ಜವಾನ್' ಚಿತ್ರ ನಿರ್ದೇಶಕ ಅಟ್ಲಿ ಪಡೆದ ಸಂಭಾವನೆ ಎಷ್ಟು ಗೊತ್ತಾ..! ಫ್ಯಾನ್ಸ್‌ ಶಾಕ್‌

Atlee remuneration for Jawan : ತಮಿಳು ನಿರ್ದೇಶಕ ಅಟ್ಲಿ 'ಜವಾನ್' ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದ್ದಾರೆ. ಇಂದು ಬಿಡುಗಡೆಯಾದ ಚಿತ್ರಕ್ಕೆ ಪ್ರೇಕ್ಷಕರ ಮಹಾಶಯ ಫಿದಾ ಆಗಿದ್ದಾನೆ. ಇನ್ನು ಈ ಚಿತ್ರಕ್ಕೆ ಅಟ್ಲಿ ಪಡೆದ ಸಂಭಾವನೆ ಕುರಿತು ಸೋಷಿಯಲ್‌ ಮೀಡಿಯಾದಲ್ಲಿ ಚರ್ಚೆ ಶುರುವಾಗಿದೆ. ಈ ಕುರಿತು ಕಂಪ್ಲೀಟ್‌ ಮಾಹಿತಿ ಇಲ್ಲಿದೆ.

Written by - Krishna N K | Last Updated : Sep 7, 2023, 05:35 PM IST
  • ಅಟ್ಲಿ 'ಜವಾನ್' ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದ್ದಾರೆ.
  • ಇಂದು ಬಿಡುಗಡೆಯಾದ ಚಿತ್ರಕ್ಕೆ ಪ್ರೇಕ್ಷಕರ ಮಹಾಶಯ ಫಿದಾ ಆಗಿದ್ದಾನೆ.
  • ಈಗ ಅಟ್ಲಿ ಸಂಭಾವನೆ ಕುರಿತು ಸೋಷಿಯಲ್‌ ಮೀಡಿಯಾದಲ್ಲಿ ಚರ್ಚೆ ಶುರುವಾಗಿದೆ.
ಜವಾನ್' ಚಿತ್ರ ನಿರ್ದೇಶಕ ಅಟ್ಲಿ ಪಡೆದ ಸಂಭಾವನೆ ಎಷ್ಟು ಗೊತ್ತಾ..! ಫ್ಯಾನ್ಸ್‌ ಶಾಕ್‌ title=

Jawan movie updates : ಕಾಲಿವುಡ್‌ನಲ್ಲಿ ಕೆಲವೇ ಚಿತ್ರಗಳನ್ನು ನಿರ್ದೇಶಿಸಿದ್ದರೂ ಅಭಿಮಾನಿಗಳ ಹೃದಯದಲ್ಲಿ ಸ್ಥಾನ ಪಡೆದ ವ್ಯಕ್ತಿ ಅಟ್ಲಿ ಕುಮಾರ್‌. ʼರಾಜಾ ರಾಣಿʼ ಸಿನಿಮಾಗೆ ಆಕ್ಷನ್‌ ಕಟ್‌ ಹೇಳುವ ಮೂಲಕ ಸ್ವತಂತ್ರ ನಿರ್ದೇಶಕರಾಗಿ ಸಿನಿರಂಗ ಪ್ರವೇಶಿಸಿದ ಅಟ್ಲಿ ತಮ್ಮ ಮೊದಲ ಚಿತ್ರದಿಂದಲೇ ಯಶಸ್ಸು ಪಡೆದರು. ಅದಕ್ಕೂ ಮುನ್ನ ನಿರ್ದೇಶಕ ಶಂಕರ್ ಬಳಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದರು.

ನಂತರ ಅಟ್ಲಿ ಕುಮಾರ್‌ ಅವರು ನಟ ವಿಜಯ್ ಅವರ ತೇರಿ, ಮೆರ್ಸಲ್, ಬಿಗಿಲ್ ಚಿತ್ರಗಳನ್ನು ನಿರ್ದೇಶಿಸಿದರು. ಈ ಸಿನಿಮಾಗಳು ಬ್ಲಾಕ್ಬಸ್ಟರ್ ಹಿಟ್‌ ಆದವು. ಇದೀಗ ಶಾರುಖ್‌ ಖಾನ್‌ ನಟನೆಯ 'ಜವಾನ್' ಚಿತ್ರದ ಮೂಲಕ ಬಾಲಿವುಡ್‌ಗೂ ಕಾಲಿಟ್ಟಿದ್ದು, ಶುರುವಿನಲ್ಲೇ ಅಬ್ಬರಿಸಿದ್ದಾರೆ. 

ಇದನ್ನೂ ಓದಿ: ವಿಕ್ಕಿ ವರುಣ್ - ಧನ್ಯಾ ರಾಮಕುಮಾರ್ ಅಭಿನಯದ "ಕಾಲಾಪತ್ಥರ್" ಚಿತ್ರದಲ್ಲಿ ಹಾಡುಗಳ ದಿಬ್ಬಣ್ಣ

ಹೌದು... 'ಬಾಲಿವುಡ್‌ನ ಬಾದ್‌ ಶಾ' ಶಾರುಖ್ ಖಾನ್ ಅಭಿನಯದ ಅಟ್ಲಿ ನಿರ್ದೇಶನದ ಚಿತ್ರ ಜವಾನ್. ಈ ಚಿತ್ರ ಇಂದು (ಸೆಪ್ಟೆಂಬರ್ 7) ಬಿಡುಗಡೆಯಾಗಿದ್ದು, ಉತ್ತಮ ಪ್ರದರ್ಶನ ಕಾಣುತ್ತಿದೆ. ಈ ಸಿನಿಮಾದಲ್ಲಿ ನಯನತಾರಾ, ವಿಜಯ್ ಸೇತುಪತಿ, ಪ್ರಿಯಾಮಣಿ, ದೀಪಿಕಾ ಪಡುಕೋಣೆ, ಸನ್ಯಾ ಮಲ್ಹೋತ್ರಾ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.

‘ಬಿಗಿಲ್’ ಚಿತ್ರದ ನಂತರ ಅಟ್ಲಿ ನಿರ್ದೇಶಿಸುತ್ತಿರುವ ಸಿನಿಮಾ ಜವಾನ್‌. ಹೀಗಾಗಿ ಸಿನಿಮಾದ ಬಗ್ಗೆ ಅಭಿಮಾನಿಗಳಲ್ಲಿ ನಿರೀಕ್ಷೆ ಹೆಚ್ಚಿತ್ತು. ಅಷ್ಟೇ ಅಲ್ಲ, ಜವಾನ್‌ನಲ್ಲಿ ಹಲವು ತಮಿಳು ಕ್ರಿಯೇಟರ್‌ಗಳು ಸಹ ಕೆಲಸ ಮಾಡಿದ್ದಾರೆ. ಹಾಗಾಗಿ ಅಭಿಮಾನಿಗಳು ಈ ಚಿತ್ರವನ್ನು ನೋಡಲು ಕಾಯುತ್ತಿದ್ದರು. 

ಇದನ್ನೂ ಓದಿ: ಬಿಗ್ ಬಾಸ್ ಕನ್ನಡ ಸೀಸನ್ 10 ರ ಸ್ಪರ್ಧಿಗಳ ಪಟ್ಟಿ ವೈರಲ್

ಇನ್ನು ಜವಾನ್‌ ಚಿತ್ರವನ್ನು ನಿರ್ದೇಶಿಸಲು ಅಟ್ಲಿ ಪಡೆದಿರುವ ಸಂಭಾವನೆ ಕುರಿತು ಮಾಹಿತಿ ಬಹಿರಂಗವಾಗಿದೆ. ಅಟ್ಲಿ ಪ್ರತಿ ಚಿತ್ರಕ್ಕೆ 52 ಕೋಟಿ ಪಡೆಯುತ್ತಾರೆ. ಅದರಂತೆ ತಾವು ನಿರ್ದೇಶಿಸುವ ಚಿತ್ರಗಳನ್ನು ಬ್ಲಾಕ್ ಬಸ್ಟರ್ ಹಿಟ್ ಆಗುವಂತೆ ನೋಡಿಕೊಳ್ಳುತ್ತಾರೆ. ಆದ್ರೆ, ಜವಾನ್ ಚಿತ್ರ ನಿರ್ದೇಶಿಸಲು ಸಂಭಾವನೆ ಕಡಿಮೆ ಮಾಡುವ ಕುರಿತು ಮಾತುಕತೆ ನಡೆದಿತ್ತು ಎನ್ನಲಾಗಿದೆ. ಅದರಂತೆ ಕೇವಲ 30 ಕೋಟಿ ಪಡೆಯುವಂತೆ ಅಟ್ಲಿಗೆ ಕೇಳಿಕೊಳ್ಳಲಾಗಿತ್ತಂತೆ. ಆದರೆ ಅಟ್ಲಿ ಅದಕ್ಕೆ ಒಪ್ಪದ ಹಿನ್ನೆಲೆ ಅವರು ಕೇಳಿದ ಮೊತ್ತವನ್ನು ಪಾವತಿಸಿದ್ದಾರೆ ಎಂದು ವರದಿಯಾಗಿದೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News