ದೊಡ್ಮನೆ ಕುಡಿಯ ಜೊತೆ ಫಾರ್ಮ್‌ಹೌಸ್‌ನಲ್ಲಿ ಕಾಟೇರನ ಸಂಕ್ರಾಂತಿ ಆಚರಣೆ!

Darshan Sankranthi Celebration:  ಚಾಲೆಂಜಿಂಗ್ ಸ್ಟಾರ್ ದರ್ಶನ್ ಮೊದಲಿನಿಂದಲೂ ಮೈಸೂರಿನ ಸಮೀಪವಿರುವ ತಮ್ಮ ತೋಟದಲ್ಲಿಯೇ ಸಂಕ್ರಾಂತಿ ಹಬ್ಬವನ್ನುಜೋರಾಗಿ  ಆಚರಣೆ ಮಾಡಿಕೊಂಡು ಬರುತ್ತಿದ್ದು, ಈ ಬಾರಿ ತಮ್ಮ ತೋಟದಲ್ಲಿ ದೊಡ್ಮನೆಯ ಕುಡಿಯ ಜೊತೆಗೆ ಹಬ್ಬ ಆಚರಿಸಿದ್ದಾರೆ.  

Written by - Zee Kannada News Desk | Last Updated : Jan 16, 2024, 09:24 AM IST
  • ಪ್ರೇಕ್ಷಕರ ಮನ ಗೆದ್ದ 'ಕಾಟೇರ' ಸಿನಿಮಾ, ಕೇವಲ ಕರ್ನಾಟಕದಲ್ಲಿಯೇ 135 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿದೆ.
  • ದರ್ಶನ್ ಸಂಕ್ರಾಂತಿ ಹಬ್ಬವನ್ನು ಈ ಬಾರಿ ಡಾ.ಪಾರ್ವತಮ್ಮ ರಾಜ್‌ಕುಮಾರ್ ಸಹೋದರನ ಪುತ್ರ ಧ್ರುವನ್ ಜೊತೆ ಆಚರಿಸಿದ್ದಾರೆ.
  • ಧ್ರುವನ್‌ಗೆ ಕಳೆದ ವರ್ಷ ಚಾಮರಾಜನಗರ ಬೇಗೂರು ಸಮೀಪದ ಹಿರಿಕಾಟಿ ಗೇಟ್ ಬಳಿ ಬೈಕ್ ಮತ್ತು ಟಿಪ್ಪರ್ ನಡುವೆ ಡಿಕ್ಕಿ ಸಂಭವಿಸಿದ್ದು, ಈ ವೇಳೆ ಕಾಲಿಗೆ ಪೆಟ್ಟಾಗಿತ್ತು.
ದೊಡ್ಮನೆ ಕುಡಿಯ ಜೊತೆ ಫಾರ್ಮ್‌ಹೌಸ್‌ನಲ್ಲಿ ಕಾಟೇರನ ಸಂಕ್ರಾಂತಿ ಆಚರಣೆ! title=

Darshan Sankranthi Celebration With Dhruvan: ಸ್ಯಾಂಡಲ್‌ವುಡ್‌ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್'ಕಾಟೇರ' ಸಿನಿಮಾದ ಭರ್ಜರಿ ಯಶಸ್ಸನ್ನು  ಸಂಕ್ರಾಂತಿ ಹಬ್ಬದ ಜೊತೆಯಲ್ಲಿ ಸಂಭ್ರಮಿಸುತ್ತಿದ್ದಾರೆ. ದರ್ಶನ್‌ ಕಮರ್ಷಿಯಲ್ ಎಲಿಮೆಂಟ್ಸ್‌ ಅನ್ನು ಪಕ್ಕಕ್ಕೆ ಇಟ್ಟು ತಮ್ಮ ಪಾತ್ರದ ಮೂಲಕವೇ ಪ್ರಯೋಗ ಮಾಡಲು ಮುಂದಾಗಿದ್ದು, ಈ ವಿಭಿನ್ನ ಪ್ರಯತ್ನ ನಟನ ಕೈ ಹಿಡಿದಿದೆ. ಪ್ರೇಕ್ಷಕರ ಮನ ಗೆದ್ದ 'ಕಾಟೇರ' ಸಿನಿಮಾ, ಕೇವಲ ಕರ್ನಾಟಕದಲ್ಲಿಯೇ 135 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿದೆ. ಇದರೊಂದಿಗೆ ವಿದೇಶಗಳಲ್ಲಿ ಈ ಚಿತ್ರ ಪ್ರದರ್ಶನ ಕಂಡಿದ್ದು, ಕೆಲವು ದಿನಗಳ ಹಿಂದಷ್ಟೇ ದರ್ಶನ್ ದುಬೈನಲ್ಲಿ ನಡೆದ ವಿಶೇಷ ಪ್ರೀಮಿಯರ್‌ನಲ್ಲಿ ಭಾಗವಹಿಸಿದ್ದರು. 

ಸದ್ಯ ನಿನ್ನೆ ದರ್ಶನ್ 'ಕಾಟೇರ' ಸಕ್ಸಸ್‌ನ್ನು ಸಂಕ್ರಾಂತಿ ಹಬ್ಬದೊಂದಿಗೆ ಆಚರಣೆ ಮಾಡುವುದರೊಂದಿಗೆ, ಈ ಬಾರಿ ಡಾ.ಪಾರ್ವತಮ್ಮ ರಾಜ್‌ಕುಮಾರ್ ಸಹೋದರನ ಪುತ್ರ ಧ್ರುವನ್ ಜೊತೆ ಸಂಕ್ರಾಂತಿ ಹಬ್ಬ ಆಚರಿಸಿದ್ದಾರೆ. ಸ್ವತ: ದರ್ಶನ್  ತಮ್ಮ ಫಾರ್ಮ್ ಹೌಸ್‌ನಲ್ಲಿರುವ ಎತ್ತುಗಳೊಂದಿಗೆ ಧ್ರುವನ್ ಜೊತೆ ತೆಗೆಸಿಕೊಂಡ ಫೋಟೊಗಳನ್ನು ಸೋಶಿಯಲ್ ಮೀಡಿಯಾಗಳಲ್ಲಿ ಶೇರ್ ಮಾಡಿ, ಇದರೊಂದಿಗೆ ತಮ್ಮ ಅಭಿಮಾನಿಗಳಿಗೆ ಹಾಗೂ ಸಮಸ್ತ ನಾಡಿನ ಜನತೆಗೆ ಸಂಕ್ರಾಂತಿ ಹಬ್ಬದ ಶುಭಾಶಯಗಳನ್ನು ತಿಳಿಸಿದ್ದಾರೆ. ‌

 

ಇದನ್ನೂ ಓದಿ: Prabhas: ನಟ ಪ್ರಭಾಸ್ ಯಶಸ್ಸಿಗಾಗಿ ಹೆಸರನ್ನೇ ಬದಲಿಸಿಕೊಂಡ್ರಾ?

ನಟ ದರ್ಶನ್‌, "ವರ್ಷದ ಮೊದಲ ಹಬ್ಬ ಮಕರ ಸಂಕ್ರಾಂತಿ ಎಲ್ಲರಲ್ಲೂ ಹೊಸ ಉತ್ಸಾಹ, ನವಚೈತನ್ಯ, ನೆಮ್ಮದಿಯ ಬಾಳನ್ನು ಕರುಣಿಸಲಿ. ಕಹಿ ನೆನಪು ಮರೆಯಾಗಲಿ, ಸಿಹಿ ನೆನಪು ಚಿರವಾಗಲಿ, ಹೊಸ ದಿನಗಳಲ್ಲಿ ನೀವು ಕಂಡ ಕನಸು ನನಸಾಗಲಿ. ನೆಮ್ಮದಿಯ ಬಾಳು ನಿಮ್ಮದಾಗಲಿ." ಎಂದು ಧ್ರುವನ್ ಜೊತೆಗಿನ ಫೋಟೊಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಧ್ರುವನ್ ಮೂಲ ಹೆಸರು ಸೂರಜ್. ಧ್ರುವನ್‌ 'ಭಗವಾನ್ ಶ್ರೀಕೃಷ್ಣ ಪರಮಾತ್ಮ' ಸಿನಿಮಾ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಡಬೇಕಿದ್ದು, ಆದರೇ ಅಷ್ಟರಲ್ಲಿಯ ಧ್ರುವನ್‌ಗೆ ಅಪಘಾತವಾಗಿತ್ತು. 

ಧ್ರುವನ್‌ಗೆ ಕಳೆದ ವರ್ಷ ಚಾಮರಾಜನಗರ ಬೇಗೂರು ಸಮೀಪದ ಹಿರಿಕಾಟಿ ಗೇಟ್ ಬಳಿ ಬೈಕ್ ಮತ್ತು ಟಿಪ್ಪರ್ ನಡುವೆ ಡಿಕ್ಕಿ ಸಂಭವಿಸಿದ್ದು, ಈ ವೇಳೆ ಕಾಲಿಗೆ ಪೆಟ್ಟಾಗಿತ್ತು. ಅಪಘಾತವಾದ ಬಳಿಕ ಪೊಲೀಸರು ಧ್ರುವನ್ ಅನ್ನು ಮೈಸೂರಿನ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಿದ್ದರು. ಕಾಲಿಗೆ ತೀವ್ರ ಪೆಟ್ಟಾಗಿದ್ದರಿಂದ ಶಸ್ತ್ರ ಚಿಕಿತ್ಸೆ ಮಾಡಿ ಅವರಿಗೆ ಪೆಟ್ಟಾಗಿದ್ದ ಒಂದು ಕಾಲನ್ನು ಕತ್ತರಿಸಿದ ಬಳಿಕ ಧ್ರುವನ್ ಕಾಣಿಸಿಕೊಂಡಿರಲಿಲ್ಲ. ಇತ್ತೀಚೆಗೆ ನಡೆದ 'ಕಾಟೇರ' ಸಿನಿಮಾ ಇವೆಂಟ್‌ನಲ್ಲಿ ದರ್ಶನ್ ಜೊತೆ ಕಾಣಿಸಿಕೊಂಡಿದ್ದು, ಇದೀಗ ದರ್ಶನ್ ಫಾರ್ಮ್ ಹೌಸ್‌ನಲ್ಲಿ ಕಾಣಿಸಿಕೊಂಡಿದ್ದಾರೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

 

Trending News