Bigg Boss Kannada ಮನೆಯಿಂದ ಹೊರ ಬಂದ ಆರ್ಯವರ್ಧನ್‌ ಗಳಿಕೆ ಎಷ್ಟು ಗೊತ್ತಾ?

Bigg Boss Kannada Season 9 : ಬಿಗ್ ಬಾಸ್ ಕನ್ನಡ ಸೀಸನ್ 9 ಅಂತಿಮ ಹಂತ ತಲುಪಿದ್ದು, ಸೋಮವಾರ ರಾತ್ರಿ ಸರ್‌ಪ್ರೈಸ್‌ ಎಲಿಮಿನೇಷನ್ ಪ್ರಕ್ರಿಯೆ ನಡೆದಿದೆ. ಬಿಗ್ ಬಾಸ್ ಮನೆಯಿಂದ ಆರ್ಯವರ್ಧನ್ ಗುರೂಜಿ ಎಲಿಮಿನೇಟ್‌ ಆಗಿದ್ದಾರೆ. ಮಿಡ್‍ನೈಟ್‍ ಎಲಿಮಿನೇಷನ್‍ನಲ್ಲಿ ಗುರೂಜಿ ಬಿಗ್ ಬಾಸ್ ಮನೆಯಿಂದ ಹೊರ ಬಂದಿದ್ದಾರೆ.   

Written by - Chetana Devarmani | Last Updated : Dec 27, 2022, 04:34 PM IST
  • ಬಿಗ್ ಬಾಸ್ ಕನ್ನಡ ಸೀಸನ್ 9 ಫಿನಾಲೆ ವೀಕ್‌
  • ಮನೆಯಿಂದ ಹೊರ ಬಂದ ಆರ್ಯವರ್ಧನ್‌
  • ಹೊರ ಬಂದ ಆರ್ಯವರ್ಧನ್‌ ಗಳಿಕೆ ಎಷ್ಟು ಗೊತ್ತಾ?
Bigg Boss Kannada ಮನೆಯಿಂದ ಹೊರ ಬಂದ ಆರ್ಯವರ್ಧನ್‌ ಗಳಿಕೆ ಎಷ್ಟು ಗೊತ್ತಾ? title=
ಆರ್ಯವರ್ಧನ್‌

Bigg Boss Kannada : ಬಿಗ್ ಬಾಸ್ ಕನ್ನಡ ಸೀಸನ್ 9 ಅಂತಿಮ ಹಂತ ತಲುಪಿದ್ದು, ಸೋಮವಾರ ರಾತ್ರಿ ಸರ್‌ಪ್ರೈಸ್‌ ಎಲಿಮಿನೇಷನ್ ಪ್ರಕ್ರಿಯೆ ನಡೆದಿದೆ. ಬಿಗ್ ಬಾಸ್ ಮನೆಯಿಂದ ಆರ್ಯವರ್ಧನ್ ಗುರೂಜಿ ಎಲಿಮಿನೇಟ್‌ ಆಗಿದ್ದಾರೆ. ಮಿಡ್‍ನೈಟ್‍ ಎಲಿಮಿನೇಷನ್‍ನಲ್ಲಿ ಗುರೂಜಿ ಬಿಗ್ ಬಾಸ್ ಮನೆಯಿಂದ ಹೊರ ಬಂದಿದ್ದಾರೆ. ಈ ವಾರಾಂತ್ಯದ ಎಪಿಸೋಡ್‍ನಲ್ಲಿ ಆರ್ಯವರ್ಧನ್ ಗುರೂಜಿ ಉತ್ತಮ ಆಟ ಆಡಿದ್ದಕ್ಕೆ ಮೆಚ್ಚುಗೆಯ ಚಪ್ಪಾಳೆ ಗಿಟ್ಟಿಸಿಕೊಂಡಿದ್ದರು. ಈ ಮಧ್ಯೆ ಬಿಗ್‌ ಬಾಸ್‌ ಕನ್ನಡ ಸೀಸನ್‌ 9 ರಲ್ಲಿ ಸಖತ್‌ ರಂಜಿಸಿದ್ದ ಆರ್ಯವರ್ಧನ್‌ ಗುರೂಜಿ ಪಡೆದ ಸಂಭಾವನೆ ಬಗ್ಗೆ ಎಲ್ಲರಲ್ಲೂ ಕುತೂಹಲ ಕೆರಳಿಸಿದೆ. 

ಇದನ್ನೂ ಓದಿ : ಕುತೂಹಲ ಮೂಡಿಸಿದೆ ‘ಜೂಲಿಯೆಟ್ 2’ ಚಿತ್ರದ ಫಸ್ಟ್ ಲುಕ್

ಬಿಗ್ ಬಾಸ್ ಕನ್ನಡ ಸೀಸನ್‌ 9 ರ ಗ್ರ್ಯಾಂಡ್ ಫಿನಾಲೆ ವಾರಾಂತ್ಯದಲ್ಲಿ ಡಿಸೆಂಬರ್ 31, 2022 ರಂದು ನಡೆಯಲಿದೆ. ಮೂಲಗಳ ಪ್ರಕಾರ ಆರ್ಯವರ್ಧನ್ ಗುರೂಜಿ ಕಾರ್ಯಕ್ರಮದಿಂದ ಎಲಿಮಿನೇಟ್ ಆಗಿದ್ದಾರೆ. ಆರ್ಯವರ್ಧನ್ ಗುರೂಜಿ ವಾರಕ್ಕೆ 40 ಸಾವಿರ ರೂ. ಸಂಭಾವನೆ ಪಡೆದಿದ್ದರು. ಆರ್ಯವರ್ಧನ್ ಗುರೂಜಿಯ ಬಿಗ್‌ ಬಾಸ್‌ ಮನೆಯಲ್ಲಿ 15 ವಾರಗಳ ಒಟ್ಟು ಗಳಿಕೆ 25 ಲಕ್ಷ ರೂ. ಪಡೆದಿದ್ದಾರೆ. ಆದಾಗ್ಯೂ, ಆರ್ಯವರ್ಧನ್ ಗುರೂಜಿಯವರ ಅಧಿಕೃತ ಗಳಿಕೆ ಇನ್ನೂ ತಿಳಿದುಬಂದಿಲ್ಲ. 

ಬಿಗ್ ಬಾಸ್ ಮನೆಯಲ್ಲಿ ಇದ್ದಷ್ಟು ದಿನವೂ ಜನಮನ ರಂಜಿಸುವಲ್ಲಿ ಯಶಸ್ವಿಯಾಗಿದ್ದ ಆರ್ಯವರ್ಧನ್ ಗುರೂಜಿ ಫೈನಲ್‍ ತಲುಪುತ್ತಾರೆ ಅಂತಾನೇ ಫ್ಯಾನ್ಸ್ ಖುಷಿಯಲ್ಲಿದ್ದರು. ಆದರೆ ಅನಿವಾರ್ಯವಾಗಿ ಬಿಗ್ ಬಾಸ್ ಮನೆಯಿಂದ ಹೊರಬಿದ್ದಿರುವುದು ಅಭಿಮಾನಿಗಳಿಗೆ ಒಂದು ರೀತಿ ಶಾಕ್ ಆಗಿದೆ.

ಇದನ್ನೂ ಓದಿ : ಮಿಡ್‍ನೈಟ್ ಎಲಿಮಿನೇಷನ್, ‘ಬಿಗ್ ಬಾಸ್’ ಮನೆಯಿಂದ ಗುರೂಜಿ ಔಟ್!

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News