ಉತ್ತರ ಕರ್ನಾಟಕದ ಜನರ ನೆರವಿಗೆ ನಿಲ್ಲುವಂತೆ ದಾಸ ದರ್ಶನ್ ಮನವಿ

ಉತ್ತರ ಕರ್ನಾಟಕ ಭಾಗದಲ್ಲಿ ಭಾರಿ ಮಳೆಯಿಂದ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದ್ದು ಸಂಕಷ್ಟದಲ್ಲಿರುವ ಆ ಭಾಗದ ಜನರಿಗೆ ಕೈಲಾದ ಸಹಾಯ ಮಾಡುವಂತೆ ನಟ ದರ್ಶನ್ ನೆರವಿಗೆ ಮನವಿ ಮಾಡಿದ್ದಾರೆ.

Last Updated : Aug 8, 2019, 08:31 AM IST
ಉತ್ತರ ಕರ್ನಾಟಕದ ಜನರ ನೆರವಿಗೆ ನಿಲ್ಲುವಂತೆ ದಾಸ ದರ್ಶನ್ ಮನವಿ title=
File Image

ಬೆಂಗಳೂರು: ನಮ್ಮ ಉತ್ತರ ಕರ್ನಾಟಕ ಭಾಗದ ಜಿಲ್ಲೆಗಳ ಹಲವು ಹಳ್ಳಿಗಳು ಪ್ರವಾಹದ ಅಬ್ಬರಕ್ಕೆ ನೀರಿನಲ್ಲಿ ಮುಳುಗಿ ಹೋಗಿವೆ. ಅಲ್ಲಿರುವ ಜನರಿಗೆ ಆಸರೆಯಾಗಿ ನಿಲ್ಲುವುದು ಪ್ರತಿಯೊಬ್ಬ ಮನುಷ್ಯನ ಕರ್ತವ್ಯವಾಗಿರುತ್ತದೆ. ಈ ನಿಟ್ಟಿನಲ್ಲಿ ಎಲ್ಲರೂ ತಮ್ಮ ಕೈಲಾದ ಸೇವೆಯನ್ನು ಮಾಡಬೇಕಾಗಿ ವಿನಂತಿ ಎಂದು ನಟ ದರ್ಶನ್ ಸಾಮಾಜಿಕ ಮಾಧ್ಯಮಗಳ ಮೂಲಕ ಮನವಿ ಮಾಡಿದ್ದಾರೆ.

ಉತ್ತರ ಕರ್ನಾಟಕದಲ್ಲಿ ಪ್ರವಾಹದ ರಭಸಕ್ಕೆ ತುತ್ತಾಗಿರುವ ಹಲವು ಹಳ್ಳಿಗಳ ಜನರಿಗೆ ಮೂಲಭೂತ ಸಾಮಗ್ರಿಗಳ ಅವಶ್ಯಕತೆ ಇದೆ. ನಮ್ಮ 'ಡಿ ಕಂಪನಿ' ಬಳಗದಿಂದಲೂ ಸಹ ನಮ್ಮ ಕೈಲಾದ ಅಳಿಲುಸೇವೆಯನ್ನು ಮುಂದುವರೆಸೋಣ ಎಂದಿರುವ ದರ್ಶನ್, ತಮ್ಮ ಕೈಲಾದ ಸಹಾಯದೊಂದಿಗೆ ಈ ಕಾರ್ಯದಲ್ಲಿ ಭಾಗವಹಿಸಲು ಕೆಳಗಿನ ದೂರವಾಣಿ ನಂ. ಗಳಿಗೆ ಸಂಪರ್ಕಿಸತಕ್ಕದ್ದು ಎಂದು ದೂರವಾಣಿ ಸಂಖ್ಯೆಗಳನ್ನೂ ನೀಡಿದ್ದಾರೆ.

ದೂರವಾಣಿ ಸಂಖ್ಯೆ:

  • ರಾಹುಲ್ - 9986103219
  • ಶರತ್ - 9036197999
  • ಚೇತನ್ - 9620629646

ಅಗತ್ಯ ವಸ್ತುಗಳು:

  • ಬಟ್ಟೆಗಳು
  • ಬೇಳೆ, ಅಕ್ಕಿ, ದವಸ ಧಾನ್ಯಗಳು
  • ಬಿಸ್ಕತ್ ಮತ್ತು ಸಂರಕ್ಷಿತ ಆಹಾರ ಪದಾರ್ಥಗಳು
  • ಚಪ್ಪಲಿಗಳು
  • ರೈನ್ ಕೋರ್ಟ್ ಗಳು
  • ವಾಟರ್ ಬಾಟಲ್ ಗಳು
  • ಜನರಲ್ ಮೆಡಿಸನ್ಸ್
  • ಅಡುಗೆ ಎಣ್ಣೆ
  • ಟೂತ್ ಬ್ರಷ್, ಟೂತ್ ಪೇಸ್ಟ್, ಸಾಬೂನು
  • ಟೆಟ್ರಾ ಪ್ಯಾಕ್ ಹಾಲು

Trending News