James: ಬಿರುಗಾಳಿಯಂತೆ 'ಜೇಮ್ಸ್' ಎಂಟ್ರಿ..! ಟಿಕೆಟ್ಸ್‌ ಸೋಲ್ಡ್‌ ಔಟ್‌..!

James: ಪವರ್‌ ಸ್ಟಾರ್..‌ ಹೀಗೆ ಹೆಸರಲ್ಲೇ ಪವರ್‌ ಇಟ್ಕೊಂಡು, ಮನಸಲ್ಲಿ ಅಗಾಧ ಸಮಾಜ ಸೇವೆಯ ಮನೋಭಾವ ಹೊಂದಿದ್ದ ಕನ್ನಡಿಗರ ಪಾಲಿನ ಪ್ರೀತಿಯ ಅಪ್ಪು (Appu) ಇಂದು ನಮ್ಮೊಂದಿಗಿಲ್ಲ. ಆದರೆ ಅವರು ಬಿಟ್ಟು ಹೋದ ಕೊನೆಯ ಚಿತ್ರ 'ಜೇಮ್ಸ್' (James) ಬೆಳ್ಳಿ ತೆರೆಗೆ ಬಿರುಗಾಳಿಯಂತೆ ಎಂಟ್ರಿ ಕೊಡುತ್ತಿದೆ. 

Written by - Malathesha M | Edited by - Yashaswini V | Last Updated : Mar 15, 2022, 03:26 PM IST
  • ಈಗಾಗಲೇ ಬಹುತೇಕ ಎಲ್ಲಾ ಚಿತ್ರಮಂದಿರಗಳಲ್ಲೂ ಮೊದಲ 3 ದಿನಗಳ ಟಿಕೆಟ್‌ ಸೋಲ್ಡ್‌ ಔಟ್‌

    ಬರೀ ಬೆಂಗಳೂರಿನಲ್ಲೇ ಸುಮಾರು 1 ಕೋಟಿ 50 ಲಕ್ಷ ಟಿಕೆಟ್‌ಗಳು ಪ್ರೀ ಬುಕ್‌ ಆಗಿವೆಯಂತೆ
  • ನಮ್ಮ ರಾಜ್ಯದಲ್ಲಿ ಮಾತ್ರವಲ್ಲ, ನೆರೆಯ ತೆಲಂಗಾಣ ಹಾಗೂ ಆಂಧ್ರದಲ್ಲೂ ಅಪ್ಪು ಅಭಿಮಾನಿಗಳು ಟಿಕೆಟ್‌ ಖರೀದಿಗೆ ಮುಗಿಬಿದ್ದಿದ್ದಾರೆ
James: ಬಿರುಗಾಳಿಯಂತೆ  'ಜೇಮ್ಸ್' ಎಂಟ್ರಿ..! ಟಿಕೆಟ್ಸ್‌ ಸೋಲ್ಡ್‌ ಔಟ್‌..! title=
James Film

James: ಜೇಮ್ಸ್..‌ ಜೇಮ್ಸ್‌.. ಜೇಮ್ಸ್..‌ ಕನ್ನಡಿಗರ ಎದೆಯಲ್ಲಿ ಈಗ ಜೇಮ್ಸ್‌ ಬಿಟ್ಟರೆ ಬೇರೆ ಯಾವ ಪದವೂ ಗುನುಗುತ್ತಿಲ್ಲ. ಪವರ್‌ ಸ್ಟಾರ್‌ ಡಾ. ಪುನೀತ್‌ ರಾಜ್‌ ಕುಮಾರ್‌ (Power Star Dr. Puneesh Raj Kumar) ಅಭಿನಯದ ಕೊನೆ ಚಿತ್ರಕ್ಕಾಗಿ ಇಡೀ ಜಗತ್ತೇ ಕಾಯುತ್ತಿದೆ. ಅದರಲ್ಲೂ ವಿದೇಶದಲ್ಲಿರುವ ಕನ್ನಡಿಗರು ಜೇಮ್ಸ್‌ ಸಂಭ್ರಮವನ್ನ ದೊಡ್ಡ ಮಟ್ಟದಲ್ಲಿ ಆಚರಿಸಲು ಸಜ್ಜಾಗಿದ್ದು, ರಾಜಕುಮಾರನ ಅಭಿನಯವನ್ನು ಕಣ್ತುಂಬಿಕೊಳ್ಳಲು ತುದಿಗಾಲಲ್ಲಿ ನಿಂತಿದ್ದಾರೆ.

ಪವರ್‌ ಸ್ಟಾರ್..‌ ಹೀಗೆ ಹೆಸರಲ್ಲೇ ಪವರ್‌ ಇಟ್ಕೊಂಡು, ಮನಸಲ್ಲಿ ಅಗಾಧ ಸಮಾಜ ಸೇವೆಯ ಮನೋಭಾವ ಹೊಂದಿದ್ದ ಕನ್ನಡಿಗರ ಪಾಲಿನ ಪ್ರೀತಿಯ ಅಪ್ಪು (Appu) ಇಂದು ನಮ್ಮೊಂದಿಗಿಲ್ಲ. ಆದರೆ ಅವರು ಬಿಟ್ಟು ಹೋದ ಕೊನೆಯ ಚಿತ್ರ 'ಜೇಮ್ಸ್' (James) ಬೆಳ್ಳಿ ತೆರೆಗೆ ಬಿರುಗಾಳಿಯಂತೆ ಎಂಟ್ರಿ ಕೊಡುತ್ತಿದೆ. ರಿಲೀಸ್‌ಗೂ ಮೊದಲೇ 'ಜೇಮ್ಸ್' ಮಾಡುತ್ತಿರುವ ಸೌಂಡ್‌ ನೋಡಿದ್ರೆ, 'ಜೇಮ್ಸ್' ಬಿಡುಗಡೆ ದಿನ ದೇಶದಲ್ಲಿ ದೀಪಾವಳಿ ಹಬ್ಬ ಬರೋದು ಗ್ಯಾರಂಟಿ.

ಇದನ್ನೂ ಓದಿ- James Pre Release Event : ಅಪ್ಪುನ ಹುಡ್ಕೊಂಡು ಹೋಗ್ತೀನಿ ಎಂದ ರಾಘಣ್ಣ.. ಕಣ್ಣೀರು ಹಾಕಿದ ಶಿವಣ್ಣ!

ಟಿಕೆಟ್‌ ಸಿಗ್ತಾನೆ ಇಲ್ಲ..!
ಇದು ಬರೀ ಸಿನಿಮಾ ಅಲ್ಲ, ಇದೊಂದು ಕನ್ನಡಿಗರ ಭಾವನೆ. ಇದಕ್ಕಾಗಿ ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ ಕನ್ನಡಿಗರು. ಈಗಾಗಲೇ ಬಹುತೇಕ ಎಲ್ಲಾ ಚಿತ್ರಮಂದಿರಗಳಲ್ಲೂ ಮೊದಲ 3 ದಿನಗಳ ಟಿಕೆಟ್‌ ಸೋಲ್ಡ್‌ ಔಟ್‌  (Tickets Sold Out) ಆಗಿದ್ದು, ಬರೀ ಬೆಂಗಳೂರಿನಲ್ಲೇ ಸುಮಾರು 1 ಕೋಟಿ 50 ಲಕ್ಷ ಟಿಕೆಟ್‌ಗಳು ಪ್ರೀ ಬುಕ್‌ ಆಗಿವೆಯಂತೆ. ಹಾಗೇ ರಾಜ್ಯಾದ್ಯಂತ ಇಂತಹದ್ದೇ ಸಂಭ್ರಮವಿದ್ದು ಜಿಲ್ಲಾ ಕೇಂದ್ರಗಳಲ್ಲೂ ಜೇಮ್ಸ್‌ ಟಿಕೆಟ್‌ ಸೋಲ್ಡ್‌ ಔಟ್‌ ಆಗಿದೆ.

ಇದನ್ನೂ ಓದಿ- 'ಜೇಮ್ಸ್‌' ಬಂದ್ರು ಜೇಮ್ಸ್..! ಪರಭಾಷೆಗಳಲ್ಲೂ ಹವಾ ಎಬ್ಬಿಸಿದ ಪುನೀತ್ ಸಿನಿಮಾ ಟೀಸರ್‌

ಅಂದಹಾಗೆ ಇದು ನಮ್ಮ ರಾಜ್ಯದಲ್ಲಿ ಮಾತ್ರವಲ್ಲ, ನೆರೆಯ ತೆಲಂಗಾಣ ಹಾಗೂ ಆಂಧ್ರದಲ್ಲೂ ಅಪ್ಪು ಅಭಿಮಾನಿಗಳು ಟಿಕೆಟ್‌ ಖರೀದಿಗೆ ಮುಗಿಬಿದ್ದಿದ್ದಾರೆ. ಜೊತೆಗೆ ವಿದೇಶದಲ್ಲೂ  'ಜೇಮ್ಸ್' ಸಂಭ್ರಮಕ್ಕೆ ಸಜ್ಜಾಗಿದೆ ಅಭಿಮಾನಿ ಬಳಗ. ಹೀಗೆ ಅಪ್ಪು ಅಭಿಮಾನಿಗಳ ಸಂಭ್ರಮ ಮಗಿಲುಮುಟ್ಟಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News