ಯಶ್‌ ಪ್ಯಾನ್‌ ಇಂಡಿಯಾ ಸ್ಟಾರ್‌ ಆಗಿ ಮಿಂಚಲು ರಾಧಿಕಾ ಸಹಕಾರ ಹೇಗಿತ್ತು ಗೊತ್ತಾ..?

Radhika Support to Yash : ಒಂದು ಗಂಡಿನ ಯಶಸ್ಸಿನ ಹಿಂದೆ ಒಬ್ಬ ಮಹಿಳೆ ಇರುತ್ತಾಳೆ ಎಂಬ ಮಾತಿನಂತೆ ರಾಕಿಂಗ್‌ ಸ್ಟಾರ್‌ ಯಶ್‌ ಅವರ ಪ್ರತಿ ಯಶಸ್ಸಿನ ಹಿಂದೆ ಅವರ ಪತ್ನಿ ರಾಧಿಕಾ ಪಂಡಿತ್‌ ಅವರ ಸಹಕಾರ ಬಹಳಷ್ಟಿದೆ. ಹಾಗಾದರೇ ಯಶ್‌ ಪ್ಯಾನ್‌ ಇಂಡಿಯಾ ಸ್ಟಾರ್‌ ಆಗಿ ಮಿಂಚಲು ರಾಧಿಕಾ ಅವರ ಸಪೋರ್ಟ್‌ ಹೇಗಿತ್ತು ಎನ್ನುವುದರ ಮಾಹಿತಿ ಇಲ್ಲಿದೆ.   

Written by - Savita M B | Last Updated : Aug 9, 2023, 05:30 PM IST
  • ಒಟ್ಟಿಗೆ ಸಿನಿಜೀವನಕ್ಕೆ ಕಾಲಿಟ್ಟು ಯಶಸ್ಸುಗಳಿಸಿದ ಜೋಡಿ
  • ಪ್ರತಿಯೊಂದು ಹೆಜ್ಜೆಯಲ್ಲೂ ಒಬ್ಬರನ್ನೋಬ್ಬರು ಸಪೋರ್ಟ್‌ ಮಾಡುವ ಜೋಡಿ
  • ಯಾವುದೇ ಸಿನಿಮಾ ಪ್ರಾಜೆಕ್ಟ್‌ಗೆ ಸಹಿ ಹಾಕುವ ಮುನ್ನ ಇಬ್ಬರು ಪರಸ್ಪರ ಯೋಚಿಸಿ, ಚರ್ಚಿಸಿ ನಿರ್ಧಾರ ತೆಗೆದುಕೊಳ್ಳುವ ಜೋಡಿ
ಯಶ್‌ ಪ್ಯಾನ್‌ ಇಂಡಿಯಾ ಸ್ಟಾರ್‌ ಆಗಿ ಮಿಂಚಲು ರಾಧಿಕಾ ಸಹಕಾರ ಹೇಗಿತ್ತು ಗೊತ್ತಾ..?  title=

Yash-Radhika : ನಂದಗೋಕುಲದಿಂದ ನಟನೆ ಪ್ರಾರಂಭಿಸಿದ ರಾಧಿಕಾ ಪಂಡಿತ್‌ ಮೊಗ್ಗಿನ ಮನಸ್ಸು ಸಿನಿಮಾದಿಂದ ಚಂದನವನದಲ್ಲಿ ನಾಯಕಿಯಾಗಿ ಎಂಟ್ರಿಕೊಟ್ಟರು. ನಂತರ ತಮ್ಮ ನಟನೆಯ ಮೂಲಕ ಕರ್ನಾಟಕ ರಾಜ್ಯ ಪ್ರಶಸ್ತಿ, ಸೈಮಾ, ಫಿಲ್ಮ್‌ ಫೇರ್‌ ಸೇರಿದಂತೆ ಹತ್ತಕ್ಕೂ ಹೆಚ್ಚು ಬಾರಿ ಅತ್ಯುತ್ತಮ ನಟಿ ಪ್ರಶಸ್ತಿ ಪಡೆದಿದ್ದಾರೆ. ರಾಧಿಕಾ ಅವರು ತಮ್ಮ ಪತಿ ಯಶ್‌ ಅವರ ಜೊತೆ ನಾಲ್ಕು ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿದ್ದಾರೆ. 

ಯಾವುದೇ ಗಾಸಿಪ್‌ ಅಂತೆ ಕಂತೆಗಳಿಲ್ಲದೇ ಸ್ಯಾಂಡಲ್‌ವುಡ್‌ ಸಿಂಡ್ರೆಲಾ ಎಂದೇ ಖ್ಯಾತಿ ಪಡೆದಿರುವ ನಟಿ ರಾಧಿಕಾ ಪಂಡಿತ್‌ ಅವರು ಯಶ್‌ ಪ್ಯಾನ್‌ ಇಂಡಿಯಾ ಸ್ಟಾರ್‌ ಆಗಿ ಬೆಳೆಯಲು ನೀಡಿದ ಪ್ರೋತ್ಸಾಹ ಅಭುತಪೂರ್ಣವಾದುದು. ಹಾಗಾದರೆ ಹೇಗಿತ್ತು ಸಹಕಾರ ಎನ್ನುವುದನ್ನು ತಿಳಿಯಲು ಮುಂದೆ ಓದಿ..

ಇದನ್ನೂ ಓದಿ-Spandana Vijay Funeral: ಹರಿಶ್ಚಂದ್ರ ಘಾಟ್​​ನಲ್ಲಿ ಸ್ಪಂದನಾ ಅಂತ್ಯಕ್ರಿಯೆ

ಒಟ್ಟಿಗೆ ಸಿನಿಜೀವನಕ್ಕೆ ಕಾಲಿಟ್ಟು ಯಶಸ್ಸುಗಳಿಸಿದ ರಾಕಿಂಗ್‌ ಸ್ಟಾರ್‌ ಯಶ್‌ ಹಾಗೂ ರಾಧಿಕಾ ಪಂಡಿತ್‌ ಪ್ರತಿಯೊಂದು ಹೆಜ್ಜೆಯಲ್ಲೂ ಒಬ್ಬರನ್ನೋಬ್ಬರು ಸಪೋರ್ಟ್‌ ಮಾಡುತ್ತಿದ್ದರು. ಯಶ್‌ ಸಿನಿಮಾ ಆಯ್ಕೆಯಲ್ಲಿ ರಾಧಿಕಾ ಜೊತೆಯಾಗಿದ್ದು, ಸಲಹೆ ಸೂಚನೆಗಳನ್ನು ನೀಡುತ್ತಿದ್ದರು. 

ಈ ಹಿಂದೆ ಯಶ್‌ ತನ್ನ ಪತ್ನಿ  ಬಗ್ಗೆ ಒಂದೆರಡು ಮಾತನಾಡಿದ್ದರು ಅದರಲ್ಲಿ ನಾನು ಹಲವು ಭಾಷೆಗಳಲ್ಲಿ ಚಿರಪರಿಚಿತ ನಟನಾದರೂ ನಟನೆಯಲ್ಲಿ ರಾಧಿಕಾ ನನಗಿಂತಲೂ ಒಳ್ಳೆಯ ನಟಿ. ಚಿತ್ರವನ್ನು ಆಯ್ಕೆ ಮಾಡಿಕೊಳ್ಳುವಾಗ ಹೆಚ್ಚು ಜಾಗರೂಕತೆವಹಿಸುತ್ತಾರೆ ಎಂದಿದ್ದರು. 

ಯಾವುದೇ ಸಿನಿಮಾ ಪ್ರಾಜೆಕ್ಟ್‌ಗೆ ಸಹಿ ಹಾಕುವ ಮುನ್ನ ಇಬ್ಬರು ಪರಸ್ಪರ ಯೋಚಿಸಿ, ಚರ್ಚಿಸಿ ನಿರ್ಧಾರ ತೆಗೆದುಕೊಳ್ಳುತಾರಂತೆ. ಹೀಗೆ ಅನ್ಯೂನ್ಯತೆ ಎನ್ನುವುದು ಇವರಿಬ್ಬರ ಜೀವನದಲ್ಲಿ ಉಕ್ಕಿ ಹರಿಯುತ್ತಿದೆ. ಈ ಅದ್ಭುತ ಜೋಡಿಗೆ ಯಾವುದೇ ದೃಷ್ಠಿ ಬೀಳದೆ ಇರಲಿ..

ಇದನ್ನೂ ಓದಿ- RRR ದಾಖಲೆ ಮುರಿದ ಸಲಾರ್ : ಬಿಡುಗಡೆಗೂ ಮುನ್ನವೇ ಹಿಸ್ಟರಿ ಕ್ರಿಯೆಟ್‌ ಮಾಡಿತು ಕನ್ನಡಿಗನ ಸಿನಿಮಾ 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News