತ್ರಗಳಲ್ಲಿ/ ಚಿತ್ರಗಳಲ್ಲಿ ಮುಂದೆ ನಟಿಸದಿದ್ದರೇ ಅಷ್ಟೇ ಸಾಕು..." ಎಂದು ಮನವಿ ಮಾಡಿಕೊಂಡಿದ್ದಾನೆ.

ಶಿವರಾಜ್ ಕುಮಾರ್ ಗೊಂದು ಪತ್ರ

ಅಣ್ಣ, ನಿಮಗೇ ನಟ ಸುದೀಪ್ ಮೇಲೇ ಪ್ರೀತಿ ಇದ್ದರೇ ನಿಮ್ಮ ಮನೆಗೇ ಕರೆದು ಔತಣ ನೀಡಿ, ಸುದೀಪ್ ನಡೆಸುವ ಟಿವಿ ಕಾರ್ಯಕ್ರಮ ದಲ್ಲಿ ನೀವು ಅತಿಥಿಯಾಗಿ ಹೋಗಿ ಎನ್ ಕರೇಜ್ ಮಾಡಿ ತಪ್ಪಿಲ್ಲ, ಆದರೇ ಸಿನಿಮಾನೇ ಬೇರೆ , ಇದು ನಿಮ್ಮ ಪ್ರೋಫೆಸನ್ ಮಾತ್ರ ಅಲ್ಲ, ನೀವು ಒಬ್ಬ ಸಾಧಾರಣ ನಟರೂ ಅಲ್ಲ, ಹಾಗೂ ಇಡೀ ಕರ್ನಾಟಕದಲ್ಲೇ ನಿಮ್ಮ ಮನೆಯವರ ಚಿತ್ರಗಳನ್ನ ನೋಡಿ ಬೆಳೆದವರು ನಾವು. ಅಭಿಮಾನಿಗಳನ್ನು ದೇವರು ಮಾಡಿದವರು ನೀವು. ಆ ದೇವರುಗಳ ಮನೋಭಿಲಾಷೆಯನ್ನ , ಅಭಿಲಾಷೆಯನ್ನ, ಪ್ರೀತಿ ಗೌರವವನ್ನ ಪಡೆಯುವುದುರ ಜೊತೆಗೆ ಕಾಪಾಡಿಕೊಳ್ಳುವುದು ಕೂಡ ನಿಮ್ಮ ಆದ್ಯತೆಯಲ್ಲವೇ.

ಅಭಿಮಾನಿಗಳು ನಿಮ್ಮನ್ನು ಇಷ್ಟಪಡುವಂತೆ ನೀವು ಅಭಿಮಾನಿಗಳನ್ನ ಇಷ್ಟಪಡಬೇಕಲ್ಲವೇ.100 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದು ಸಾಮಾನ್ಯ ಸಾಧನೇಯೇ , ಇದರಲ್ಲಿ ಷ್ಯಾನ್ಸ್ ಗಳ ಕಾಂಟ್ರುಬೂಷನ್ ಇಲ್ಲವೇ ,ಅಪ್ಪು ಚಿತ್ರಕ್ಕೆ ಪೋಲಿ ಟೈಟಲ್ ಇಟ್ಟಾಗಲಾದರೂ ನಿರ್ದೇಶಕ ಪ್ರೇಮ್ ರ ಯೋಗ್ಯತೇ ನಿಮಗೇ ತಿಳಿಯಲಿಲ್ಲವೇ ?ಜೋಗಯ್ಯ ಇಷ್ಟು ಬೇಗ ಮರೆತಿರಲ್ಲಾ ಶಿವಣ್ಣ, ಮುಂದೆ ಈ ವಿಲನ್ ಸಿನಿಮಾವನ್ನ ಮರೆತು ಮತ್ತೆ ನೀವು ಪ್ರೇಮ್ ಗೇ ಕಾಲ್ ಸೀಟ್ ಕೂಡೂಲ್ಲಾ ಅನ್ನೋ ನಂಬಿಕೆ ನಮಗಿಲ್ಲಾದಾಗಿದೆ.

ಗೀತಾಕ್ಕಾಗೆ ನಿಮ್ಮ ಪರ್ಸನಾಲಿಟಿ , ನಿಮ್ಮ ಕ್ವಾಲಿಟಿ , ನಿಮ್ಮ ಇನೋಸೆನ್ಸೀ ಯಾ ಅರಿವು ಇದೆಯೋ ಇಲ್ಲವೋ?ನಮಗೇ ಖಂಡಿತಾ ನೀವು ಸುದೀಪ್ ಜೂತೆ ನಟಿಸಿರುವುದು ಸಂತೋಸವೇ ಹೂರತು ಬೇಸರವಿಲ್ಲಾ , ಆದರೇ ಶಿವಣ್ಣ ಈ ರೀತಿ ಬೇಜಾವಬ್ದಾರಿತನದಿಂದ ನಿಮ್ಮ ಯೋಗ್ಯತೇಗೇ ನಿಮ್ಮ ಘನತೆಗೇ ನಿಮ್ಮ ಸೀನಿಯಾರಿಟಿಗೇ ತಕ್ಕಂತ ಪಾತ್ರಗಳಲ್ಲಿ ಅಭಿನಯಿಸಿದರೇ ತಪ್ಪಿಲ್ಲಾ. ಅದು ಬಿಟ್ಟು ಮೂರು ಕಾಸಿಗೂ ಬೆಲೆಯಿಲ್ಲದ ಪಾತ್ರದಲ್ಲಿ ನಟಿಸಿರುವುದು ಅಕ್ಷಮ್ಯಾ.

ಸಿನಿಮಾ ಸೋಲೋದು ಗೆಲ್ಲೋದು ಬೇರೆ ಮಾತು. ಆದರೇ ಕಥೆಯ ಆಯ್ಕೆ, ಒಬ್ಬ ಸೀನಿಯರ್ ಕಲಾವಿದನಿಗೇ ತುಂಬಾ ಮುಖ್ಯ,ಶಿವಣ್ಣ ಜೀವನವಾಗಲೀ / ಸಿನಿಮಾ ಆಗಲೀ ನಮ್ಮತನ ಬಿಟ್ಟು ಬದುಕಬಾರದು / ನಟಿಸಬಾರದು..ನಿಮ್ಮ ಮನೆಯವರಿಗಿಂತಲೂ ನಿಮ್ಮನ್ನು ಹೆಚ್ಚಾಗೀ ಪ್ರೀತಿಸುವ ಅಸಂಖ್ಯಾತ ಅಭಿಮಾನಿಗಳ ಮನಸ್ಸಿಗೆ ನೋವಾಗುವಂತಹ ಪಾತ್ರಗಳಲ್ಲಿ/ ಚಿತ್ರಗಳಲ್ಲಿ ಮುಂದೆ ನಟಿಸದಿದ್ದರೇ ಅಷ್ಟೇ ಸಾಕು...

ವಂದನೆಗಳು.. ನಿಮ್ಮ ಅಭಿಮಾನಿ.

 

Trending News