ಬಿಡುಗಡೆಗೆ ಸಿದ್ಧವಾಯ್ತು ಕನ್ನಡ ನಿರ್ಮಾಪಕರ ಹಿಂದಿ ಸಿನಿಮಾ

ದಿಲ್ ಹೈ ಗ್ರೇ ಶೀರ್ಷಿಕೆಯುಳ್ಳ ಆ ಚಿತ್ರ ಇದೇ ಜುಲೈನಲ್ಲಿ ತೆರೆಗೆ ಬರಲಿದೆ. ಶೀರ್ಷಿಕೆಯೇ ಹೇಳುವಂತೆ ಇದೊಂದು ಕ್ರೈಂ ಥ್ರಿಲ್ಲರ್ ಸಿನಿಮಾವಾಗಿದ್ದು, ಪ್ರಧಾನ ಮೂರು ಪಾತ್ರಗಳ ಹಿನ್ನೆಲೆಯಲ್ಲಿ ಸಿನಿಮಾ ಸಾಗಲಿದೆ.

Written by - YASHODHA POOJARI | Last Updated : Apr 8, 2022, 04:16 PM IST
  • ದಿಲ್ ಹೈ ಗ್ರೇ ಚಿತ್ರ ಜುಲೈ ತಿಂಗಳಲ್ಲಿ ಬಿಡುಗಡೆ
  • ಊರ್ವಶಿ ರೌಟೇಲಾ ನಟನೆಯ ದಿಲ್ ಹೈ ಗ್ರೇ ಚಿತ್ರ
  • ಎಂ. ರಮೇಶ್ ರೆಡ್ಡಿ ಬಂಡವಾಳ
ಬಿಡುಗಡೆಗೆ ಸಿದ್ಧವಾಯ್ತು ಕನ್ನಡ ನಿರ್ಮಾಪಕರ ಹಿಂದಿ ಸಿನಿಮಾ title=
Dil Hai Gray

ಸ್ಯಾಂಡಲ್​ವುಡ್​ನಲ್ಲಿ ಉಪ್ಪು ಹುಳಿ ಖಾರ, ನಾತಿಚರಾಮಿ, ಪಡ್ಡೆಹುಲಿ, 100, ಗಾಳಿಪಟ 2 ಸೇರಿ ಹಲವು ಸಿನಿಮಾಗಳನ್ನು ನಿರ್ಮಾಣ ಮಾಡಿರುವ ನಿರ್ಮಾಪಕ ಎಂ. ರಮೇಶ್ ರೆಡ್ಡಿ, ತಮ್ಮ ಹೋಮ್ ಬ್ಯಾನರ್ ಸೂರಜ್ ಪ್ರೊಡಕ್ಷನ್ಸ್ ಅಡಿಯಲ್ಲಿ ಹಿಂದಿ ಸಿನಿಮಾ ಪ್ರೊಡ್ಯೂಸ್ ಮಾಡುತ್ತಿರುವುದು ಗೊತ್ತಿರುವ ಸಂಗತಿ. ಇದೀಗ ಆ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ. 

ಇದನ್ನು ಓದಿ: ಏಪ್ರಿಲ್ 9ರಂದು ಎಫ್‌ಸಿಎಲ್‌ಗೆ ಚಾಲನೆ: ಓನ್ಲಿ ಕನ್ನಡ ಒಟಿಟಿಯಲ್ಲಿ ನೇರಪ್ರಸಾರ

ದಿಲ್ ಹೈ ಗ್ರೇ ಶೀರ್ಷಿಕೆಯುಳ್ಳ ಆ ಚಿತ್ರ ಇದೇ ಜುಲೈನಲ್ಲಿ ತೆರೆಗೆ ಬರಲಿದೆ. ಶೀರ್ಷಿಕೆಯೇ ಹೇಳುವಂತೆ ಇದೊಂದು ಕ್ರೈಂ ಥ್ರಿಲ್ಲರ್ ಸಿನಿಮಾವಾಗಿದ್ದು, ಪ್ರಧಾನ ಮೂರು ಪಾತ್ರಗಳ ಹಿನ್ನೆಲೆಯಲ್ಲಿ ಸಿನಿಮಾ ಸಾಗಲಿದೆ. ವಿನೀತ್ ಪೊಲೀಸ್ ಇನ್​ಸ್ಪೆಕ್ಟರ್ ಆಗಿ ಕಾಣಿಸಿಕೊಂಡರೆ, ಅಕ್ಷಯ್ ಆನ್​ಲೈನ್​ನಲ್ಲಿ ಯುವತಿಯರನ್ನು ಬಲೆಗೆ ಬೀಳಿಸಿಕೊಳ್ಳುವವನಾಗಿ ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ನಾಯಕಿಯಾಗಿ ‘ಐರಾವತ’ ಖ್ಯಾತಿಯ ಊರ್ವಶಿ ರೌಟೇಲಾ ನಟಿಸಿದ್ದಾರೆ. ಸುಸಿ ಗಣೇಶನ್ ನಿರ್ದೇಶನದ ಜವಾಬ್ದಾರಿ ಹೊತ್ತಿದ್ದು, ತಾರಿಕ್ ಮಹಮ್ಮದ್, ನವೀನ್ ಪ್ರಕಾಶ್ ಚಿತ್ರದ ಬರವಣಿಗೆಯಲ್ಲಿ ಸಾಥ್ ನೀಡಿದ್ದಾರೆ.

ಈ ಬಗ್ಗೆ ಒಂದಷ್ಟು ಮಾಹಿತಿ ನೀಡುವ ನಿರ್ಮಾಪಕ ರಮೇಶ್ ರೆಡ್ಡಿ, ಈ ಚಿತ್ರದ ಕಥೆಯೇ ರೋಚಕವಾಗಿದೆ. ಈ ಸಿನಿಮಾದಲ್ಲಿ ಕಥೆಯೇ ಹೀರೋ. ಕ್ರೈಂ ಥ್ರಿಲ್ಲರ್ ಎಳೆಯಲ್ಲಿ ಸಾಗುವ ಈ ಸಿನಿಮಾ ಪ್ರಸ್ತುತ ಕಾಲಘಟ್ಟ ಸೂಕ್ತವಾಗಿದೆ. ಇಂಥ ಸಿನಿಮಾ ಕಟ್ಟಿಕೊಡುವಲ್ಲಿ ನಿರ್ದೇಶಕರು ಮತ್ತವರ ತಂಡ ಯಶಸ್ವಿಯಾಗಿದೆ. ಸದ್ಯ ಬಹುತೇಕ ಕೆಲಸಗಳು ಮುಕ್ತಾಯದ ಹಂತದಲ್ಲಿದೆ. ಜುಲೈನಲ್ಲಿ ತೆರೆಗೆ ಬರಲಿದ್ದೇವೆ ಎನ್ನುತ್ತಾರೆ.

ಇದನ್ನು ಓದಿ: ಇಳಯರಾಜ ಸಂಗೀತ ನಿರ್ದೇಶನದ "ಪ್ರೀತ್ಸು" ಚಿತ್ರದ ಹಾಡುಗಳ ಬಿಡುಗಡೆ

ನಿರ್ದೇಶಕ ಸುಸಿ ಗಣೇಶನ್ ಸಹ ಅಷ್ಟೇ ಎಗ್​ಸೈಟ್​ಮೆಂಟ್​ನಲ್ಲಿದ್ದಾರೆ. ಇಡೀ ಜಗತ್ತೇ ಇದೀಗ ಆನ್​ಲೈನ್ ಮಯವಾಗಿದೆ. ಆ ಆನ್​ಲೈನ್​ನಿಂದ ಅನುಕೂಲಗಳೆಷ್ಟಿವೆಯೋ ಅಷ್ಟೇ ಅನಾನುಕೂಲಗಳೂ ಇವೆ. ನಾವಿಲ್ಲಿ ಇಂಟರ್​ನೆಟ್​ನಿಂದ ಮಹಿಳೆಯರು ಎದುರಿಸುವ ಆತಂಕಕಾರಿ ಸಮಸ್ಯೆಗಳನ್ನು ತೋರಿಸಿದ್ದೇವೆ. ಸೈಬರ್ ಕ್ರೈಂನ ಮತ್ತೊಂದು ಮುಖವೂ ಅನಾವರಣಗೊಳ್ಳಲಿದೆ ಎಂದು ಮಾಹಿತಿ ನೀಡುತ್ತಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News