ಸಂಜಯ್ ಲೀಲಾ ಬನ್ಸಾಲಿಯನ್ನು ಮದುವೆಯಾಗಲು ಬಯಸಿದ್ದರಾ ದೀಪಿಕಾ ಪಡುಕೋಣೆ!?

Deepika Padukone And Sanjay Leela Bhansali : ಬಾಲಿವುಡ್ ಖ್ಯಾತ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಅವರು ತಮ್ಮ ವೃತ್ತಿಜೀವನದಲ್ಲಿ ಅನೇಕ ಸೂಪರ್‌ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಇಂದು ಅನೇಕ ತಾರೆಯರನ್ನು ಸಿನಿರಂಗಕ್ಕೆ ನೀಡಿದ್ದಾರೆ. ಈ ಪಟ್ಟಿಯಲ್ಲಿ ದೀಪಿಕಾ ಅವರ ಹೆಸರೂ ಸೇರಿದೆ.   

Written by - Chetana Devarmani | Last Updated : Feb 20, 2023, 04:33 PM IST
  • ಬಾಲಿವುಡ್ ಖ್ಯಾತ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ
  • ಬಾಲಿವುಡ್‌ನ ಟಾಪ್ ನಟಿಯರಲ್ಲಿ ಒಬ್ಬರು ದೀಪಿಕಾ ಪಡುಕೋಣೆ
  • ಸಂಜಯ್ ಲೀಲಾ ಬನ್ಸಾಲಿಯನ್ನು ಮದುವೆಯಾಗಲು ಬಯಸಿದ್ದರಾ ದೀಪಿಕಾ!?
ಸಂಜಯ್ ಲೀಲಾ ಬನ್ಸಾಲಿಯನ್ನು ಮದುವೆಯಾಗಲು ಬಯಸಿದ್ದರಾ ದೀಪಿಕಾ ಪಡುಕೋಣೆ!? title=
Deepika Padukone And Sanjay Leela Bhansali

Deepika Padukone And Sanjay Leela Bhansali : ಬಾಲಿವುಡ್ ಖ್ಯಾತ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಅವರು ತಮ್ಮ ವೃತ್ತಿಜೀವನದಲ್ಲಿ ಅನೇಕ ಸೂಪರ್‌ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಇಂದು ಅನೇಕ ತಾರೆಯರನ್ನು ಸಿನಿರಂಗಕ್ಕೆ ನೀಡಿದ್ದಾರೆ. ಈ ಪಟ್ಟಿಯಲ್ಲಿ ದೀಪಿಕಾ ಅವರ ಹೆಸರೂ ಸೇರಿದೆ. ದೀಪಿಕಾ ಪಡುಕೋಣೆ ಬಾಲಿವುಡ್‌ನ ಟಾಪ್ ನಟಿಯರಲ್ಲಿ ಒಬ್ಬರು ಮತ್ತು ಇತ್ತೀಚಿನ ದಿನಗಳಲ್ಲಿ ಅವರು ತಮ್ಮ ಪಠಾಣ್ ಚಿತ್ರದ ಬಗ್ಗೆ ಚರ್ಚೆಯಲ್ಲಿದ್ದಾರೆ ಮತ್ತು ಅದೇ ಸಮಯದಲ್ಲಿ ಅವರು ರಣವೀರ್ ಸಿಂಗ್ ಅವರನ್ನು ವಿವಾಹವಾಗಿದ್ದು, ಹೊಸ ಜೀವನವನ್ನು ಪ್ರಾರಂಭಿಸಿದ್ದಾರೆ. ಆದರೆ ಸಂಜಯ್ ಲೀಲಾ ಬನ್ಸಾಲಿಯನ್ನು ಮದುವೆಯಾಗಲು ಬಯಸುವುದಾಗಿ ದೀಪಿಕಾ ಒಮ್ಮೆ ಹೇಳಿದ್ದರು. 

ಇದನ್ನೂ ಓದಿ : Armaan Malik ಮಾತ್ರವಲ್ಲ, ಈ ಬಾಲಿವುಡ್ ನಟರಿಗೂ 2-2 ಹೆಂಡತಿಯರು.!

ವಾಸ್ತವವಾಗಿ, ದೀಪಿಕಾ ಪಡುಕೋಣೆ ತಮ್ಮ ಚಿತ್ರದ ಪ್ರಚಾರಕ್ಕಾಗಿ ಬಿಗ್ ಬಾಸ್ ಸೀನಸ್‌ 11 ಗೆ ಬಂದಿದ್ದರು. ಈ ಸಂದರ್ಭದಲ್ಲಿ, ಇಲ್ಲಿ ಅವರಿಗೆ ಕೆಲವು ತಮಾಷೆಯ ಪ್ರಶ್ನೆಗಳನ್ನು ಕೇಳಲಾಯಿತು, ಅದಕ್ಕೆ ಅವರು ಬಹಳ ವಿಶಿಷ್ಟವಾದ ಉತ್ತರಗಳನ್ನು ನೀಡಿದರು, ಅದನ್ನು ಕೇಳಿ ಎಲ್ಲರೂ ಆಶ್ಚರ್ಯಚಕಿತರಾದರು. ವಾಸ್ತವವಾಗಿ, ಅವರು ಯಾರನ್ನು ಮದುವೆಯಾಗಲು ಬಯಸುತ್ತಾಳೆ ಎಂಬ ಪ್ರಶ್ನೆಯನ್ನು ಇದರಲ್ಲಿ ಕೇಳಲಾಯಿತು. ಈ ಪಟ್ಟಿಯಲ್ಲಿ 2 ಹೆಸರುಗಳಿದ್ದವು. ಮೊದಲನೆಯದು ರಣವೀರ್ ಸಿಂಗ್ ಮತ್ತು ಎರಡನೆಯದು ಸಂಜಯ್ ಲೀಲಾ ಬನ್ಸಾಲಿ. ಈ ಪ್ರಶ್ನೆಗೆ ಪ್ರತಿಕ್ರಿಯಿಸಿದ ದೀಪಿಕಾ ಪಡುಕೋಣೆ, ರಣವೀರ್ ಸಿಂಗ್ ಜೊತೆ ಡೇಟಿಂಗ್ ಮಾಡಲು ಇಷ್ಟಪಡುತ್ತೇನೆ ಎಂದು ಹೇಳಿದ್ದರು. ಆದರೆ ಸಂಜಯ್ ಲೀಲಾ ಬನ್ಸಾಲಿಯನ್ನು ಮದುವೆಗೆ  ಆಯ್ಕೆ ಮಾಡಿದ್ದಾರೆ. ಇದನ್ನು ಕೇಳಿದ ಸಲ್ಮಾನ್ ಖಾನ್ ಕೂಡ ಹೀಗೇ ಆಗಿದ್ದರೆ ಈ ಮದುವೆ ನಡೆಯುತ್ತಿರಲಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.

ಬಾಲಿವುಡ್ ಹಿರಿಯ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ಅವರು ಸಿನಿಮಾ ಜಗತ್ತಿಗೆ ಹಲವು ಉತ್ತಮ ಚಿತ್ರಗಳನ್ನು ನೀಡಿದ್ದಾರೆ. ತಮ್ಮ ಸಿನಿಮಾಗಳಲ್ಲಿ ಲವ್‌ಸ್ಟೋರಿ ಮೂಲಕ ಎಲ್ಲರ ಹೃದಯಗೆಲ್ಲುತ್ತಾರೆ. ಸಂಜಯ್ ಲೀಲಾ ಬನ್ಸಾಲಿ 59 ವರ್ಷವಾದರೂ ಇನ್ನೂ ಮದುವೆಯಾಗಿಲ್ಲ. ಮತ್ತೊಂದೆಡೆ, ದೀಪಿಕಾ ಫೈಟರ್ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಚಿತ್ರದಲ್ಲಿ ಹೃತಿಕ್ ರೋಷನ್ ಕೂಡ ಜೊತೆಯಾಗಿದ್ದಾರೆ. ಚಿತ್ರದಲ್ಲಿ ದೀಪಿಕಾ ಜೊತೆಗೆ ಹೃತಿಕ್, ಅನಿಲ್ ಕಪೂರ್ ಕೂಡ ಕಾಣಿಸಿಕೊಳ್ಳಲಿದ್ದಾರೆ. ಇದೆಲ್ಲದರ ಜೊತೆಗೆ ದೀಪಿಕಾ 'ದಿ ಇಂಟರ್ನ್' ಮತ್ತು 'ಪ್ರಾಜೆಕ್ಟ್ ಕೆ' ಹಿಂದಿ ರಿಮೇಕ್ ಕೂಡ ಮಾಡಲಿದ್ದಾರೆ.

ಇದನ್ನೂ ಓದಿ : Samantha: ಸಮಂತಾ ವರ್ಕೌಟ್​ ನೋಡಿದ್ರೆ ಅಚ್ಚರಿ ಪಡ್ತೀರಾ.! ಆರೋಗ್ಯ ಇಷ್ಟೊಂದು ಸುಧಾರಿಸಿತಾ?

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News