ಯುವ ನಟನೊಂದಿಗೆ ನಟ ಧನುಷ್‌ ಮಾಜಿ ಪತ್ನಿ ಐಶ್ವರ್ಯ ರಜಿನಿಕಾಂತ್‌ ಮದುವೆ..!

Aishwarya Rajinikanth marriage : ಖ್ಯಾತ ತಮಿಳು ನಟ ಧನುಷ್ ಮಾಜಿ ಪತ್ನಿ ಸೂಪರ್‌ ಸ್ಟಾರ್‌ ನಟ ರಜನಿಕಾಂತ್‌ ಅವರ ಪುತ್ರಿ ಐಶ್ವರ್ಯಾ ರಜನಿಕಾಂತ್ ಜನಪ್ರಿಯ ಯುವ ನಟನನ್ನು ಮದುವೆಯಾಗಲಿದ್ದಾರೆ ಎಂಬ ಸುದ್ದಿ ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದ್ದು, ಈ ಸುದ್ದಿ ನಿಜವೇ ಎಂಬ ಪ್ರಶ್ನೆ ಎಲ್ಲರಲ್ಲಿ ಉದ್ಭವಿಸಿದೆ.

Written by - Krishna N K | Last Updated : Jul 11, 2023, 11:26 PM IST
  • ಸೂಪರ್‌ ಸ್ಟಾರ್‌ ನಟ ರಜನಿಕಾಂತ್‌ ಅವರ ಪುತ್ರಿ ಐಶ್ವರ್ಯಾ ರಜನಿಕಾಂತ್.
  • ನಟ ಧನುಷ್‌ ಐಶ್ವರ್ಯ ರಜನಿಕಾಂತ್‌ ಈಗಾಗಲೇ ವಿಚ್ಛೇದನ ಪಡೆದಿದ್ದಾರೆ.
  • ಸದ್ಯ ರಜಿನಿ ಪುತ್ರಿ ಯುವ ನಟನ ಜೊತೆ ಎರಡನೇ ಬಾರಿಗೆ ಮದುವೆಯಾಗಿದ್ದಾರೆ.
ಯುವ ನಟನೊಂದಿಗೆ ನಟ ಧನುಷ್‌ ಮಾಜಿ ಪತ್ನಿ ಐಶ್ವರ್ಯ ರಜಿನಿಕಾಂತ್‌ ಮದುವೆ..! title=

Aishwarya Rajinikanth : ತಮಿಳು ಚಿತ್ರರಂಗದ ಖ್ಯಾತ ನಿರ್ದೇಶಕರಲ್ಲಿ ನಟ ರಜನಿಕಾಂತ್‌ ಪುತ್ರಿ ಐಶ್ವರ್ಯಾ ರಜನಿಕಾಂತ್ ಒಬ್ಬರು. ಐಶ್ವರ್ಯಾ ರಜಿನಿ ಹಿರಿಯ ಮಗಳು ಮತ್ತು ನಟ ಧನುಷ್ ಅವರನ್ನು 2004 ರಲ್ಲಿ ವಿವಾಹವಾದರು. ಸದ್ಯ ಇಬ್ಬರು ಡಿವೋರ್ಸ್‌ ಪಡೆದಿದ್ದಾರೆ. ಇದೀಗ ಸೂಪರ್‌ ಸ್ಟಾರ್‌ ಪುತ್ರಿಯ ಮರು ಮದುವೆಯ ಬಗ್ಗೆ ಒಂದು ಸುದ್ದಿ ಹೊರಬಿದ್ದಿದೆ. 

ಹೌದು.. ಧನುಷ್ ‘ಕಾದಲ್ ಕೊಂಡೆನ್’ ಚಿತ್ರದಲ್ಲಿ ನಟಿಸುವ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದರು. ಚಿತ್ರದ 'ವಿಶೇಷ' ದೃಶ್ಯದಲ್ಲಿ ಧನುಷ್ ಮತ್ತು ಐಶ್ವರ್ಯಾ ಭೇಟಿಯಾಗಿದ್ದಾರೆ ಎನ್ನಲಾಗಿದೆ. ಅದಾದ ನಂತರ ಇವರಿಬ್ಬರು ಪ್ರೀತಿಯಲ್ಲಿ ಬಿದ್ದಿದ್ದರು ಎಂಬ ಮಾತುಗಳು ಕೇಳಿ ಬಂದಿದ್ದವು. ಆರಂಭದಲ್ಲಿ ಧನುಷ್ ಇದನ್ನು ಅಲ್ಲಗಳೆದಿದ್ದರೂ, ಅವರ ಮದುವೆಯ ಸಿದ್ಧತೆಗಳು ಭರದಿಂದ ನಡೆದಿದ್ದವು. 

ಇದನ್ನೂ ಓದಿ: ಹೆಣ್ಣೆಂದರೇನು.. ಸೌಂದರ್ಯವೇನು...! ಜಾನ್ವಿ ಅಂದ ನೋಡಿದ್ರೆ ಈ ಹಾಡು ನೆನಪಾಗುತ್ತೆ.. ಅಲ್ವಾ

ನಂತರ, ಧನುಷ್-ಐಶ್ವರ್ಯ 18 ನವೆಂಬರ್ 2004 ರಂದು ವಿವಾಹವಾದರು. ಅವರಿಗೆ ಯಾತ್ರಾ ಮತ್ತು ಲಿಂಗ ಎಂಬ ಇಬ್ಬರು ಗಂಡು ಮಕ್ಕಳಿದ್ದಾರೆ. ಐಶ್ವರ್ಯಾ ತಮ್ಮ ಪತಿಯೊಂದಿಗೆ 3 ಎಂಬ ಸಿನಿಮಾ ಮಾಡಿದ್ದಾರೆ. ಸುಮಾರು 18 ವರ್ಷಗಳ ವೈವಾಹಿಕ ಜೀವನದ ನಂತರ ಇಬ್ಬರೂ ಬೇರ್ಪಟ್ಟಿದ್ದಾರೆ ಎಂದು ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದಾರೆ. ಇದು ಅಭಿಮಾನಿಗಳ ಪಾಲಿಗೆ ಬೇಸರ ತಂದಿತ್ತು.

ಧನುಷ್ ಮತ್ತು ಐಶ್ವರ್ಯ ತಮ್ಮ 20ನೇ ವಯಸ್ಸಿನಲ್ಲಿ ವಿವಾಹವಾದರು. ಇಷ್ಟು ಚಿಕ್ಕ ವಯಸ್ಸಿನಲ್ಲೇ ಮದುವೆಯಾಗಿ ಇಷ್ಟು ವರ್ಷಗಳ ನಂತರ ಬೇರ್ಪಟ್ಟಿದ್ದಾರೆ ಎಂದು ಕೆಲ ಅಭಿಮಾನಿಗಳು ಟೀಕಿಸಿದ್ದಾರೆ. ನಟಿ ಐಶ್ವರ್ಯಾ ಪ್ರಸ್ತುತ ತಮ್ಮ ತಂದೆಯ ಚಿತ್ರಕ್ಕೆ ನಿರ್ದೇಶನ ಮಾಡುತ್ತಿದ್ದಾರೆ. ಪ್ರಸ್ತುತ ಅವರು ಯುವ ನಟನೊಂದಿಗೆ ಪ್ರಣಯ ಸಂಬಂಧದಲ್ಲಿದ್ದಾರೆ ಎಂದು ಹೇಳಲಾಗುತ್ತದೆ.

ಇದನ್ನೂ ಓದಿ: ಸಲಿಂಗಕಾಮಿ ಅಥವಾ ಇನ್ನೊಬ್ಬ ಮಹಿಳೆಯನ್ನು ಮದುವೆಯಾಗಲು ನನಗೆ ಸಮಸ್ಯೆ ಇಲ್ಲ..!

ಈ ಸುದ್ದಿ ತಿಳಿದ ನಂತರ ಆ ಯುವ ನಟ ಯಾರು ಎಂದು ಅಭಿಮಾನಿಗಳು ಅಂತರ್ಜಾಲದಲ್ಲಿ ಹುಡುಕಾಡುತ್ತಿದ್ದಾರೆ. ಆದರೆ ಆತ ಯಾರು ಎಂಬ ಬಗ್ಗೆ ಮಾಹಿತಿ ಇಲ್ಲ. ಆ ನಟನನ್ನೇ ಐಶ್ವರ್ಯಾ ಮದುವೆಯಾಗಲಿದ್ದಾರೆ ಎಂದು ಕೆಲವರು ಹೇಳುತ್ತಿದ್ದಾರೆ. 3 ಚಿತ್ರಗಳ ಮೂಲಕ ಪ್ರತಿಭಾವಂತ ನಿರ್ದೇಶಕಿ ಎಂದು ಸಾಬೀತುಪಡಿಸಿರುವ ಐಶ್ವರ್ಯಾ ರಜನಿಕಾಂತ್ ಸದ್ಯ 'ಲಾಲ್ ಸಲಾಂ' ಚಿತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ಚಿತ್ರದಲ್ಲಿ ವಿಶಾಲ್ ವಿಷ್ಣು ಮತ್ತು ವಿಕ್ರಾಂತ್ ಮುಖ್ಯ ಭೂಮಿಕೆಯಲ್ಲಿದ್ದಾರೆ. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 

Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News