ಮೇಘಾ ಶೆಟ್ಟಿ ವಿರುದ್ಧ ಗುಡುಗಿ ಪೋಸ್ಟ್ ಹಾಕಿದ ದರ್ಶನ್ ಪತ್ನಿ: ಮರುದಿನವೇ ಮಾಡಿದ್ದು ಮಾತ್ರ ಇಂಥಾ ಕೆಲಸ!

Vijayalakshmi post delete: ವಿಜಯಲಕ್ಷ್ಮಿ ಅವರು ಸಿಟ್ಟಿನಿಂದ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್‌ ಅಪ್‌ಲೋಡ್‌ ಮಾಡುತ್ತಿದ್ದಂತೆ ಮೇಘಾ ಶೆಟ್ಟಿ ಕೂಡ ಮರುದಿನವೇ ವಿಡಿಯೋವನ್ನು ಡಿಲೀಟ್ ಮಾಡಿದ್ದರು. ಇದಾದ ಕೆಲವೇ ಗಂಟೆಗಳಲ್ಲಿ ವಿಜಯಲಕ್ಷ್ಮೀ ಕೂಡ ತಮ್ಮ ಪೋಸ್ಟ್ ನ್ನು ಡಿಲೀಟ್ ಮಾಡಿದ್ದಾರೆ.

Written by - Bhavishya Shetty | Last Updated : Feb 20, 2023, 03:29 PM IST
    • ಚಾಲೆಂಜಿಂಗ್ ಸ್ಟಾರ್ ದರ್ಶನ್ ಬರ್ತ್ ಡೇ ಸೆಲೆಬ್ರೇಷನ್ ಮಾಡಿದ ವಿಚಾರ
    • ಕೋಪಗೊಂಡಿದ್ದ ಪತ್ನಿ ವಿಜಯಲಕ್ಷ್ಮಿ ದರ್ಶನ್‌ ಬೇಸರ ವ್ಯಕ್ತಪಡಿಸಿ ಪೋಸ್ಟ್ ಹಾಕಿದ್ದರು
    • ದರ್ಶನ್ ಪತ್ನಿ ಸೋಶಿಯಲ್ ಮೀಡಿಯಾದಲ್ಲಿ ಆ ಪೋಸ್ಟ್ ನ್ನು ಡಿಲೀಟ್ ಮಾಡಿದ್ದಾರೆ
ಮೇಘಾ ಶೆಟ್ಟಿ ವಿರುದ್ಧ ಗುಡುಗಿ ಪೋಸ್ಟ್ ಹಾಕಿದ ದರ್ಶನ್ ಪತ್ನಿ: ಮರುದಿನವೇ ಮಾಡಿದ್ದು ಮಾತ್ರ ಇಂಥಾ ಕೆಲಸ!  title=
vijayalakshmi

Vijayalakshmi post delete: ಚಾಲೆಂಜಿಂಗ್ ಸ್ಟಾರ್ ದರ್ಶನ್ ಬರ್ತ್ ಡೇ ಸೆಲೆಬ್ರೇಷನ್ ಮಾಡಿದ ವಿಚಾರಕ್ಕೆ ಕೋಪಗೊಂಡಿದ್ದ ಪತ್ನಿ ವಿಜಯಲಕ್ಷ್ಮಿ ದರ್ಶನ್‌ ಅವರು ಸೋಶಿಯಲ್ ಮೀಡಿಯಾದಲ್ಲಿ ಬೇಸರ ವ್ಯಕ್ತಪಡಿಸಿ ಪೋಸ್ಟ್ ಹಾಕಿದ್ದರು. ಈ ವೇಳೆ ಜೊತೆ ಜೊತೆಯಲಿ ಧಾರಾವಾಹಿ ಖ್ಯಾತಿಯ ನಟಿ ಮೇಘಾ ಶೆಟ್ಟಿಯವರನ್ನು ಟ್ಯಾಗ್ ಮಾಡಿ ಅಸಮಾಧಾನ ಹೊರಹಾಕಿದ್ದರು. ಇದಾದ ಕೆಲವೇ ಗಂಟೆಗಳಲ್ಲಿ ದರ್ಶನ್ ಪತ್ನಿ ಸೋಶಿಯಲ್ ಮೀಡಿಯಾದಲ್ಲಿ ಆ ಪೋಸ್ಟ್ ನ್ನು ಡಿಲೀಟ್ ಮಾಡಿದ್ದಾರೆ.

ವಿಜಯಲಕ್ಷ್ಮಿ ಅವರು ಸಿಟ್ಟಿನಿಂದ ಇನ್‌ಸ್ಟಾಗ್ರಾಂನಲ್ಲಿ ಪೋಸ್ಟ್‌ ಅಪ್‌ಲೋಡ್‌ ಮಾಡುತ್ತಿದ್ದಂತೆ ಮೇಘಾ ಶೆಟ್ಟಿ ಕೂಡ ಮರುದಿನವೇ ವಿಡಿಯೋವನ್ನು ಡಿಲೀಟ್ ಮಾಡಿದ್ದರು. ಇದಾದ ಕೆಲವೇ ಗಂಟೆಗಳಲ್ಲಿ ವಿಜಯಲಕ್ಷ್ಮೀ ಕೂಡ ತಮ್ಮ ಪೋಸ್ಟ್ ನ್ನು ಡಿಲೀಟ್ ಮಾಡಿದ್ದಾರೆ.

ಇದನ್ನೂ ಓದಿ: Darshan fans : ಮಾಧ್ಯಮದವರ ಮೇಲೆ ನಟ ದರ್ಶನ್ ಅಭಿಮಾನಿಗಳಿಂದ ಹಲ್ಲೆ ಆರೋಪ.!

ಫೆಬ್ರವರಿ 16ರಂದು ನಟ ದರ್ಶನ್ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೆ, ಅನೇಕ ಅಭಿಮಾನಿಗಳು ಸಹ ತಮ್ಮ ನೆಚ್ಚಿನ ನಟನ ಬರ್ತ್ ಡೇಯನ್ನು ಹಬ್ಬದಂತೆ ಅದ್ಧೂರಿಯಾಗಿ ಆಚರಣೆ ಮಾಡಿದ್ದರು. ಅಂತೆಯೇ ದರ್ಶನ್‌ ಬರ್ತ್‌ಡೇಯನ್ನು ಮೇಘಾ ಶೆಟ್ಟಿ, ಪವಿತ್ರಾ ಗೌಡ ಸೇರಿದಂತೆ ಅವರ ಕೆಲವು ಸ್ನೇಹಿತರು ಸಹ ಸೆಲೆಬ್ರೆಟ್‌ ಮಾಡಿದ್ದರು. ಈ ವಿಡಿಯೋವನ್ನು ಮೇಘಾ ಶೆಟ್ಟಿ ಸೋಷಿಯಲ್‌ ಮೀಡಿಯಾ ಅಧಿಕೃತ ಖಾತೆಯಲ್ಲಿ ಹಂಚಿಕೊಂಡಿದ್ದರು.

ಆದರೆ ಇಲ್ಲಿಯೇ ಆಗಿತ್ತು ಯಡವಟ್ಟು. ಈ ವಿಡಿಯೋ ನೋಡಿದ ದರ್ಶನ್‌ ಪತ್ನಿ ವಿಜಯಲಕ್ಷ್ಮಿ ಕೋಪಗೊಂಡು ತಕ್ಷಣವೇ ಮೌನ ಮುರಿದು ತಮ್ಮ ಇನ್‌ಸ್ಟಾಗ್ರಾಂನಲ್ಲಿ ಮೇಘಾ ಶೆಟ್ಟಿ ಅವರನ್ನು ಟ್ಯಾಗ್‌ ಮಾಡಿ ಪೋಸ್ಟ್ ಹಾಕಿದ್ದಾರೆ. ಇದರಲ್ಲಿ ಸಖತ್ ವಾರ್ನಿಂಗ್ ನೀಡಿರುವುದನ್ನು ಕಾಣಬಹುದು.

"ನನ್ನ ಕುಟುಂಬಕ್ಕೆ ಹಾನಿಯುಂಟು ಮಾಡುವ ವೀಡಿಯೊಗಳು, ಫೋಟೋಗಳು ಮತ್ತು ಇತರ ವಿಷಯಗಳನ್ನು ಪೋಸ್ಟ್ ಮಾಡುವ ಮತ್ತು ರಿಪೋಸ್ಟ್ ಮಾಡುತ್ತಿರುವ ಜನರು ಮತ್ತು ಅಭಿಮಾನಿಗಳಿಗೆ ಅದನ್ನು ತಕ್ಷಣವೇ ನಿಲ್ಲಿಸವಂತೆ ಪ್ರಾಮಾಣಿಕವಾಗಿ ವಿನಂತಿ ಮಾಡಿಕೊಳ್ಳುತ್ತೇನೆ. ಒಬ್ಬ ಮಹಿಳೆಯಾಗಿ ಈ ರೀತಿಯ ವೀಡಿಯೊವನ್ನು ಪೋಸ್ಟ್ ಮಾಡುವ ಮೊದಲು ಎರಡು ಬಾರಿ ಯೋಚಿಸಬೇಕಾಗಿತ್ತು. ಏಕೆಂದರೆ, ಇದು ನನಗೆ ಮತ್ತು ನನ್ನ ಮಗನಿಗೆ ಅಪಾರ ನೋವನ್ನು ಉಂಟುಮಾಡಿದೆ. ಇದು ನಿಮ್ಮ ವ್ಯಕ್ತಿತ್ವ ಮತ್ತು ನೈತಿಕತೆಯನ್ನು ತೋರುತ್ತದೆ. ಗಮನಿಸಿ, ನಾನು ಮೌನವಾಗಿದ್ದೇನೆ ಎಂದರೆ ನಾನ್‌ಸೆನ್ಸ್‌ ತೆಡೆದುಕೊಳ್ಳುತ್ತೇನೆ ಎಂದಲ್ಲ" ಎಂದು ಮೇಘಾ ಶೆಟ್ಟಿಯನ್ನು ಟ್ಯಾಗ್ ಮಾಡಿದ್ದರು.

ವಿಜಯಲಕ್ಷ್ಮಿ ನೀಡಿದ ವಾರ್ನಿಂಗ್‌ ಬೆನ್ನಲ್ಲೇ ಮೇಘಾ ಶೆಟ್ಟಿ ವಿಡಿಯೋವನ್ನು ಡಿಲೀಟ್‌ ಮಾಡಿದ್ದಾರೆ. ಇದನ್ನು ಕಂಡ ನೆಟ್ಟಿಗರು,  ಮೇಘಾ ಹೆದರಿದ್ದಾರೆ. ಅದಕ್ಕೆ ಪೋಸ್ಟ್ ಡಿಲೀಟ್ ಮಾಡಿದ್ದಾಗಿ ಹೇಳುತ್ತಿದ್ದಾರೆ.

ನಟ ದರ್ಶನ್‌ ಅವರ ಅಪ್ಪಟ ಅಭಿಮಾನಿಯಾಗಿರುವ ನಟಿ ಮೇಘಾ ಶೆಟ್ಟಿ, ಅವರ ಜೊತೆಗಿರುವ ಅನೇಕ ಫೋಟೊಗಳನ್ನು ಆಗಾಗ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಾರೆ.

ಇದನ್ನೂ ಓದಿ: ಡಿಬಾಸ್‌ ಪತ್ನಿಯ ವಾರ್ನಿಂಗ್‌ಗೆ ಸೈಲೆಂಟ್‌ ಆದ ನಟಿ ಮೇಘಾ ಶೆಟ್ಟಿ..! ವಿಡಿಯೋ ಡಿಲೀಟ್‌

ಅಲ್ಲದೆ, ದಚ್ಚು ಸಫಾರಿಗೆ ಹೋಗಿ ಬಂದ ಫೋಟೊಗಳಲ್ಲಿಯೂ ಮೇಘಾ ಕಾಣಿಸಿಕೊಂಡಿದ್ರು. ಇಷ್ಟೇಲ್ಲ ಆದ್ರೂ ಸುಮ್ಮನಿದ್ದ ವಿಜಯಲಕ್ಷ್ಮಿಯವರು ಇದೀಗ ಕೋಪಗೊಂಡು ಮೆಘಾ ಶೆಟ್ಟಿಯನ್ನು ತರಾಟೆಗೆ ತೆಗೆದುಕೊಂಡಿದ್ದರು. ಇತ್ತ ದರ್ಶನ್ ಪತ್ನಿ ಕೆಂಡಾಮಂಡಲವಾಗಿ ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡುತ್ತಿದ್ದಂತೆ ನಟಿ ಮೇಘಾ ಶೆಟ್ಟಿ ತಮ್ಮ ಪೋಸ್ಟ್ ಡಿಲೀಟ್ ಮಾಡಿ ಯಾವುದೇ ರೀತಿಯ ಪ್ರತಿಕ್ರಿಯೆ ನೀಡದೆ ಸುಮ್ಮನಾಗಿದ್ದಾರೆ. ಅಲ್ಲದೆ, ವಿಜಯಲಕ್ಷ್ಮಿಯವರು ಸಹ ತಾವು ಪೋಸ್ಟ್‌ ಮಾಡಿದ್ದ ವಿಡಿಯೋವನ್ನು ಡಿಲೀಟ್‌ ಮಾಡಿದ್ದಾರೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News