Drugs Case: ರಿಯಾ ಚಕ್ರವರ್ತಿಗೆ ಷರತ್ತುಬದ್ಧ ಜಾಮೀನು, ಸಂಜೆಯೊಳಗೆ ಬಿಡುಗಡೆ ಸಾಧ್ಯತೆ

ಸುಶಾಂತ್ ಸಿಂಗ್ ರಾಜ್ಪುತ್ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿಯಲ್ಲಿರುವ ತನಿಖೆಯ ನಡುವೆಯೇ ಇಂದು ಮಾದಕ ಪದಾರ್ಥ ಪ್ರಕರಣದಲ್ಲಿ ಬಂಧಿಯಾಗಿರುವ ರಿಯಾ ಚಕ್ರವರ್ತಿಗೆ ಷರತ್ತುಬದ್ಧ ಜಾಮೀನು ದೊರೆತಿದೆ.

Last Updated : Oct 7, 2020, 11:55 AM IST
  • ಮಾದಕ ಪದಾರ್ಥ ಪ್ರಕರಣದಲ್ಲಿ ರಿಯಾ ಚಕ್ರವರ್ತಿಗೆ ಜಾಮೀನು.
  • ರಿಯಾಗೆ ಜಾಮೀನು ದಯಪಾಲಿಸಿದ ಬಾಂಬೆ ಹೈಕೋರ್ಟ್
  • ರಿಯಾ ಸಹೋದರ ಶೋವಿಕ್ ಚಕ್ರವರ್ತಿ ಜಾಮೀನು ಅರ್ಜಿ ತಿರಸ್ಕರಿಸದ ನ್ಯಾಯಪೀಠ.
Drugs Case: ರಿಯಾ ಚಕ್ರವರ್ತಿಗೆ ಷರತ್ತುಬದ್ಧ ಜಾಮೀನು, ಸಂಜೆಯೊಳಗೆ ಬಿಡುಗಡೆ ಸಾಧ್ಯತೆ title=

ಮುಂಬೈ: ಡ್ರಗ್ಸ್ ಪ್ರಕರಣದಲ್ಲಿ ಬಂಧಿಸಲ್ಪಟ್ಟ ರಿಯಾ ಚಕ್ರವರ್ತಿಗೆ ಸುಶಾಂತ್ ಸಿಂಗ್ ರಜಪೂತ್ (Sushant Singh Rajput) ಪ್ರಕರಣಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ತನಿಖೆಯ ಮಧ್ಯೆ ಇಂದು ಷರತ್ತುಬದ್ಧ ಜಾಮೀನು ನೀಡಲಾಗಿದೆ. ರಿಯಾ ಅವರಿಗೆ ಬಾಂಬೆ ಹೈಕೋರ್ಟ್ (Bombay High Court) ಜಾಮೀನು ನೀಡಿದೆ, ಆದರೆ ಅವರ ಸಹೋದರರಾದ ಶೋವಿಕ್ ಮತ್ತು ಅಬ್ದುಲ್ ಬಸಿತ್ ಅವರ ಜಾಮೀನು ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿದೆ.

ಇದನ್ನು ಓದಿ-ಮಾಧ್ಯಮದವರ ಮೇಲೆ ಗಂಬೀರ ಆರೋಪ ಮಾಡಿದ Rhea Chakraborty ಪರ ವಕೀಲ

ರಿಯಾ ಜಾಮೀನು ಅರ್ಜಿಯ ಜೊತೆಗೆ, ಅವರ ಸಹೋದರರಾದ ಶೋವಿಕ್, ಅಬ್ದುಲ್ ಬಸಿತ್ ಪರಿಹಾರ್, ಸ್ಯಾಮ್ಯುಯೆಲ್ ಮಿರಾಂಡಾ, ದೀಪೇಶ್ ಸಾವಂತ್ ಅವರ ಜಾಮೀನು ಅರ್ಜಿಗಳ ವಿಚಾರಣೆಯನ್ನು ಕೂಡ ನ್ಯಾಯಾಲಯ ನಡೆಸಿದೆ. ಇದಕ್ಕೂ ಮೊದಲು ವಿಶೇಷ ಎನ್‌ಡಿಪಿಎಸ್ ನ್ಯಾಯಾಲಯವು ರಿಯಾ ಮತ್ತು ಶೋವಿಕ್ ಅವರ ನ್ಯಾಯಾಂಗ ಬಂಧನವನ್ನು ಅಕ್ಟೋಬರ್ 20 ರವರೆಗೆ ವಿಸ್ತರಿಸಿತ್ತು.

ಇದನ್ನು ಓದಿ- Sushant Case: ತನ್ನ ಅಂತಿಮ ವರದಿ ಸಲ್ಲಿಸಿದ AIIMS, ಮರ್ಡರ್ ಅಲ್ಲ ಆತ್ಮಹತ್ಯೆಗೆ ಶರಣಾಗಿದ್ದ ನಟ ಎಂದ ಮೂಲಗಳು

ಇನ್ನೊಂದೆಡೆ ಸುಶಾಂತ್ ಸಿಂಗ್ ರಾಜ್ಪುತ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈ ಪೊಲೀಸ್ ಕಮಿಷನರ್ ಝೀ ನ್ಯೂಸ್ ಗೆ ನೀಡಿರುವ ತಮ್ಮ ಪ್ರತಿಕ್ರಿಯೆಯಲ್ಲಿ ಗಂಭೀರ ಹೇಳಿಕೆಯೊಂದನ್ನು ನೀಡಿದ್ದಾರೆ. ಸುಶಾಂತ್ ಸಿಂಗ್ ರಾಜ್ಪುತ್ ಪ್ರಕರಣದಲ್ಲಿ ಮುಂಬೈ ಪೊಲೀಸ್ ಹೆಸರಿಗೆ ಧಕ್ಕೆ ತರಲಾಗಿದೆ. ನ್ಯಾಯದ ಹೆಸರಿನಲ್ಲಿ ಸಾಮಾಜಿಕ ಮಾಧ್ಯಮಗಳಲ್ಲಿ ಫೇಕ್ ಖಾತೆಗಳನ್ನು ತೆರೆಯಲಾಗಿದ್ದು, ತಪ್ಪು ಮಾಹಿತಿಗಳ ಪ್ರಸಾರ ಮಾಡಿರುವ ಫೇಕ್ ಸಾಮಾಜಿಕ ಮಾಧ್ಯಮ ಖಾತೆಗಳ ವಿರುದ್ಧ ಕ್ರಮ ಮುಂದುವರೆದಿದೆ ಎಂದಿದ್ದರು.

ಇದನ್ನು ಓದಿ-ರಿಯಾ ಚಕ್ರವರ್ತಿ ಜೊತೆಗೆ ಡ್ರಗ್ಸ್ ಚಾಟ್ ಮಾಡಿರುವುದಾಗಿ ಒಪ್ಪಿಕೊಂಡ Rakul Preet ಸಿಂಗ್, ಆದರೆ..?

ಸುಶಾಂತ್ ಪ್ರಕರಣದ ತನಿಖೆಯಿಂದ ಮುಂಬೈ ಪೊಲೀಸರನ್ನು ತೆಗೆದುಹಾಕುವ ಹಿಂದೆ ಸುನಿಯೋಜಿತ  ಪಿತೂರಿ ನಡೆದಿದೆ ಎಂದು ಅವರು ಹೇಳಿದ್ದಾರೆ. ಈ ಖಾತೆಗಳನ್ನು ವಿದೇಶದಿಂದ ನಿರ್ವಹಿಸಲಾಗುತ್ತಿದೆ ಎಂದು ಮುಂಬೈ ಪೊಲೀಸ್ ಆಯುಕ್ತರು ತಿಳಿಸಿದ್ದಾರೆ. ಅದೇ ಸಮಯದಲ್ಲಿ, ಮಾಧ್ಯಮಗಳ ಒಂದು ಗುಂಪು ಕೂಡ ಸುಳ್ಳು ಪ್ರಚಾರವನ್ನು ನಡೆಸಿದೆ. ಮುಂಬೈ ಪೊಲೀಸರ ತನಿಖೆಯಲ್ಲಿಯೂ ಕೂಡ  ಯಾವುದೇ  ರೀತಿಯ ಕೊರತೆ ಇರಲಿಲ್ಲ ಎಂದು ಸುಪ್ರೀಂ ಕೋರ್ಟ್ ಕೂಡ ಒಪ್ಪಿಕೊಂಡಿದೆ ಎಂದು ಅವರು ಹೇಳಿದ್ದಾರೆ.

Trending News