'ಮಹಾಭಾರತ' ಚಿತ್ರದಲ್ಲಿ 'ದ್ರೌಪದಿ'ಯಾಗಲಿದ್ದಾರೆ ದೀಪಿಕಾ ಪಡುಕೋಣೆ

2021ರಲ್ಲಿ ಬಿಡುಗಡೆಯಾಗಲಿದೆ ದೀಪಿಕಾ ನಟನೆಯ ಐದು ಚಿತ್ರಗಳು.. 'ಮಹಾಭಾರತ' ಚಿತ್ರದಲ್ಲಿ ದ್ರೌಪದಿಯ ಪಾತ್ರದಲ್ಲಿ ದೀಪಿಕಾ ಕಾಣಿಸಿಕೊಳ್ಳಲಿದ್ದಾರೆ.

Written by - Ranjitha R K | Last Updated : Jan 19, 2021, 08:01 PM IST
  • ದ್ರೌಪದಿಯ ಪಾತ್ರದಲ್ಲಿ ದೀಪಿಕಾ ಪಡುಕೋಣೆ
  • ಈ ವರ್ಷ ಐದು ಚಿತ್ರಗಳಲ್ಲಿ ದೀಪಿಕಾ ನಟನೆ
  • ಪ್ರಭಾಸ್ ಜೊತೆಯೂ ಬರಲಿದೆ ದೀಪಿಕಾ ಸಿನೆಮಾ
'ಮಹಾಭಾರತ' ಚಿತ್ರದಲ್ಲಿ 'ದ್ರೌಪದಿ'ಯಾಗಲಿದ್ದಾರೆ ದೀಪಿಕಾ  ಪಡುಕೋಣೆ title=
ಈ ವರ್ಷ ಐದು ಚಿತ್ರಗಳಲ್ಲಿ ದೀಪಿಕಾ ನಟನೆ(file phoo)

ಮುಂಬೈ: ಬಾಲಿವುಡ್‌ನ ಖ್ಯಾತ ನಟಿ ದೀಪಿಕಾ ಪಡುಕೋಣೆ (Deepika Padukone) ತಮ್ಮ ಪ್ರಾಜೆಕ್ಟ್‌ಗಳತ್ತ ಹೆಚ್ಚಿನ ಗಮನ  ಹರಿಸುತ್ತಾರೆ. ಇದೀಗ ದೀಪಿಕಾ ತಮ್ಮ ಮುಂಬರುವ ಚಿತ್ರದ ಬಗ್ಗೆ ಮಾತನಾಡಿದ್ದಾರೆ. ದೀಪಿಕಾ ಮುಂಬರುವ ಚಿತ್ರಕ್ಕಾಗಿ ಅವರ ಅಭಿಮಾನಿಗಳು ಹಾತೊರೆಯುತ್ತಿದ್ದಾರೆ. ನಿರ್ದೇಶಕ ಶಕುನ್ ಬಾತ್ರಾ ಅವರ ಸಿನೆಮಾದ ಚಿತ್ರೀಕರಣವನ್ನು ದೀಪಿಕಾ ಮುಗಿಸಿದ್ದಾರೆ. 

ಈ ಚಿತ್ರದ ಬಗ್ಗೆ ಮಾತನಾಡಿದ ದೀಪಿಕಾ (Deepika Padukone) , ಇದೊಂದು ಸಂಬಂಧಗಳ ಸುತ್ತ ಹೆಣೆದಿರುವ ಕತೆಯಾಗಿದೆ ಎಂದು ಹೇಳಿದ್ದಾರೆ. ಅಲ್ಲದೆ   ದೊಡ್ಡ ಪರದೆಯಲ್ಲಿ ಇಂಥಹ ಕತೆಯನ್ನುಇದುವರೆಗೆ ಯಾರು ನೋಡಿರಲಿಕ್ಕಿಲ್ಲ ಎಂದಿದ್ದಾರೆ. ಇದೇ  ವೇಳೆ  ದೀಪಿಕಾ ಶಾರುಕ್ ಖಾನ್ (Shah Rukh Khan) ಜೊತೆಗಿನ ಪಠಾಣ್ ಸಿನೆಮಾ ಮತ್ತು ಮಹಾಭಾರತ  (Mahabharata) ಚಿತ್ರದ ದ್ರೌಪದಿಯ ಪಾತ್ರಗಳ ಬಗ್ಗೆಯೂ ಮಾತನಾಡಿದ್ದಾರೆ. 

ಇದನ್ನೂ ಓದಿ : Deepika Padukone ಸೇರಿದಂತೆ Anushka Sharmaವರೆಗೆ ಬಾಲಿವುಡ್ ನ 5 ಶ್ರೀಮಂತ ನಟಿಮಣಿಗಳು

ದ್ರೌಪದಿಯ ಪಾತ್ರದಲ್ಲಿ ದೀಪಿಕಾ :
ದೀಪಿಕಾ ಮುಂಬರುವ ತನ್ನ ಎಲ್ಲಾ ಚಿತ್ರಗಳ ಬಗ್ಗೆ ಮಾತನಾಡಿದ್ದಾರೆ. ನಿರ್ದೇಶಕ ಶಕುನ್ ಬತ್ರಾ ಅವರ ಚಿತ್ರ ಸಂಬಂಧಗಳ ಸುತ್ತ ಹೆಣೆದಿರುವ ಕತೆಯಾಗಿದ್ದು, ಭಾರತೀಯ ಸಿನಿಮಾ (Cinema) ಜಗತ್ತಿನಲ್ಲಿ ಇಂತಹ ಚಿತ್ರ ಬಂದಿಲ್ಲ ಎಂದು ಹೇಳಿದ್ದಾರೆ. ಇದಾದ ನಂತರ ಶಾರುಕ್ ಖಾನ್ ಜೊತೆ ಆಕ್ಶನ್ ಸಿನೆಮಾ 'ಪಠಾಣ್ 'ದಲ್ಲಿ ನಟಿಸುತ್ತಿರುವ ಬಗ್ಗೆಯೂ ದೀಪಿಕಾ ಹೇಳಿದ್ದಾರೆ. ಇದಾದ ನಂತರ ನಾಗ ಅಶ್ವಿನ್ ಮತ್ತು  ಪ್ರಭಾಸ್ (Prabhas) ಜೊತೆ ದೀಪಿಕಾ ಸಿನೆಮಾ ಮಾಡಲಿದ್ದಾರೆ. ಈ ಸಿನೆಮಾಗಳ ನಂತರ ದಿ 'ಇಂಟರ್ನಿ 'ಚಿತ್ರದ ರಿಮೇಕ್ ಬರಲಿದೆ. ಇದಾದ ನಂತರ ನಮ್ಮ ದೇಶದ ಪೌರಾಣಿಕ ಕತೆಯಾದ 'ಮಹಾಭಾರತ'  ಚಿತ್ರದಲ್ಲಿಯೂ ದೀಪಿಕಾ ಅಭಿನಯಿಸಲಿದ್ದಾರೆ. 'ಮಹಾಭಾರತ'ದಲ್ಲಿ ದೀಪಿಕಾ ದ್ರೌಪದಿಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

2021ರಲ್ಲಿ ಬಿಡುಗಡೆಯಾಗಲಿದೆ ದೀಪಿಕಾ ನಟನೆಯ ಐದು ಚಿತ್ರಗಳು :
ಈ ವರ್ಷ ಐದು ಚಿತ್ರಗಳಲ್ಲಿ  ನಟಿಸುತ್ತಿರುವುದಾಗಿ ದೀಪಿಕಾ ಹೇಳಿದ್ದಾರೆ. ಈ ನಡುವೆ ದೀಪಿಕಾ ಮತ್ತು ಶ್ರತಿಕ್  ಜೋಡಿ ಇದೇ ಮೊದಲ ಬಾರಿಗೆ ದೊಡ್ಡ ಪರದೆಯಲ್ಲಿ ಕಾಣಿಸಿಕೊಳ್ಳಲಿದೆ. ಈ ಚಿತ್ರದ ಹೆಸರು ಫೈಟರ್.. ಇನ್ನು ದೀಪಿಕಾ ಅಭಿಮಾನಿಗಳು ಅವರ '83' ಚಿತ್ರದ ರಿಲೀಸ್ ಗಾಗಿ ಕಾಯುತ್ತಿದ್ದಾರೆ.
 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News