ಐದು ನಿಮಿಷದಲ್ಲಿ ನಿಮಗೆ ಸಿಕ್ಸ್ ಪ್ಯಾಕ್ ಬೇಕೆ ? ಹಾಗಾದರೆ ಈ ಜಾಹ್ನವಿ ಕಪೂರ್ ವಿಡಿಯೋ ನೋಡಿ

    

Last Updated : Dec 19, 2017, 04:38 PM IST
ಐದು ನಿಮಿಷದಲ್ಲಿ ನಿಮಗೆ ಸಿಕ್ಸ್ ಪ್ಯಾಕ್ ಬೇಕೆ ? ಹಾಗಾದರೆ ಈ ಜಾಹ್ನವಿ ಕಪೂರ್ ವಿಡಿಯೋ ನೋಡಿ title=

ನವದೆಹಲಿ: ಬಾಲಿವುಡ್ ಗೆ ಎಂಟ್ರಿ ಕೊಡುವ ತಯಾರಿಯಲ್ಲಿರುವ ಶ್ರೀದೇವಿ ಮತ್ತು ಬೋನಿ ಕಪೂರ್ ನ ಹಿರಿಯ ಮಗಳು ಜಾಹ್ನವಿ ಕಪೂರ್ ಈಗಾಗಲೇ 'ಧಡಕ್' ಚಿತ್ರಕ್ಕೆ ವಿಶೇಷ ತಯಾರಿ ನಡೆಸಿದ್ದಾಳೆ. ಚಿತ್ರದ ಪೋಸ್ಟರ್  ಬಿಡುಗಡೆಯಾಗಿದ್ದು ಇದರಲ್ಲಿ ತನ್ನ ಲುಕ್ ಮೂಲಕ ಕಂಗೊಳಿಸುತ್ತಿದ್ದಾಳೆ.

 

@jhanvikapoor Let’s work it out #sixpack #workout . . . . . . . . #planks #exercise #abs #jhanvikapoor #jhanvi #janhvi #janhvikapoor #hardbody #workingout #vcrunch #hangingcrunches #workoutvideo #hardwork #gym #personaltranier #sweat #situps . . . . .

A post shared by @ jhanvikapoorfc on

ಚಿತ್ರರಂಗಕ್ಕೆ ಬರುವ ಮೊದಲೇ ಸಾಮಾಜಿಕ ಜಾಲತಾಣಗಳಲ್ಲಿ ಹವಾ ಸೃಷ್ಟಿಸಿರುವ ಈಕೆಗೆ ಇನ್ಸ್ತಾಗ್ರಾಂ ಮತ್ತು ಟ್ವಿಟ್ಟರ್ ನಲ್ಲಿ ಹಲವಾರು ಅಭಿಮಾನಿ ಕ್ಲಬ್ ಗಳನ್ನು ಹೊಂದಿದ್ದಾಳೆ. ಇತ್ತೀಚಿಗೆ ಜಾಹ್ನವಿಯ ಫಿಟ್ ನೆಸ್ ತರಬೇತಿಯ ವಿಡಿಯೋ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗಿದ್ದು ಇದರಲ್ಲಿ ಇಕೆ ಐದು ನಿಮಿಷಗಳಲ್ಲಿ ಸಿಕ್ಸ್ ಪ್ಯಾಕ್ ಬೆಳಸುವ ಬಗೆಯನ್ನು ಪ್ರಾಯೋಗಿಕವಾಗಿ ಮಾಡಿ ತೋರಿಸುವ ಮೂಲಕ ಎಲ್ಲರನ್ನು ಆಶ್ಚರ್ಯಚಕಿತಗೊಳಿಸಿದ್ದಾಳೆ. 

ಇದು ಸಾಧ್ಯವೇ ಎನ್ನುವುದು ನಿಮ್ಮ ಪ್ರಶ್ನೆ ಅಲ್ಲವೇ ?  ನಿಜ ಹೇಳಬೇಕೆಂದರೆ ಈ ವಿಡಿಯೋ ಜಾಹ್ನವಿ ತನ್ನ ಜಿಮ್ ವರ್ಕ್ ಮುಗಿದ ತಕ್ಷಣ ತಮಾಷೆಗಾಗಿ ಐದು ನಿಮಿಷದಲ್ಲಿ ಸಿಕ್ಸ್ ಪ್ಯಾಕ್ ಬೆಳೆಸುವುದನ್ನು ಹೇಳಿಕೊಡುವ ಪ್ರಯತ್ನ ಮಾಡಿದ್ದಾಳೆ.ಧಡಕ್ ಚಿತ್ರಕ್ಕಾಗಿ ತನ್ನ ದೇಹವನ್ನು ಮಾಗಿಸುತ್ತಿರುವ ಈ ನಟಿ ಮುಂದಿನ ದಿನಗಳಲ್ಲಿ ಬಾಲಿವುಡ್ ನಲ್ಲಿ ದೊಡ್ಡ ಮಟ್ಟದ ಸುದ್ದಿ ಮಾಡುತ್ತಾಳೆ ಎನ್ನುವುದಂತೂ ನಿಜ ಎನ್ನಬಹುದು.... ಹಾಗಾದರೆ ನೀವು ಕಾಯ್ತಿದ್ದಿರಲ್ಲಾ ಆಕೆಯ 'ಧಡಕ್' ಗಾಗಿ.!

Trending News