ಇವಳು ಊರಿಗೊಬ್ಳೆ ಪದ್ಮಾವತಿ ಅಲ್ಲ; ಹೊಸ ಪದ್ಮಾವತಿ!

ಊರಿಗೊಬ್ಳೆ ಪದ್ಮಾವತಿ ಅಂತಿದ್ದ ಜನ ಈಗ ಹೊಸ ಪದ್ಮಾವತಿ ನೋಡೋದಿಕ್ಕೆ ತಯಾರಾಗ್ತಿದ್ದಾರೆ. ಅದ್ಯಾರಪ್ಪಾ ಈ ಹೊಸ ಪದ್ಮಾವತಿ ಅಂತ ಯೋಚಿಸ್ತಿದ್ದೀರಾ? ಹಾಗಿದ್ರೆ ಈ ಸುದ್ದಿ ಓದಿ...

Last Updated : Mar 4, 2018, 03:12 PM IST
ಇವಳು ಊರಿಗೊಬ್ಳೆ ಪದ್ಮಾವತಿ ಅಲ್ಲ; ಹೊಸ ಪದ್ಮಾವತಿ! title=

ಬೆಂಗಳೂರು : ಊರಿಗೊಬ್ಳೆ ಪದ್ಮಾವತಿ ಅಂತಿದ್ದ ಜನ ಈಗ ಹೊಸ ಪದ್ಮಾವತಿ ನೋಡೋದಿಕ್ಕೆ ತಯಾರಾಗ್ತಿದ್ದಾರೆ. ಅದ್ಯಾರಪ್ಪಾ ಈ ಹೊಸ ಪದ್ಮಾವತಿ ಅಂತ ಯೋಚಿಸ್ತಿದ್ದೀರಾ? ಅವರೇ ನಮ್ಮ ಡಿಂಪಲ್ ಕ್ವೀನ್ ರಚಿತಾ ರಾಮ್!

'ಜಾನಿ ಮೇರಾ ನಾಮ್' ಚಿತ್ರದ ಮುಂದುವರಿದ ಭಾಗ ಎನ್ನಲಾಗಿರುವ 'ಜಾನಿ ಜಾನಿ ಎಸ್ ಪಪ್ಪಾ' ಚಿತ್ರದಲ್ಲಿ ದುನಿಯಾ ವಿಜಯ್ ಜೋಡಿಯಾಗಿ ಡಿಂಪಲ್ ಕ್ವೀನ್ ರಚಿತಾ ರಾಮ್ ಅಭಿನಯಿಸಿದ್ದು, ಚಿತ್ರದ ಹೊಸ ಪದ್ಮಾವತಿ ಹಾಡಿಗೆ ಬಹಳ ಗ್ಲಾಮರಸ್ ಆಗೇ ಹೆಜ್ಜೆ ಹಾಕಿದ್ದಾರೆ. 

ಜಾನಿ ಜಾನಿ ಎಸ್‌ ಪಪ್ಪಾ ಚಿತ್ರದಲ್ಲಿ ರಚಿತಾ ರಾಮ್‌ ಎನ್‌ ಆರ್‌ ಐ ಪಾತ್ರದಲ್ಲಿ ನಟಿಸಿದ್ದು, ಈ ಬಹಳ ಗ್ಲಾಮರಸ್ ಆಗಿ ಕೂಡ ಕಾಣಿಸಿಕೊಂಡಿದ್ದಾರೆ. ರಚಿತಾ ರಾಮ್ ಮತ್ತು ದುನಿಯಾ ವಿಜಿ ಇದೇ ಮೊದಲ ಬಾರಿಗೆ ತೆರೆಯ ಮೇಲೆ ಜೋಡಿಯಾಗಿ ಕಾಣಿಸಿಕೊಂಡಿದ್ದು, ಸಖತ್ ಬೋಲ್ಡ್ ಆಗಿ ನಟಸಿದ್ದಾರೆ. ಹಾಗಿದ್ರೆ ಹೊಸ ಪದ್ಮಾವತಿ ಹಾಡಿನ ಒಂದು ಝಲಕ್ ಮತ್ತು ಚಿತ್ರೀಕರಣ ಸಂದರ್ಭದ ಹಾಸ್ಯ ದೃಶ್ಯಗಳನ್ನು ನೀವೂ ನೋಡಿ...

ಜಾನಿ ಮೇರಾ ನಾಮ್‌ ಚಿತ್ರಕ್ಕೆ ಆ್ಯಕ್ಷನ್‌ ಕಟ್‌ ಹೇಳಿದ್ದ ಪ್ರೀತಂ ಗುಬ್ಬಿ ಅವರೇ ಜಾನಿ ಜಾನಿ ಎಸ್‌ ಪಪ್ಪಾ ಚಿತ್ರವನ್ನೂ ನಿರ್ದೇಶಿಸಿದ್ದಾರೆ. ಇನ್ನು ಈ ಚಿತ್ರದಲ್ಲಿ ದುನಿಯಾ ವಿಜಯ್‌ ಸಹ ಐದಕ್ಕೂ ಹೆಚ್ಚು ಗೆಟಪ್‌ನಲ್ಲಿ ಮಿಂಚಲಿದ್ದಾರೆ. ತಿಥಿ ಚಿತ್ರದ ಗಡ್ಡಪ್ಪ ವಿಶೇಷ ಪಾತ್ರದಲ್ಲಿ ನಟಿಸಿದ್ದಾರೆ. ಸಾಧು ಕೋಕಿಲಾ, ರಂಗಾಯಣ ರಘು ಚಿತ್ರದಲ್ಲಿದ್ದಾರೆ. ಒಟ್ಟಿನಲ್ಲಿ ರಚಿತಾ ಮತ್ತು ವಿಜಯ್‌ ಜೋಡಿ ಜಾನಿ ಜಾನಿ ಎಸ್‌ ಪಪ್ಪಾದಲ್ಲಿ ಮೋಡಿ ಮಾಡೋದ್ರಲ್ಲಿ ಅನುಮಾನವೇ ಇಲ್ಲ ಎನ್ನುತ್ತಿದೆ ಚಿತ್ರರಂಗ. 

Trending News