Deepika Padukone: ಬೆಂಗಳೂರಿನಲ್ಲಿ 7 ಕೋಟಿ ರೂ. ಮೌಲ್ಯದ ಫ್ಲ್ಯಾಟ್‌ ಖರೀದಿಸಿದ ದೀಪಿಕಾ ಪಡುಕೋಣೆ

3451.37 ಚದರ ಅಡಿ ವಿಸ್ತೀರ್ಣದ ಸೂಪರ್ ಬಿಲ್ಟ್ ಅಪ್ ಪ್ರದೇಶವನ್ನು ಹೊಂದಿರುವ ಈ ಬಂಗಲೆಯು 2 ಕಾರುಗಳ ಪಾರ್ಕಿಂಗ್‌ ಸೌಲಭ್ಯ ಹೊಂದಿದೆ.

Written by - Puttaraj K Alur | Last Updated : Sep 7, 2021, 11:17 AM IST
  • ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ 7 ಕೋಟಿ ರೂ. ಫ್ಲ್ಯಾಟ್‌ ಖರೀದಿಸಿದ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ
  • ಬೆಂಗಳೂರಿನ ಬಳ್ಳಾರಿ ರಸ್ತೆ​ಯ​ಲ್ಲಿನ ಗಂಗಾನಗರದಲ್ಲಿರುವ ಅದ್ಧೂರಿ ಬಂಗಲೆ ಖರೀದಿಸಿರುವ ಕರಾವಳಿ ಬೆಡಗಿ
  • ಅಪಾರ್ಟ್‌ಮೆಂಟ್‌ನ 22ನೇ ಅಂತಸ್ತಿನಲ್ಲಿರುವ 2 ಬೆಡ್‌​ರೂಂ ಫ್ಲ್ಯಾಟ್‌ ಎಲ್ಲಾ ರೀತಿಯ ಸೌಕರ್ಯ ಹೊಂದಿದೆ
Deepika Padukone: ಬೆಂಗಳೂರಿನಲ್ಲಿ 7 ಕೋಟಿ ರೂ. ಮೌಲ್ಯದ ಫ್ಲ್ಯಾಟ್‌ ಖರೀದಿಸಿದ ದೀಪಿಕಾ ಪಡುಕೋಣೆ title=
ಅದ್ಧೂರಿ ಬಂಗಲೆ ಖರೀದಿಸಿರುವ ಕರಾವಳಿ ಬೆಡಗಿ (Photo Courtesy: @Zee News)

ಬೆಂಗಳೂರು: ಖ್ಯಾತ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ(Deepika Padukone) ಮತ್ತು ಅವರ ತಂದೆ, ಮಾಜಿ ರಾಷ್ಟ್ರೀಯ ಬ್ಯಾಡ್ಮಿಂಟನ್‌ ಆಟಗಾರ ಪ್ರಕಾಶ್‌ ಪಡುಕೋಣೆ(Prakash Padukone) ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ದುಬಾರಿ ಬೆಲೆಯ ಫ್ಲಾಟ್‌ ಖರೀದಿಸಿದ್ದಾರೆ. ಬೆಂಗಳೂರಿನ ಬಳ್ಳಾರಿ ರಸ್ತೆ​ಯ​ಲ್ಲಿನ ಗಂಗಾನಗರದಲ್ಲಿರುವ ಈ ಫ್ಲ್ಯಾಟ್‌ ಬೆಲೆ ಸುಮಾರು 6.79 ಕೋಟಿ ರೂ. ಆಗಿದ್ದು, ಆಗಸ್ಟ್ 7ರಂದು ತಮ್ಮ ಹೆಸರಿಗೆ ಮಾರಾಟ ಪತ್ರವನ್ನು ನೋಂದಾಯಿಸಿಕೊಂಡಿದ್ದಾರೆ. ಅಲ್ಲದೆ ಸ್ಟಾಂಪ್‌ ತೆರಿಗೆಯಾಗಿ 34.64 ಲಕ್ಷ ರೂ. ಪಾವತಿಸಿದ್ದಾರೆಂದು ತಿಳಿದುಬಂದಿದೆ.

ಅಪಾರ್ಟ್‌ಮೆಂಟ್‌ನ 22ನೇ ಅಂತಸ್ತಿನಲ್ಲಿರುವ ಈ ಎರಡು ಬೆಡ್‌​ರೂಂ ಫ್ಲ್ಯಾಟ್‌(2BHK Private Residence) ಎಲ್ಲಾ ರೀತಿಯ ಸೌಕರ್ಯಗಳನ್ನು ಹೊಂದಿದೆ. 3451.37 ಚದರ ಅಡಿ ವಿಸ್ತೀರ್ಣದ ಸೂಪರ್ ಬಿಲ್ಟ್ ಅಪ್ ಪ್ರದೇಶವನ್ನು ಹೊಂದಿರುವ ಈ ಬಂಗಲೆ(Serviced Apartment)ಯು 2 ಕಾರುಗಳ ಪಾರ್ಕಿಂಗ್‌ ಸೌಲಭ್ಯ ಹೊಂದಿದೆ. ಎಂಬೆಸ್ಸಿ ಗ್ರೂಪ್(Embassy Group) ಈ ಅಪಾರ್ಟ್‌ಮೆಂಟ್‌ ಅನ್ನು 600 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡಿದೆ. ಈ ಸಂಸ್ಥೆಯಲ್ಲಿ ಆರಂಭಿಕ ಹೂಡಿಕೆ ಮಾಡಿದ ಕೆಲವೇ ಕೆಲವು ಜನರಲ್ಲಿ ದೀಪಿಕಾ ಪಡುಕೋಣೆ ಕೂಡ ಒಬ್ಬರಾಗಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: Viral Video : ಹೀಗೂ ಇದಾವ ಡೆನಿಮ್ ಜಾಕೆಟ್ : ಇದು ಬಾಲಿವುಡ್ ನಟಿ ಉರ್ಫಿ ಜಾವೇದ್ ಫ್ಯಾಷನ್ 

ನೋಂದಣಿ ದಾಖಲಾತಿಯ ಪ್ರಕಾರ ಈ ಅಪಾರ್ಟ್‌ಮೆಂಟ್‌(Serviced Apartment) ಅನ್ನು 2012ರಲ್ಲಿ ಖರೀದಿಸಲಾಗಿದೆ. ಪ್ರಾಜೆಕ್ಟ್ ವೆಬ್‌ಸೈಟ್‌ನ ಪ್ರಕಾರ, ಈ ಯೋಜನೆಯು ಮೀಸಲು ದ್ವಾರಪಾಲಕ(Dedicated Concierge), ಆಸ್ತಿ ನಿರ್ವಹಣೆ ಮತ್ತು ವ್ಯಾಲೆಟ್ ಪಾರ್ಕಿಂಗ್ ಹೊಂದಿದೆ. 2017ರಲ್ಲಿ ಎಂಬೆಸ್ಸಿ ಗ್ರೂಪ್ 16,000 ಚದರ ಅಡಿ ಅಪಾರ್ಟ್‌ಮೆಂಟ್‌ ಅನ್ನು ಎಂಬೆಸ್ಸಿ ಒನ್ ಯೋಜನೆಯಲ್ಲಿ 50 ಕೋಟಿ ರೂ.ಗೆ ಕ್ವೆಸ್ಟ್ ಗ್ಲೋಬಲ್ ನ ಅಧ್ಯಕ್ಷ ಮತ್ತು ಸಿಇಒಗೆ ಮಾರಾಟ ಮಾಡಿತ್ತು ಎಂದು ತಿಳಿದುಬಂದಿದೆ.

ಮೂಲತಃ ಉಡುಪಿ ಜಿಲ್ಲೆಯವರಾದ ನಟಿ ದೀಪಿಕಾ ಬಾಲಿವುಡ್‌(Deepika Padukone) ಖ್ಯಾತ ನಟ ರಣವೀರ್‌ ಸಿಂಗ್ (Ranveer Singh)ಅವರನ್ನು ವಿವಾಹವಾದ ಬಳಿಕ ವಾಣಿಜ್ಯ ನಗರಿ ಮುಂಬೈನಲ್ಲಿ ವಾಸಿಸುತ್ತಿದ್ದಾರೆ. ಈಗ ಬೆಂಗಳೂರಿನಲ್ಲಿಯೂ ಮನೆ ಖರೀಸುವ ಮೂಲಕ ತವರಿಗೆ ಮರಳಿದ್ದಾರೆ. ಆಗಾಗ ಬೆಂಗಳೂರಿಗೆ ಭೇಟಿ  ನೀಡುವ ನಟಿ ತಮ್ಮ ತಾಯಿ ಹಾಗೂ ಸಹೋದರಿಯ ಜೊತೆ ಕೆಲವು ದಿನ ಇದ್ದು ವಾಪಸ್ ಮುಂಬೈಗೆ ತೆರಳುತ್ತಾರೆ.

ಇದನ್ನೂ ಓದಿ: ಸಿದಾರ್ಥ್ ಶುಕ್ಲಾ ಕೊನೆಯ ಮಾತುಗಳನ್ನಾಡಿದ್ದು ಅಮ್ಮನ ಜೊತೆಯಲ್ಲಿಯೇ, ಸಾವಿಗೂ ಮುನ್ನ ನಡೆದ ಘಟನೆ ಇದು..   

‘ರಾಮ್ ಲೀಲಾ’, ‘ಬಾಜಿ ರಾವ್ ಮಸ್ತಾನಿ’ ಸಿನಿಮಾಗಳಲ್ಲಿ ಜೊತೆಯಾಗಿ ನಟಿಸಿದ್ದ ದೀಪಿಕಾ ಮತ್ತು ರಣವೀರ್ ಪ್ರೀತಿಸಿ ಮದುವೆಯಾಗಿದ್ದರು. ಸದ್ಯ ಈ ಇಬ್ಬರು ಬಾಲಿವುಡ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ದೀಪಿಕಾ ಹಾಲಿವುಡ್‌ನ ತಮ್ಮ 2ನೇ ಪ್ರಾಜೆಕ್ಟ್‌ ಗೆ ಸಹಿ ಹಾಕಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News