ಬಾನಂಗಳದಲ್ಲಿ ಹಾರಲು ರೆಡಿಯಾಗ್ತಿದೆ ʼಗಾಳಿಪಟ 2ʼ: ಗೋಲ್ಡನ್‌ ಸ್ಟಾರ್‌ಗೆ ಸೆಂಚುರಿ ಸ್ಟಾರ್‌ರಿಂದ ಶುಭಾಶಯ

ಅದು 2008. ಆ ವರ್ಷವನ್ನ ಕನ್ನಡ ಸಿನಿಮಾಭಿಮಾನಿಗಳು ಮರೆಯಲು ಸಾಧ್ಯವೇ ಇಲ್ಲ ಬಿಡಿ. ಯಾಕಂದ್ರೆ ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ಯೋಗರಾಜ್ ಭಟ್‌ ಕೈಚಳಕದಲ್ಲಿ ತೆರೆಕಂಡ ಗಾಳಿಪಟ ಮುಗಿಲೆತ್ತರಕ್ಕೂ ಹಾರಿ ಮಾಡಿದ ಸದ್ದು ಕಣ್ಣ ಮುಂದೆ ಹಾಗೆ ಇದೆ. ಇದೀಗ ಮತ್ತೇ ಗೋಲ್ಡನ್ ಗ್ಯಾಂಗ್ ಸೇರಿಕೊಂಡು ಗಾಳಿಪಟ 2 ಅನ್ನೋ ಅತ್ಯದ್ಭುತ ಸಿನಿಮಾ ರೆಡಿ ಮಾಡಿದ್ದಾರೆ. ಈ ಸಿನಿಮಾ ಆಗಸ್ಟ್ 12ಕ್ಕೆ ಬೆಳ್ಳಿತೆರೆಯ ಮೇಲೆ ಕಮಾಲ್ ಮಾಡಲು ಸಿದ್ಧವಾಗಿದೆ.  

Written by - YASHODHA POOJARI | Edited by - Bhavishya Shetty | Last Updated : Aug 1, 2022, 08:43 AM IST
  • ಬೆಂಗಳೂರಿನಲ್ಲಿ ಭರ್ಜರಿಯಾಗಿ ಟ್ರೇಲರ್ ರಿಲೀಸ್ ಮಾಡಿದ ಗಾಳಿಪಟ 2 ಟೀಮ್
  • ಡಾ. ಶಿವರಾಜ್‌ ಕುಮಾರ್‌, ಉಪೇಂದ್ರ ಮತ್ತು ರಮೇಶ್ ಅರವಿಂದ್ ಭಾಗಿ
  • ತಂಡಕ್ಕೆ ಶುಭಕೋರಿದ ಸ್ಯಾಂಡಲ್‌ವುಡ್‌ ದಿಗ್ಗಜರು
ಬಾನಂಗಳದಲ್ಲಿ ಹಾರಲು ರೆಡಿಯಾಗ್ತಿದೆ ʼಗಾಳಿಪಟ 2ʼ: ಗೋಲ್ಡನ್‌ ಸ್ಟಾರ್‌ಗೆ ಸೆಂಚುರಿ ಸ್ಟಾರ್‌ರಿಂದ ಶುಭಾಶಯ  title=
Gaalipata 2

ರೆಕ್ಕೆ ಇಲ್ಲದೆ ಹೋದ್ರೂ ಹಾರೋದು ಗಾಳಿಪಟ. ಇದೀಗ ಯೋಗರಾಜ್‌ ಭಟ್‌ ಮತ್ತು ಗೋಲ್ಡನ್‌ ಸ್ಟಾರ್‌ ಗಣೇಶ್‌ ಕಾಂಬಿನೇಶನ್‌ನಲ್ಲಿ ರೆಕ್ಕೆ ಪುಕ್ಕ ಎಲ್ಲಾ ಇರೋ ಸಖತ್ ಗಾಳಿಪಟ  2 ಆಗಸ್ಟ್ 12ದಂದು ಬಾನಂಗಳದಲ್ಲಿ ಹಾರಲು ಸಕಲ ರೀತಿಯಲ್ಲೂ ಸಜ್ಜಾಗಿ ನಿಂತಿದೆ. ಅಭಿಮಾನಿಗಳು ಕೂಡ ಒಂಟಿ ಕಾಲಲ್ಲಿ ನಿಂತು ಗಾಳಿಪಟ 2 ನೋಡಲು ಕಾಯುತ್ತಿದ್ದಾರೆ.

ಅದು 2008. ಆ ವರ್ಷವನ್ನ ಕನ್ನಡ ಸಿನಿಮಾಭಿಮಾನಿಗಳು ಮರೆಯಲು ಸಾಧ್ಯವೇ ಇಲ್ಲ ಬಿಡಿ. ಯಾಕಂದ್ರೆ ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ಯೋಗರಾಜ್ ಭಟ್‌ ಕೈಚಳಕದಲ್ಲಿ ತೆರೆಕಂಡ ಗಾಳಿಪಟ ಮುಗಿಲೆತ್ತರಕ್ಕೂ ಹಾರಿ ಮಾಡಿದ ಸದ್ದು ಕಣ್ಣ ಮುಂದೆ ಹಾಗೆ ಇದೆ. ಇದೀಗ ಮತ್ತೇ ಗೋಲ್ಡನ್ ಗ್ಯಾಂಗ್ ಸೇರಿಕೊಂಡು ಗಾಳಿಪಟ 2 ಅನ್ನೋ ಅತ್ಯದ್ಭುತ ಸಿನಿಮಾ ರೆಡಿ ಮಾಡಿದ್ದಾರೆ. ಈ ಸಿನಿಮಾ ಆಗಸ್ಟ್ 12ಕ್ಕೆ ಬೆಳ್ಳಿತೆರೆಯ ಮೇಲೆ ಕಮಾಲ್ ಮಾಡಲು ಸಿದ್ಧವಾಗಿದೆ.

ಇದನ್ನೂ ಓದಿ: Kaal Sarp Dosh: ಕಾಳಸರ್ಪ ದೋಷ ಎಂದರೇನು? ಸಂಪೂರ್ಣ ಮಾಹಿತಿ ಇಲ್ಲಿದೆ ನೋಡಿ

ಗಾಳಿಪಟ 2 ಟೀಮ್ ಬೆಂಗಳೂರಿನಲ್ಲಿ ಭರ್ಜರಿಯಾಗಿ ಟ್ರೇಲರ್ ರಿಲೀಸ್ ಇವೆಂಟ್ ಹಮ್ಮಿಕೊಂಡಿತ್ತು. ಅಥಿತಿಗಳಾಗಿ ಸೆಂಚುರಿ ಸ್ಟಾರ್ ಡಾ. ಶಿವರಾಜ್‌ ಕುಮಾರ್‌, ರಿಯಲ್ ಸ್ಟಾರ್ ಉಪೇಂದ್ರ ಮತ್ತು ರಮೇಶ್ ಅರವಿಂದ್ ಆಗಮಿಸಿ ಶುಭಾಶಯ ತಿಳಿಸಿದರು.

ಡಾ. ಶಿವರಾಜ್‌ ಕುಮಾರ್‌, ಉಪೇಂದ್ರ ಮತ್ತು ರಮೇಶ್ ಅರವಿಂದ್ ಅವರು ಸಿನಿಮಾದ ಟ್ರೇಲರ್ ಲಾಂಚ್ ಮಾಡಿದರು. ಟ್ರೇಲರ್ ನೋಡಿದ ಶಿವಣ್ಣ, "ತುಂಬಾ ಚೆನ್ನಾಗಿತ್ತು. ಅರ್ಜುನ್ ಜನ್ಯ ನೋಡಿದ್ರೆ ಎ ಆರ್‌ ರೆಹಮಾನ್‌ರನ್ನು ನೋಡಿದ ಹಾಗೆ ಅನಿಸುತ್ತಿದೆ. ದಿಗಂತ್, ಗಣೇಶ್, ಪವನ್ ತುಂಬಾ ಚೆನ್ನಾಗಿ ಅಭಿನಯ ಮಾಡಿದ್ದಾರೆ. ಪವನ್ ನಂಗೆ ತುಂಬಾ ಇಷ್ಟ ಆದರು. ಶಾರುಖ್ ಖಾನ್ ತರ ಇದ್ದಾರೆ"  ಅಂತ ಕಾಲೆಳೆದರು. ಗಾಳಿಪಟ 2 ಸಿನಿಮಾಗೆ ಶಿವಣ್ಣ ಆಲ್ ದಿ ಬೆಸ್ಟ್ ಹೇಳೋ ಮೂಲಕ ಖುಷಿ ಹಂಚಿಕೊಂಡರು. 

ಕಾರ್ಯಕ್ರಮಕ್ಕೆ ಅತಿಥಿಯಾಗಿ ಆಗಮಿಸಿದ ರಿಯಲ್ ಸ್ಟಾರ್ ಉಪೇಂದ್ರ, "ಪ್ರೊಡ್ಯೂಸರ್ ಮಾತಾಡೋಕೆ ಬರಲ್ಲ ಅಂತ ಎಲ್ಲಾ ಮಾತಾಡಿದ್ರು. ನಂಗೆ ಮಾತಾಡೋಕೆ ಬರುತ್ತೆ. ಆದ್ರೆ ನಾನು ಏನು ಮಾತಾಡಲ್ಲ. ಟ್ರೇಲರ್ ಅದ್ಭುತವಾಗಿದೆ. ಇಡೀ ತಂಡ ತುಂಬಾ ಚೆನ್ನಾಗಿ ಕೆಲಸ ಮಾಡಿದೆ. ಟ್ರೇಲರ್ ನೋಡಿದ್ರೆ ಸಾಕು ಜನ ಸಿನಿಮಾ ನೋಡಲು ಬರ್ತಾರೆ" ಅಂತ ಶುಭ ಕೋರಿದ್ರು

ನಮ್ಮೂರ ಮಂದಾರ ಹೂವೆ ಸಿನಿಮಾ ತೆರೆಕಂಡು  26 ವರ್ಷ ಆಗಿದೆ. ಅಲ್ಲಿಂದ ಇಲ್ಲಿಯವರೆಗೆ ನನ್ನ ಮತ್ತು ಶಿವಣ್ಣನ  ನಡುವೆ ಯಾವುದೇ ಅಹಿತಕರ ಘಟನೆ ನಡೆದಿಲ್ಲ. ಹಾಗೆ ಇದ್ದೀವಿ. ಯೋಗರಾಜ್ ಭಟ್ ಮತ್ತು ಗಣೇಶ್ ಕಾಂಬಿನೇಶನ್‌ ಸಿನಿಮಾದಲ್ಲಿ ಎಲ್ಲಾ ರೀತಿಯ ಮಜಾ ಸಿಗುತ್ತೆ. ಪ್ರೊಡ್ಯೂಸರ್ ರಮೇಶ್ ರೆಡ್ಡಿ ಸಣ್ಣ ದೇಹ ಇದ್ರೂ ದೊಡ್ಡ ಹೃದಯ ಹೊಂದಿರುವ ವ್ಯಕ್ತಿ. ಅತೀ ಶ್ರೇಷ್ಠ ನಿರ್ಮಾಪಕ ಅಂದ್ರೆ ಅದು ರಮೇಶ್ ರೆಡ್ಡಿ. ಉಪೇಂದ್ರ ಸರ್ ನಿಮ್ಮ ಡೈರೆಕ್ಷನ್‌ ಸಿನಿಮಾ ನೋಡಲು ಕಾಯ್ತಾ ಇದ್ದೀವಿ ಎಂದು ರಮೇಶ್ ಅರವಿಂದ್ ಹೇಳಿ, ಗಾಳಿಪಟ 2 ಸಿನಿಮಾ ತಂಡಕ್ಕೆ ಶುಭಾಶಯಗಳನ್ನ ತಿಳಿಸಿದರು. 

ಓಂ ಮತ್ತು ನಮ್ಮೂರ ಮಂದಾರ ಹೂವೆ ಸಿನಿಮಾದ ಮುಂದೆ ಯಾವ ಕಾಂಬಿನೇಶನ್ ಇಲ್ಲ. ಶಿವಣ್ಣ ಮತ್ತು ಉಪ್ಪಿ ಸರ್‌ಗೆ ಧನ್ಯವಾದ. ನಿರ್ಮಾಪಕರಿಗೆ ಧನ್ಯವಾದಗಳು. ಮಾತಾಡಲ್ಲ ಅಂತ ತುಂಬಾ ಮಾತಾಡಿದ್ರು ನಿರ್ಮಾಪಕರು. ನಾನು ಭಟ್ರು ಏನು ಅಂತ ಗೊತ್ತಾದ್ರು ಸಿನಿಮಾ ಕಂಪ್ಲೀಟ್ ಮಾಡಿದ್ದಾರೆ ನಿರ್ಮಾಪಕರು ಅಂತ ಥ್ಯಾಂಕ್ಸ್ ತಿಳಿಸಿದ್ರು ಗೋಲ್ಡನ್ ಸ್ಟಾರ್ ಗಣೇಶ್.

ಈ ಕಥೆನಾ ಸ್ಕ್ರೀನ್ ಮೇಲೆ ಭಟ್ರು ಹೆಂಗೇ ತರುತ್ತಾರೆ ಅಂತ ಥಿಂಕ್ ಮಾಡ್ದೆ. ಆದ್ರೆ ಈ ಸಿನಿಮಾ ಅದ್ಭುತವಾಗಿ ಮೂಡಿ ಬಂದಿದೆ. ಅರ್ಜುನ್ ಜನ್ಯ ಬಗ್ಗೆ ಹೇಳಲೇಬೇಕು. ಗಾಳಿಪಟ ಮೀರಿಸಿ ಗಾಳಿಪಟ 2 ಗೆ ಸಂಗೀತ ಕೊಟ್ಟಿದ್ದಾರೆ ಅನ್ನಲ್ಲ. ಬದಲಾಗಿ ಗಾಳಿಪಟ 2ಗೆ ಹೇಗೆ ಬೇಕೋ ಹಾಗೆ ಹಾಡುಗಳನ್ನ ಕೊಟ್ಟಿದ್ದಾರೆ ಅಂತ ಮೆಚ್ಚುಗೆ ವ್ಯಕ್ತಪಡಿಸಿದ್ರು ಗಣೇಶ್. 

ಇನ್ನು ಸ್ಟಾರ್ ಡೈರೆಕ್ಟರ್ ಯೋಗರಾಜ್ ಭಟ್ರು ಮಾತನಾಡಿ ಸಿನಿಮಾ ಆಗಸ್ಟ್ 12ಕ್ಕೆ ರಿಲೀಸ್ ಆಗುತ್ತಿದೆ ದಯವಿಟ್ಟು ಎಲ್ಲಾರು ಮಿಸ್ ಮಾಡ್ದೆ ನೋಡಿ ಅಂತ ಕೇಳಿಕೊಂಡ್ರು. 

ಇದನ್ನೂ ಓದಿ: ಟಿ ಮೋಹನದಾಸ್ ಎಂ ಪೈ ಇನ್ನಿಲ್ಲ

ಇನ್ನು ಈ ಚಿತ್ರದಲ್ಲಿ ಗೋಲ್ಡನ್‌ ಸ್ಟಾರ್‌ ಗಣೇಶ್‌, ದಿಗಂತ್‌ ಹಾಗೂ ಪವನ್‌ ಕುಮಾರ್‌ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ವೈಭವಿ ಶಾಂಡಿಲ್ಯ, ಶರ್ಮಿಳಾ ಮಾಂಡ್ರೆ, ಸಂಯುಕ್ತಾ ಮೆನನ್‌, ನಿಶ್ವಿ‌ಕಾ ನಾಯ್ಡು ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ. ರಂಗಾಯಣ ರಘು, ಬುಲೆಟ್ ಪ್ರಕಾಶ್, ಅನಂತ್‌ ನಾಗ್‌, ಸುಧಾ ಬೆಳವಾಡಿ, ಪದ್ಮಜಾ ರಾವ್ ಸೇರಿದಂತೆ ಅನೇಕ ಕಲಾವಿದರು ಈ ಚಿತ್ರದಲ್ಲಿ ನಟಿಸಿದ್ದಾರೆ. ಉಳಿದಂತೆ ಅರ್ಜುನ್ ಜನ್ಯ ಸಂಗೀತ ಸಂಯೋಜನೆ ಮತ್ತು ಸಂತೋಷ್ ರೈ ಪಾತಾಜೆ ಕ್ಯಾಮರಾ ವರ್ಕ್ ಮಾಡಿದ್ದಾರೆ.

ಸದ್ಯ ರಿಲೀಸ್ ಆಗಿರೋ ಹಾಡುಗಳು, ಟೀಸರ್ ಮತ್ತು ಟ್ರೀಲರ್ ಮೂಲಕ  ಗಾಳಿಪಟ 2 ಸಿನಿಮಾ ಟಾಕ್ ಮಾತ್ರ ಟಾಪ್ ಲೆವೆಲ್‌ನಲ್ಲಿದೆ. ಹೀಗಾಗಿ ನಾವೆಲ್ಲ ಮಿಸ್ ಮಾಡ್ದೆ ಈ ಸಿನಿಮಾನ ಥೀಯೇಟರ್‌ಗೆ ಹೋಗಿ ನೋಡಿ ಮನರಂಜನೆಯ ರಸದೌತಣ ಸವಿಯೋಣ. 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News