Bheema Review: ಹಲೋ ಯುವಕರೇ ಮಸ್ಟ್ ನೋಡಲೇಬೇಕು 'ಭೀಮ'

Bheema Review: ಕಷ್ಟಪಟ್ಟು ಸಾಕೋ ತಂದೆ-ತಾಯಿಗೆ ಮಕ್ಕಳು ಹೇಗೆ ನೋವು ಕೊಡುತ್ತಾರೆ,  ಶೋಕಿಗೆ ಬಿದ್ದ ಮೇಲೆ ಲೈಫ್ ಹೇಗೆ ಹಾಳು ಮಾಡಿಕೊಳ್ಳುತ್ತೇ ಯುವ ಪೀಳಿಗೆ ಅನ್ನೋದನ್ನ ಅದ್ಬುತವಾಗಿ ತೋರಿಸೋ ಪ್ರಯತ್ನ ಭೀಮ ಚಿತ್ರದಲ್ಲಿದೆ. 

Written by - YASHODHA POOJARI | Last Updated : Aug 9, 2024, 12:47 PM IST
  • ಎಲ್ಲ ಹೊಸ ಪ್ರತಿಭೆಗಳಿಗೆ ಅವಕಾಶ ಕೊಟ್ಟಿರೋ ದುನಿಯಾ ವಿಜಯ್ ಸಖತ್ ಟ್ಯಾಲೆಂಟ್ ಗಳನ್ನ ಹೊರತಂದಿದ್ದಾರೆ.
  • ಏನಪ್ಪಾ ದುನಿಯಾ ವಿಜಯ್ ಗೆ ವಯಸ್ಸೇ ಆಗೋಲ್ವಾ ಅನಿಸುತ್ತೆ ಯಾಕಂದ್ರೆ ಖಡಕ್ ಲುಕ್, ಸಖತ್ ಡಾನ್ಸ್.
  • ಕಿಕ್ ಕೊಡೊ ಡೈಲಾಗ್ ಗಳು ಸೀಟಿನ ಅಂಚಿನಲ್ಲಿ ನಮ್ಮನ್ನ ಕೂರಿಸುತ್ತೆ.
Bheema Review: ಹಲೋ ಯುವಕರೇ ಮಸ್ಟ್ ನೋಡಲೇಬೇಕು 'ಭೀಮ' title=

Bheema Review: ಬಹುನಿರೀಕ್ಷೆಯ "ಭೀಮ" ಸಿನಿಮಾ (Bheema Review)  ಭರ್ಜರಿಯಾಗಿ ರಿಲೀಸ್ ಆಗಿದ್ದು ಮಾಸ್ ಆಡಿಯನ್ಸ್ ಫುಲ್ ಖುಷ್ ಆಗಿದ್ದಾರೆ.  ಥೀಯೇಟರ್ ಗೆ ಜನ ಬರೋಲ್ಲ ಅನ್ನೋರಿಗೆ ಇವತ್ತು ಉತ್ತರ ಸಿಕ್ಕಿದೆ.  ಶಿಳ್ಳೆ,  ಚಪ್ಪಾಳೆ ಥೀಯೇಟರ್ ತುಂಬಾ ಹಬ್ಬಿತ್ತು.  ಯುವ ಪೀಳಿಗೆ ಈಗ ಹೇಗೆ ಹಾದಿತಪ್ಪುತ್ತಾರೆ ಅನ್ನೋದನ್ನ ಆಳವಾಗಿ ದುನಿಯಾ ವಿಜಯ್ (Duniya Vijay)ಸ್ಟಡಿ ಮಾಡಿ ನಿರ್ದೇಶನ ಮಾಡಿರೋದು ಸ್ಕ್ರೀನ್ ಮೇಲೆ ಕಾಣಿಸಿದೆ.  

ಕಷ್ಟಪಟ್ಟು ಸಾಕೋ ತಂದೆ-ತಾಯಿಗೆ ಮಕ್ಕಳು ಹೇಗೆ ನೋವು ಕೊಡುತ್ತಾರೆ,  ಶೋಕಿಗೆ ಬಿದ್ದ ಮೇಲೆ ಲೈಫ್ ಹೇಗೆ ಹಾಳು ಮಾಡಿಕೊಳ್ಳುತ್ತೇ ಯುವ ಪೀಳಿಗೆ ಅನ್ನೋದನ್ನ ಅದ್ಬುತವಾಗಿ ತೋರಿಸೋ ಪ್ರಯತ್ನ ಸಾಗಿದೆ.  ಜನರ ಮತ್ತು ಯುವಕರ ನಾಡಿಮಿಡಿತ ಅರಿತು "ಭೀಮ" ಸಿನಿಮಾ (Bheema Cinema) ಮಾಡಿದ್ದಾರೆ.  ಹೀಗೇ ಅಡ್ಡ ದಾರಿ ಹಿಡಿಯೋ ಮಂದಿಗೆ ಭೀಮ ಹೇಗೆ ಘರ್ಜಸಿ ಪಾಠ ಕಲಿಸುತ್ತಾನೆ ಅನ್ನೋದನ್ನ ನೀವು ಥೀಯೇಟರ್ ಗೆ ಬಂದು ನೋಡಬೇಕು. 

ಇದನ್ನೂ ಓದಿ- ಚಂದನ್ ಶೆಟ್ಟಿ-ನಿವೇದಿತಾ ಡಿವೋರ್ಸ್‌ ಆಗಲು ಸೃಜನ್ ಲೋಕೇಶ್ ಕಾರಣನಾ? ಹಿರಿಯ ನಟಿ ಗಿರಿಜಾ ಲೋಕೇಶ್ ಹೇಳಿದ್ದೇನು..?

ಎಲ್ಲ ಹೊಸ ಪ್ರತಿಭೆಗಳಿಗೆ ಅವಕಾಶ ಕೊಟ್ಟಿರೋ ದುನಿಯಾ ವಿಜಯ್ (Duniya Vijay) ಸಖತ್ ಟ್ಯಾಲೆಂಟ್ ಗಳನ್ನ ಹೊರತಂದಿದ್ದಾರೆ.  ಏನಪ್ಪಾ ದುನಿಯಾ ವಿಜಯ್ ಗೆ ವಯಸ್ಸೇ ಆಗೋಲ್ವಾ ಅನಿಸುತ್ತೆ  ಯಾಕಂದ್ರೆ ಖಡಕ್ ಲುಕ್,  ಸಖತ್ ಡಾನ್ಸ್.  ಕಿಕ್ ಕೊಡೊ ಡೈಲಾಗ್ ಗಳು ಸೀಟಿನ ಅಂಚಿನಲ್ಲಿ ನಮ್ಮನ್ನ ಕೂರಿಸುತ್ತೆ.  

ಇಂದು ರಿಲೀಸ್ ಆಗಿರೋ ಭೀಮ ಸಿನಿಮಾವನ್ನ ಜನ ತುಂಬಾ ಗ್ರಾಂಡ್ ಆಗಿ ವೆಲ್ಕಮ್ ಮಾಡಿದ್ದಾರೆ.  ಜೊತೆಗೆ ಕರುನಾಡಿನ ಎಲ್ಲೆಡೆ ಹೌಸ್ಫುಲ್ ಪ್ರದರ್ಶನ ಕಂಡಿದೆ.  ಸುಮಾರು 300ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಇಂದು ಭೀಮ ರಿಲೀಸ್ ಆಗಿದೆ.  ‘ಫಸ್ಟ್ ಡೇ ಫಸ್ಟ್ ಶೋ’ ದುನಿಯಾ ವಿಜಯ್ ಫ್ಯಾನ್ಸ್ ಜೊತೆ ನೋಡಿ ಸಂಭ್ರಮಿಸಿದರು.  ನಿಮಗೆ ಗೊತ್ತಿರೋ ಹಾಗೇ ಭೀಮ ಸಿನಿಮಾದ ಹಾಡುಗಳು ಚಿತ್ರ ರಿಲೀಸ್ ಗೂ ಮುನ್ನ ಜನಮನ ಗೆದ್ದಿತ್ತು.  ಈಗ ಆ ಎಲ್ಲ ಹಾಡುಗಳನ್ನ ಬಿಗ್ ಸ್ಕ್ರೀನ್ ಮೇಲೆ ನೋಡೋದು ಬೇರೆ ಲೆವೆಲ್ಲಿಗೆ ಥ್ರಿಲ್ ಕೊಡುತ್ತೆ.  

ಇದನ್ನೂ ಓದಿ- ʼದೇವರʼ ಸಿನಿಮಾದ ಫಸ್ಟ್‌ ಸಾಂಗ್‌ ರಿಲೀಸ್‌..! ಎನ್‌ಟಿಆರ್‌ ಜಾನ್ವಿ ಕೆಮಿಸ್ಟ್ರೀಗೆ ಫ್ಯಾನ್ಸ್‌ ಫಿದಾ

"ಭೀಮ" ಚಿತ್ರದ ಮೂಲಕ ಒಂದು ಸೂಕ್ಷ್ಮ ವಿಚಾರವನ್ನ ಜನರಿಗೆ ಒಂದೊಳ್ಳೆ ಸಂದೇಶ ಮೂಲಕ ತಲುಪಿಸೋ ಪ್ರಯತ್ನ ಮಾಡಿದ್ದಾರೆ ವಿಜಿ. ಯುವ ಪೀಳಿಗೆ ಮತ್ತು ಹೆಣ್ಣು ಮಕ್ಕಳು ಮಸ್ಟ್ ಆಗಿ ಭೀಮ ಸಿನಿಮಾ ನೋಡಲೇಬೇಕು. 

"ಭೀಮ" ಚಿತ್ರದ ಸೆಕೆಂಡ್ ಆಫ್ ನೆಕ್ಸ್ಟ್ ಲೆವೆಲ್ಲಿಗೆ ಇದೆ. ಡ್ರಗ್ಸ್ (Drugs) ಮಹಾಮಾರಿ ಯುವಜನತೆಯನ್ನ ಹೇಗೆ ಕಾಡಿ ಪ್ರಾಣ ಹಿಂಡುತ್ತೆ ಅನ್ನೋದೇ ಬಹಳ ರೋಚಕ. ಬನ್ನಿ ಸಿನಿಮಾ ನೋಡಿ . ಕನ್ನಡ ಸಿನಿಮಾ ಇಂಡಸ್ಟ್ರಿ ಉಳಿಸಿ ಬೆಳೆಸಿ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News