ಡ್ರಗ್ಸ್ ಧಂಧೆ: ಇಂದು ರಾಗಿಣಿ‌ ದ್ವಿವೇದಿ, ಸಂಜನಾ ಗುಲ್ರಾನಿ ಸೇರಿದಂತೆ 6 ಮಂದಿಯ ಭವಿಷ್ಯ ನಿರ್ಧಾರ

ಮಧ್ಯಾಹ್ನದ ಬಳಿಕ ಈ ಎಲ್ಲಾ ಆರೋಪಗಳನ್ನು ವಿಡಿಯೋ ಕಾನ್ಫರೆನ್ಸ್ ನಲ್ಲಿ ಸಿಸಿಎಚ್ 33 ನ್ಯಾಯಾಧೀಶರ ಮುಂದೆ ಹಾಜರು ಪಡಿಸಲಾಗುತ್ತದೆ. ಆ ಸಂದರ್ಭದಲ್ಲಿ ಇವರಿಗೆ ನ್ಯಾಯಾಧೀಶರು ಬೇಲ್ ನೀಡುತ್ತಾರೋ ಅಥವಾ ಜೈಲಿಗೆ ಕಳುಹಿಸುತ್ತಾರೋ ಎಂಬುದು ಇಂದು ಕಾದುನೋಡಬೇಕು.

Written by - Yashaswini V | Last Updated : Sep 14, 2020, 08:00 AM IST
  • ರಾಜ್ಯದಲ್ಲಿ‌ ಇತ್ತೀಚೆಗೆ ಭಾರೀ ಸದ್ದು ಮಾಡುತ್ತಿರುವ ಡ್ರಗ್ಸ್ ಮಾಫಿಯಾ
  • ಇಂದು ಚಿತ್ರನಟಿಯರಾದ ರಾಗಿಣಿ‌ ದ್ವಿವೇದಿ ಮತ್ತು‌ ಸಂಜನಾ ಗುಲ್ರಾನಿ ಸೇರಿದಂತೆ ಆರು ಮಂದಿಯ ಭವಿಷ್ಯ ನಿರ್ಧಾರ
  • ರಾಗಿಣಿ‌ ದ್ವಿವೇದಿ ಮತ್ತು‌ ಸಂಜನಾ ಗುಲ್ರಾನಿ, ರಾಹುಲ್, ವಿರೇನ್ ಖನ್ನಾ, ರವಿಶಂಕರ್ ಹಾಗೂ ಲೂಯಿ ಸದ್ಯ ಪೊಲೀಸ್ ವಶದಲ್ಲಿದ್ದು ಇಂದಿಗೆ ಇವರೆಲ್ಲರ ಪೊಲೀಸ್ ವಶದ ಅವಧಿ ಮುಗಿಯಲಿದೆ.
ಡ್ರಗ್ಸ್ ಧಂಧೆ: ಇಂದು ರಾಗಿಣಿ‌ ದ್ವಿವೇದಿ, ಸಂಜನಾ ಗುಲ್ರಾನಿ ಸೇರಿದಂತೆ 6 ಮಂದಿಯ ಭವಿಷ್ಯ ನಿರ್ಧಾರ title=

ಬೆಂಗಳೂರು: ರಾಜ್ಯದಲ್ಲಿ‌ ಇತ್ತೀಚೆಗೆ ಭಾರೀ ಸದ್ದು ಮಾಡುತ್ತಿರುವ ಡ್ರಗ್ಸ್ ಮಾಫಿಯಾ (Drug Mafia)ಕ್ಕೆ ಸಂಭವಿಸಿದಂತೆ ಇಂದು ಚಿತ್ರನಟಿಯರಾದ ರಾಗಿಣಿ‌ ದ್ವಿವೇದಿ ಮತ್ತು‌ ಸಂಜನಾ ಗುಲ್ರಾನಿ (Sanjana Gulrani) ಸೇರಿದಂತೆ ಆರು ಮಂದಿಯ ಭವಿಷ್ಯ ನಿರ್ಧಾರವಾಗಲಿದೆ.

ಚಿತ್ರನಟಿಯರಾದ ರಾಗಿಣಿ‌ ದ್ವಿವೇದಿ (Ragini Dwivedi) ಮತ್ತು‌ ಸಂಜನಾ ಗುಲ್ರಾನಿ, ರಾಹುಲ್, ವಿರೇನ್ ಖನ್ನಾ, ರವಿಶಂಕರ್ ಹಾಗೂ ಲೂಯಿ ಸದ್ಯ ಪೊಲೀಸ್ ವಶದಲ್ಲಿದ್ದು ಇಂದಿಗೆ ಇವರೆಲ್ಲರ ಪೊಲೀಸ್ ವಶದ ಅವಧಿ ಮುಗಿಯಲಿದೆ. ಮಧ್ಯಾಹ್ನದ ಬಳಿಕ ಈ ಎಲ್ಲಾ ಆರೋಪಗಳನ್ನು ವಿಡಿಯೋ ಕಾನ್ಫರೆನ್ಸ್ ನಲ್ಲಿ ಸಿಸಿಎಚ್ 33 ನ್ಯಾಯಾಧೀಶರ ಮುಂದೆ ಹಾಜರು ಪಡಿಸಲಾಗುತ್ತದೆ. ಆ ಸಂದರ್ಭದಲ್ಲಿ ಇವರಿಗೆ ನ್ಯಾಯಾಧೀಶರು ಬೇಲ್ ನೀಡುತ್ತಾರೋ ಅಥವಾ ಜೈಲಿಗೆ ಕಳುಹಿಸುತ್ತಾರೋ ಎಂಬುದು ಇಂದು ಕಾದುನೋಡಬೇಕು.

ಡ್ರಗ್ಸ್ ಧಂಧೆ: ಸಿಸಿಬಿ ಪೊಲೀಸರಿಂದ‌ ಪ್ರಶಾಂತ್ ಸಂಬರಗಿ ವಿಚಾರಣೆ

ಡ್ರಗ್ಸ್ ಧಂಧೆಯ ವಿಚಾರಣೆ ನಡೆಸುತ್ತಿರುವ ಸಿಟಿ ಕ್ರೈಂ ಬ್ರಾಂಚ್ (CCB) ಪೊಲೀಸರು ಇಂದು ರಾಗಿಣಿ‌ ದ್ವಿವೇದಿ, ಸಂಜನಾ ಗುಲ್ರಾನಿ, ರಾಹುಲ್, ವಿರೇನ್ ಖನ್ನಾ, ರವಿಶಂಕರ್ ಹಾಗೂ ಲೂಯಿ ಪೈಕಿ ಬಹುತೇಕ ಆರೋಪಿಗಳನ್ನು ಮತ್ತೆ ಹೆಚ್ಚಿನ ವಿಚಾರಣೆಗಾಗಿ ತಮ್ಮ ವಶಕ್ಕೆ ನೀಡಿ ಎಂದು ಕೇಳುವುದು ಅನುಮಾನಸ್ಪದವಾಗಿದೆ‌. ಕೆಲವರು ಸಂಜನಾ ಬಿಟ್ಟು ಉಳಿದೆಲ್ಲಾ ಆರೋಪಿಗಳು ಈಗಾಗಲೇ ಜಾಮೀನಿಗಾಗಿ ಅರ್ಜಿಗಳನ್ನು ಸಲ್ಲಿಸಿದ್ದಾರೆ. ಹಾಗಾಗಿ ಇಂದು 6 ಜನರ ಪೈಕಿ ಯಾರಿಗೆ ಬೇಲು ಸಿಗುತ್ತೆ? ಯಾರನ್ನು ಮತ್ತೆ ಪೋಲಿಸರ ವಶಕ್ಕೆ ಒಪ್ಪಿಸಲಾಗುತ್ತೆ? ಯಾರನ್ನು ಜೈಲಿಗೆ ಕಳುಹಿಸಲಾಗುತ್ತೆ ಎಂಬ ಕುತೂಹಲವೂ ಕೆರಳಿದೆ.

ಡ್ರಗ್ಸ್ ಧಂಧೆಯಲ್ಲಿ ನಾನಿರುವುದು ಸಾಬೀತಾದರೆ ನನ್ನ ಆಸ್ತಿಯನ್ನು ಸರ್ಕಾರಕ್ಕೆ ಕೊಟ್ಟುಬಿಡುತ್ತೇನೆ: ಜಮೀರ್ ಅಹಮದ್

ಇಂದು ಸಂಜನಾ ಬಿಟ್ಟು ಉಳಿದೆಲ್ಲಾ ಆರೋಪಿಗಳು ಸಲ್ಲಿಸಿರುವ ಜಾಮೀನು ಅರ್ಜಿಯ ವಿಚಾರಣೆ ಕೂಡ ನಡೆಯಲಿದೆ. ಆರೋಪಿಗಳಿಗೆ ಜಾಮೀನು ನೀಡಿದರೆ ಹೊರಗಡೆ ಬರುತ್ತಾರೆ. ಪೊಲೀಸರ ವಶಕ್ಕೆ ನೀಡಿದರೆ ಮತ್ತೆ ವಿಚಾರಣೆ ಎದುರಿಸಬೇಕಾಗುತ್ತದೆ. ನ್ಯಾಯಾಂಗ ಬಂಧನಕ್ಕೆ ನೀಡಿದರೆ ಜೈಲಿಗೆ ಹೋಗಬೇಕಾಗುತ್ತದೆ. ಎಲ್ಲವೂ ಇಂದು ನಿರ್ಧಾರವಾಗಲಿದೆ.

Trending News