ʻಧರಣಿ ಮಂಡಲ ಮಧ್ಯದೊಳಗಿʼನಿಂದ ಬಂತು ಮೆಲೋಡಿ ಸಾಂಗ್! ವಿಜಯ್ ಪ್ರಕಾಶ್ ಕಂಠದಲ್ಲಿ ʻಮಾತು ಮಾತಲ್ಲೇ ಸಿಂಗಿಂಗುʼ

ಗೌಸ್ ಪೀರ್ ಪೊಣಿಸಿರುವ ಅದ್ಭುತ ಸಾಹಿತ್ಯದ ಮಾತು ಮಾತಲ್ಲೇ ಎಂಬ ಮೆಲೋಡಿ ಹಾಡಿಗೆ ರೋಣದ ಬಕ್ಕೇಶ್ ಮತ್ತು ಕಾರ್ತಿಕ್ ಚೆನ್ನೋಜಿರಾವ್ ಅಷ್ಟೇ ಸೊಗಸಾದ ಸಾಹಿತ್ಯ ನೀಡಿದ್ದು, ವಿಜಯ್ ಪ್ರಕಾಶ್ ಧ್ವನಿಯಲ್ಲಿ ಹಾಡು ಮೂಡಿಬಂದಿದೆ.

Written by - Chetana Devarmani | Last Updated : May 8, 2022, 02:09 PM IST
  • ಧರಣಿ ಮಂಡಲ ಮಧ್ಯದೊಳಗೆ ಸಿನಿಮಾದ ಮೊದಲ ಹಾಡು
  • ʻಧರಣಿ ಮಂಡಲ ಮಧ್ಯದೊಳಗಿʼನಿಂದ ಬಂತು ಮೆಲೋಡಿ ಸಾಂಗ್
  • ವಿಜಯ್ ಪ್ರಕಾಶ್ ಕಂಠದಲ್ಲಿ ʻಮಾತು ಮಾತಲ್ಲೇ ಸಿಂಗಿಂಗುʼ
ʻಧರಣಿ ಮಂಡಲ ಮಧ್ಯದೊಳಗಿʼನಿಂದ ಬಂತು ಮೆಲೋಡಿ ಸಾಂಗ್! ವಿಜಯ್ ಪ್ರಕಾಶ್ ಕಂಠದಲ್ಲಿ ʻಮಾತು ಮಾತಲ್ಲೇ ಸಿಂಗಿಂಗುʼ title=
ಹಾಡು

'ಗುಳ್ಟು' ಸಿನಿಮಾ ಖ್ಯಾತಿಯ ನವೀನ್ ಹಾಗೂ ಚಂದನವನದ ಶಾಕುಂತಲೆ ಐಶಾನಿ ಶೆಟ್ಟಿ ಜೋಡಿಯಾಗಿ ನಟಿಸಿರುವ ಧರಣಿ ಮಂಡಲ ಮಧ್ಯದೊಳಗೆ ಸಿನಿಮಾದ ಮೊದಲ ಗಾನಲಹರಿ ರಿಲೀಸ್ ಆಗಿದ್ದು, ಸಿನಿರಸಿಕರಿಂದ ಭರ್ಜರಿ ಪ್ರತಿಕ್ರಿಯೆ ವ್ಯಕ್ತವಾಗಿದೆ. 

ಗೌಸ್ ಪೀರ್ ಪೊಣಿಸಿರುವ ಅದ್ಭುತ ಸಾಹಿತ್ಯದ ಮಾತು ಮಾತಲ್ಲೇ ಎಂಬ ಮೆಲೋಡಿ ಹಾಡಿಗೆ ರೋಣದ ಬಕ್ಕೇಶ್ ಮತ್ತು ಕಾರ್ತಿಕ್ ಚೆನ್ನೋಜಿರಾವ್ ಅಷ್ಟೇ ಸೊಗಸಾದ ಸಾಹಿತ್ಯ ನೀಡಿದ್ದು, ವಿಜಯ್ ಪ್ರಕಾಶ್ ಧ್ವನಿಯಲ್ಲಿ ಹಾಡು ಮೂಡಿಬಂದಿದೆ.

ಇದನ್ನೂ ಓದಿ: ರಸ್ತೆ ಅಪಘಾತ: ‘ಸಿಲ್ಲಿ ಲಲ್ಲಿ’ ಖ್ಯಾತಿಯ ನಟಿ ಸುನೇತ್ರಾ ಪಂಡಿತ್‌ಗೆ ಗಂಭೀರ ಗಾಯ

ಹೈಪರ್ ಶೈಲಿಯ ಸಿನಿಮಾವಾಗಿರುವ ಧರಣಿ ಮಂಡಲ‌ ಮಧ್ಯದೊಳಗೆ ಚಿತ್ರಕ್ಕೆ ಈ ಹಿಂದಿ ಪೂರಿ ಜಗನ್ನಾಥ್ ಜೊತೆ ಕೆಲಸ‌ ಮಾಡಿದ್ದ ಶ್ರೀಧರ್ ಷಣ್ಮುಖ ಆಕ್ಷನ್ ಕಟ್ ಹೇಳಿದ್ದು, ಓಂಕಾರ್ ಹಾಗೂ ಪ್ರಶಾಂತ್ ಅಂಚನ್ ಬಂಡವಾಳ ಹೂಡಿದ್ದಾರೆ. ಕೀರ್ತನ್ ಪೂಜಾರಿ ಛಾಯಗ್ರಹಣ, ಗೌಸ್ ಪೀರ್ ,ಶಿವಕುಮಾರ್ ಶೆಟ್ಟಿ ಮತ್ತು ಅಭಿನಂದನ್ ದೇಶ್ ಪ್ರಿಯಾ ಹಾಡುಗಳಿಗೆ ಸಾಹಿತ್ಯ ಬರೆದಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News