ಪ್ರೇಮ್ ಅಭಿನಯದ 'ದಳಪತಿ'ಗೆ ಬಿಡುಗಡೆ ಭಾಗ್ಯ

ನೆನಪಿರಲಿ ಖ್ಯಾತಿಯ ಪ್ರೇಮ್ ಅಭಿನಯದ 'ದಳಪತಿ’ ಚಿತ್ರಕ್ಕೆ ಕಡೆಗೂ ಬಿಡುಗಡೆಯ ಭಾಗ್ಯ ದೊರೆತಿದೆ. ಇದೇ ಏಪ್ರಿಲ್ 13ರಂದು ಚಿತ್ರ ಬಿಡುಗಡೆಯಾಗುತ್ತಿದೆ.

Last Updated : Apr 11, 2018, 01:52 PM IST
ಪ್ರೇಮ್ ಅಭಿನಯದ 'ದಳಪತಿ'ಗೆ ಬಿಡುಗಡೆ ಭಾಗ್ಯ title=

ಬೆಂಗಳೂರು : ನೆನಪಿರಲಿ ಖ್ಯಾತಿಯ ಪ್ರೇಮ್ ಅಭಿನಯದ 'ದಳಪತಿ’ ಚಿತ್ರಕ್ಕೆ ಕಡೆಗೂ ಬಿಡುಗಡೆಯ ಭಾಗ್ಯ ದೊರೆತಿದೆ. ಇದೇ ಏಪ್ರಿಲ್ 13ರಂದು ಚಿತ್ರ ಬಿಡುಗಡೆಯಾಗುತ್ತಿದ್ದು, ಸಿನಿಪ್ರಿಯರಲ್ಲಿ ಭಾರೀ ಕುತೂಹಲ ಮೂಡಿಸಿದೆ. 

ಪ್ರಶಾಂತ್ ರಾಜ್ ನಿರ್ದೇಶನದ ಪ್ರೀತಿ, ಸಂಬಂಧ, ಸೆಂಟಿಮೆಂಟ್ ಅಂಶಗಳನ್ನು ಒಳಗೊಂಡಿರುವ ಈ ಕಮರ್ಷಿಯಲ್ ಚಿತ್ರ ನಾಲ್ಕು ವರ್ಷಗಳ ಹಿಂದೆಯೇ ಸೆಟ್ಟೇರಿದ್ದರೂ ಹಲವಾರು ಕಾರಣಗಳಿಂದ ಬಿಡುಗಡೆ ತಡವಾಗಿತ್ತು. ಆದರೀಗ ರಾಜ್ಯಾದ್ಯಂತ ಸುಮಾರು 200 ಚಿತ್ರಮಂದಿರಗಳಲ್ಲಿ ಏಪ್ರಿಲ್ 13ರಂದು ಚಿತ್ರ ಬಿಡುಗಡೆಯಾಗಲಿದೆ. 

ಪ್ರೇಮ್ ಜತೆ ನಾಯಕಿಯಾಗಿ 'ಗೋಧಿ ಬಣ್ಣ ಸಾಧಾರಣ ಮೈಕಟ್ಟು' ಚಿತ್ರದಲ್ಲಿ ನಟಿಸಿದ್ದ ಕೃತಿ ಕರಬಂಧ ನಾಯಕಿಯಾಗಿದ್ದು, ಟಿಪಿಕಲ್ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಫೈರೋಝ್‌ ಖಾನ್‌ ಮತ್ತು ನವೀನ್‌ ಜಂಟಿಯಾಗಿ ಚಿತ್ರ ನಿರ್ಮಾಣ ಮಾಡಿದ್ದು, ಚರಣ್‌ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ಈಗಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ದಳಪತಿ ಮೇಕಿಂಗ್ ಸೀನ್'ಗಳು ಹಾಡುಗಳು ಸೂಪರ್ ಹಿಟ್ ಆಗಿದೆ. ಹಾಗಾಗಿ ಸಿನಿಮಾವನ್ನು ಕೂಡ ಪ್ರೇಕ್ಷಕರು ಇಷ್ಟಪಡುವ ನಿರೀಕ್ಷೆಯನ್ನು ಚಿತ್ರತಂಡ ಹೊಂದಿದೆ. 

ಈ ಚಿತ್ರದ ವಾರೆ ವಾಹ್ ಹಾಡು ನಿನ್ನೆಯಷ್ಟೇ ಯುಟ್ಯೂಬ್'ನಲ್ಲಿ ಬಿಡುಗಡೆಯಾಗಿದ್ದು, ಸಖತ್ ಖ್ಯಾತಿಯಾಗಿದೆ.

 

Trending News