Devara Teaser: 'ದೇವರ' ಟೀಸರ್ ರೆಡಿ.. ಹೈಪ್ ಹೆಚ್ಚಿಸಿದ ಅನಿರುದ್ಧ್.. ಯಾವಾಗ ರಿಲೀಸ್?

Devara: ಕಳೆದ ಕೆಲವು ದಿನಗಳಿಂದ ದೇವರ ಟೀಸರ್ ಸದ್ಯದಲ್ಲೇ ಬರಲಿದೆ ಎಂಬ ವರದಿಗಳು ಬರುತ್ತಿವೆ... ಇದೀಗ ಈ ಸಿನಿಮಾದ ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದ್ರನ್ ಅವರು ಟೀಸರ್ ಬಗ್ಗೆ ಅಪ್‌ಡೇಟ್ ನೀಡಿ ಹೈಪ್ ಹೆಚ್ಚಿಸಿದ್ದಾರೆ.

Written by - Savita M B | Last Updated : Dec 27, 2023, 02:27 PM IST
  • ಆರ್‌ಆರ್‌ಆರ್ ನಂತರ ಎನ್‌ಟಿಆರ್ ಅವರ ಚಿತ್ರಕ್ಕಾಗಿ ನಂದಮೂರಿ ಅಭಿಮಾನಿಗಳು ಕಾಯುತ್ತಿದ್ದಾರೆ.
  • ಕೊರಟಾಲ ಶಿವ ನಿರ್ದೇಶನದಲ್ಲಿ ಎನ್‌ಟಿಆರ್ ದೇವರ ಸಿನಿಮಾ ಮಾಡುತ್ತಿರುವುದು ಗೊತ್ತೇ ಇದೆ.
  • ಇದುವರೆಗೆ ಒಂದೇ ಒಂದು ಪೋಸ್ಟರ್ ಬಿಡುಗಡೆಯಾಗಿದೆ
Devara Teaser: 'ದೇವರ' ಟೀಸರ್ ರೆಡಿ.. ಹೈಪ್ ಹೆಚ್ಚಿಸಿದ ಅನಿರುದ್ಧ್.. ಯಾವಾಗ ರಿಲೀಸ್?  title=

Devara Teaser: ಆರ್‌ಆರ್‌ಆರ್ ನಂತರ ಎನ್‌ಟಿಆರ್ ಅವರ ಚಿತ್ರಕ್ಕಾಗಿ ನಂದಮೂರಿ ಅಭಿಮಾನಿಗಳು ಕಾಯುತ್ತಿದ್ದಾರೆ. ಕೊರಟಾಲ ಶಿವ ನಿರ್ದೇಶನದಲ್ಲಿ ಎನ್‌ಟಿಆರ್ ದೇವರ ಸಿನಿಮಾ ಮಾಡುತ್ತಿರುವುದು ಗೊತ್ತೇ ಇದೆ. ಇದುವರೆಗೆ ಒಂದೇ ಒಂದು ಪೋಸ್ಟರ್ ಬಿಡುಗಡೆಯಾಗಿದ್ದು.. ಚಿತ್ರದ ಮೇಲೆ ಭಾರಿ ನಿರೀಕ್ಷೆಗಳು ಇದ್ದವು. ಆದರೆ, ಶೂಟಿಂಗ್ ಅಪ್‌ಡೇಟ್‌ಗಳ ಹೊರತಾಗಿಯೂ ಯಾವುದೇ ಪೋಸ್ಟರ್‌ಗಳು ಅಥವಾ ಗ್ಲಿಂಪ್ಸ್‌ಗಳನ್ನು ಬಿಡುಗಡೆ ಮಾಡಲಾಗಿಲ್ಲ ಹೀಗಾಗಿ ಅಭಿಮಾನಿಗಳು ಬೇಸರಗೊಂಡಿದ್ದರು..

ಕಳೆದ ಕೆಲವು ದಿನಗಳಿಂದ ದೇವರ ಟೀಸರ್ ಸದ್ಯದಲ್ಲೇ ಬರಲಿದೆ ಎಂಬ ವರದಿಗಳು ಬರುತ್ತಿದ್ದು... ಇದೀಗ ದೇವರ ಸಂಗೀತ ನಿರ್ದೇಶಕ ಅನಿರುದ್ಧ್ ರವಿಚಂದ್ರನ್ ಅವರು ದೇವರ ಟೀಸರ್ ಬಗ್ಗೆ ಅಪ್‌ಡೇಟ್ ನೀಡಿ ಹೈಪ್ ಹೆಚ್ಚಿಸಿದ್ದಾರೆ... ಅನಿರುದ್ಧ್ ತಮ್ಮ ಟ್ವಿಟ್ಟರ್ ನಲ್ಲಿ.. ಈ ಬಗ್ಗೆ ಪೋಸ್ಟ್‌ ಹಂಚಿಕೊಂಡಿದ್ದಾರೆ.. 

ಇದನ್ನೂ ಓದಿ-ಬಾಲಿವುಡ್‌ ಸ್ಟಾರ್‌ ಸಲ್ಮಾನ್‌ ಖಾನ್‌ಗೆ ಬರ್ತ್‌ಡೇ ಸ್ಯಾಂಡಲ್‌ವುಡ್‌ ಬಾದ್‌ಶಾ ವಿಶ್!

ಇದರೊಂದಿಗೆ ದೇವರ ಸಿನಿಮಾದ ಟೀಸರ್ ರೆಡಿಯಾಗಿದೆ ಎಂದು ತಿಳಿದುಬಂದಿದ್ದು.. ಇದಕ್ಕೆ ಅನಿರುದ್ಧ್ ಸಂಗೀತ ನೀಡಿರುವುದು ಗೊತ್ತೇ ಇದೆ.. ಇತ್ತೀಚೆಗೆ ಕಲ್ಯಾಣ್ ರಾಮ್ ಸಿನಿಮಾ ಪ್ರಮೋಷನ್‌ ಸಮಯದಲ್ಲಿ ದೇವರ ಟೀಸರ್ ಬಗ್ಗೆ ಮಾತನಾಡಿ.. ಈ ಹೊಸ ವರ್ಷದ ಉಡುಗೊರೆಯಾಗಿ ದೇವರ ಟೀಸರ್ ಬಿಡುಗಡೆಯಾಗುವ ನಿರೀಕ್ಷೆಯಿದ್ದು.. ಡಿಸೆಂಬರ್ 29 ರಿಂದ ಥಿಯೇಟರ್ ಗಳಲ್ಲಿ ಕೂಡ ರಿಲೀಸ್ ಆಗಲಿದೆ ಎಂದಿದ್ದರು.. ಅದೇನೇ ಇರಲಿ, ಇನ್ನು ಕೆಲವೇ ದಿನಗಳಲ್ಲಿ ದೇವರ ಟೀಸರ್ ಬರಲಿದೆ ಎನ್ನುವ ಸುಳಿವು ಸಿಕ್ಕಿದ್ದು.. ಸದ್ಯ ಅಭಿಮಾನಿಗಳು ಟೀಸರ್ ನೋಡಲು ಕಾಯುತ್ತಿದ್ದಾರೆ.

ದೇವರ ಚಲನಚಿತ್ರವನ್ನು ಎರಡು ಭಾಗಗಳಲ್ಲಿ ಘೋಷಿಸಲಾಗಿದ್ದು.. ಮೊದಲ ಭಾಗವು 5 ಏಪ್ರಿಲ್ 2024 ರಂದು ಬಿಡುಗಡೆಯಾಗಲಿದೆ. ಇನ್ನು ಇದೇ ಚಿತ್ರದಿಂದ ಬಾಲಿವುಡ್ ನಟಿ ಜಾಹ್ನವಿ ಕಪೂರ್ ತೆಲುಗಿಗೆ ಪಾದಾರ್ಪಣೆ ಮಾಡಿದ್ದಾರೆ.. ಇದರಲ್ಲಿ ಬಾಲಿವುಡ್ ಸ್ಟಾರ್ ಹೀರೋ ಸೈಫ್ ಅಲಿ ಖಾನ್ ಮತ್ತು ಮಲಯಾಳಂ ಸ್ಟಾರ್ ಶೈನ್ ಟಾಮ್ ಚಾಕೋ ಖಳನಾಯಕರಾಗಿ ಕಾಣಿಸಿಕೊಳ್ಳಲಿದ್ದಾರೆ.

ಇದನ್ನೂ ಓದಿ-ಕದ್ದು ಮುಚ್ಚಿ ಮದುವೆಯಾಗಿರುವ ಬಗ್ಗೆ ಕೊನೆಗೂ ಸತ್ಯ ಬಾಯ್ಬಿಟ್ಟ ಕಮಲ್ ಪುತ್ರಿ ಶೃತಿ ಹಾಸನ್ !

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

 

Trending News