ಚೆನ್ನೈ: ಖ್ಯಾತ ಬಹುಭಾಷಾ ಹಿನ್ನೆಲೆ ಗಾಯಕ ಎಸ್. ಪಿ. ಬಾಲಸುಬ್ರಹ್ಮಣ್ಯಂ (S.P Balasubramanyam) ವಿಧಿವಶರಾಗಿದ್ದಾರೆ. ಬಹು ಅಂಗಾಂಗ ವೈಫಲ್ಯದಿಂದ ಅವರು ಬಳಲುತ್ತಿದ್ದರು. ಕೊರೊನಾ ಸೋಂಕಿನಿಂದ ಚೇತರಿಸಿಕೊಂಡಿದ್ದ ಅವರನ್ನು ಚೆನ್ನೈನ MGM Health Care ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ತಮ್ಮ ಕೊನೆಯುಸಿರೆಳೆದಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಅವರ ಪುತ್ರ, ಎಸ್.ಪಿ ಚರಣ್, ಮಧ್ಯಾಹ್ನ 1 ಗಂಟೆ ನಾಲ್ಕು ನಿಮಿಷಕ್ಕೆ ಅಪ್ಪ ವಿಧಿವಶರಾಗಿದ್ದಾರೆ ಎಂದು ಹೇಳಿದ್ದಾರೆ. ಇದೇ ವೇಳೆ ತಮ್ಮ ತಂದೆಯ ಶೀಘ್ರ ಚೇತರಿಕೆಗೆ ಪ್ರಾರ್ಥನೆ ಸಲ್ಲಿಸಿದ ಎಲ್ಲ ಅಭಿಮಾನಿಗಳಿಗೆ ಅವರು ಕೃತಜ್ಞತೆ ಸಲ್ಲಿಸಿದ್ದಾರೆ. 74 ವರ್ಷ ವಯಸ್ಸಿನ ಎಸ್.ಪಿ.ಬಿ ತಮ್ಮ ಹಿಂದೆ ತಮ್ಮ ಪತ್ನಿ ಸಾವಿತ್ರಿ ಹಾಗೂ ಇಬ್ಬರು ಮಕ್ಕಳಾದ ಪುತ್ರಿ ಪಲ್ಲವಿ ಹಾಗೂ ಪುತ್ರ. ಎಸ್.ಪಿ. ಚರಣ್ ಅವರನ್ನು ಅಗಲಿದ್ದಾರೆ.
SP Balasubrahmanyam passed away at 1:04 pm today, announces his son SP Charan. pic.twitter.com/o7y8X2d6Kz
— ANI (@ANI) September 25, 2020
ಇದನ್ನು ಓದಿ- SP Balasubrahmanyam health update: ಖ್ಯಾತ ಗಾಯಕ ಎಸ್‌ಪಿ ಬಾಲಸುಬ್ರಹ್ಮಣ್ಯಂ ಅವರ ಆರೋಗ್ಯ ಸ್ಥಿತಿ ಗಂಭೀರ
ಎಸ್.ಪಿ.ಬಿ ನಿಧಾನಕ್ಕೆ ಸಂತಾಪ ಸೂಚಿಸಿರುವ ಪ್ರಧಾನಿ ನರೇಂದ್ರ ಮೋದಿ, "ಶ್ರೀ SP ಬಾಲಸುಬ್ರಹ್ಮಣ್ಯಂ ಅವರ ಅಗಲಿಕೆಯಿಂದ ನಮ್ಮ ಸಾಂಸ್ಕೃತಿಕ ಜಗತ್ತು ಬಡವಾಗಿದೆ. ಇಡೀ ದೇಶಾದ್ಯಂತದ ಮನೆಗಳಲ್ಲಿ ಮನೆಮಾತಾಗಿದ್ದ ಅವರ ಸುಮಧುರ ಧ್ವನಿ, ಸಂಗೀತ, ದಶಕಗಳ ಕಾಲ ಸಂಗೀತ ಪ್ರೇಮಿಗಳನ್ನು ಮುಗ್ಧರನ್ನಾಗಿಸಿತ್ತು. ಇಂತಹ ಸಂಕಷ್ಟದ ಪರಿಸ್ಥಿತಿಯಲ್ಲಿ ಅವರ ಕುಟುಂಬ ಸದಸ್ಯರಿಗೆ ನಮ್ಮೆಲ್ಲರ ಸಾಂತ್ವನ" ಎಂದು ಹೇಳಿದ್ದಾರೆ.
With the unfortunate demise of Shri SP Balasubrahmanyam, our cultural world is a lot poorer. A household name across India, his melodious voice and music enthralled audiences for decades. In this hour of grief, my thoughts are with his family and admirers. Om Shanti.
— Narendra Modi (@narendramodi) September 25, 2020
ಇದಕ್ಕೂ ಮೊದಲು ಆಗಸ್ಟ್ 5ರಂದು ಅವರಲ್ಲಿ ಕೊರೊನಾ ಸೋಂಕಿನ ಲಘು ಲಕ್ಷಣಗಳು ಕಂಡು ಬಂದ ಹಿನ್ನೆಲೆ ಅವರನ್ನು MGM ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಆಗಸ್ಟ್ 24ರಂದು ಅವರ ಕೊರೊನಾ ವರದಿ ನಕಾರಾತ್ಮಕ ಬಂದಿತ್ತು.
ಜೂನ್ 4, 1946 ರಂದು ಜನಿಸಿದ್ದ ಈ ಗಾನಗಾರುಡಿಗ ಕನ್ನಡ, ತಮಿಳು ತೆಲುಗು, ಹಿಂದಿ , ಮಲಯಾಳಂ ಸೇರಿದಂತೆ ಒಟ್ಟು 16 ಭಾಷೆಗಳಲ್ಲಿ ಸುಮಾರು 40 ಸಾವಿರಕ್ಕೂ ಅಧಿಕ ಗೀತೆಗಳಿಗೆ ತಮ್ಮ ಸುಮಧುರ ಧ್ವನಿ ನೀಡಿದ್ದಾರೆ. ಪದ್ಮಶ್ರೀ(2001), ಪದ್ಮಭೂಷಣ (2011) ಸೇರಿದಂತೆ 25 ಬಾರಿ ನಂದಿ ಪ್ರಶಸ್ತಿ ಎಸ್.ಪಿ.ಬಿ ತನ್ನದಾಗಿಸಿಕೊಂಡಿದ್ದಾರೆ. ಇದಲ್ಲದೆ ತಮ್ಮ ಉತ್ತಮ ಗಾಯನಕ್ಕೆ SPB 6 ಬಾರಿ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಇಂಜಿನಿಯರಿಂಗ್ ವಿಭಾಗದಲ್ಲಿ ಪದವಿ ಪಡೆದ SPB ಬಳಿಕ ಗಾಯನ ಕ್ಷೇತ್ರವನ್ನೇ ತನ್ನ ವೃತ್ತಿಜೀವನವನ್ನಾಗಿ ಆರಿಸಿಕೊಂಡಿದ್ದರು.