D2H ನಿಂದ ಜಬರ್ದಸ್ತ್ ಆಫರ್, ಇನ್ಮುಂದೆ 5 ವರ್ಷಗಳವರೆಗೆ ಈ ಸೌಕರ್ಯ ಉಚಿತ

D2H ಗ್ರಾಹಕರು ಇದೀಗ ಯಾವುದೇ ಅಂಟಿನಾ ಇಲ್ಲದೆಯೂ ಕೂಡ  ಸೆಟಪ್ ಬಾಕ್ಸ್ ಗಳನ್ನೂ ಸ್ಥಾಪಿಸಬಹುದು. ಸೆಟ್ಟಪ್ ಬಾಕ್ಸ್ ಪಡೆಯಲು ನೀವು ಕಸ್ಟಮರ್ ಕೇರ್ ಅನ್ನು  ಸಂಪರ್ಕಿಸಬಹುದು. ಇದಲ್ಲದೆ, ಕಂಪನಿಯ ವೆಬ್‌ಸೈಟ್‌ನಿಂದ ಹೊಸ ಸಂಪರ್ಕಕ್ಕಾಗಿ ನೀವು ಕೋರಬಹುದು.

Written by - Nitin Tabib | Last Updated : Feb 23, 2021, 05:49 PM IST
  • D2H ನಿಂದ ಜಬರ್ದಸ್ತ್ ಆಫರ್.
  • ಸಿಗುತ್ತಿದೆ ಐದು ವರ್ಷಗಳ ವಾರಂಟಿ
  • ಹೇಗೆ ಲಾಭ ಪಡೆಯಬೇಕು ಇಲ್ಲಿ ತಿಳಿಯಿರಿ
D2H ನಿಂದ ಜಬರ್ದಸ್ತ್ ಆಫರ್, ಇನ್ಮುಂದೆ 5 ವರ್ಷಗಳವರೆಗೆ ಈ ಸೌಕರ್ಯ ಉಚಿತ title=
Direct To Home (File Photo)

ನವದೆಹಲಿ: ಡೈರೆಕ್ಟ್ ಟು ಹೋಮ್ ಕಂಪನಿ ಡಿಶ್ ಟಿವಿ (Dish TV) ತನ್ನ ಗ್ರಾಹಕರಿಗೆ ಬಂಬಾಟ್ ಕೊಡುಗೆಯೊಂದನ್ನು ಹೊತ್ತು ತಂದಿದೆ. ಈಗ ಗ್ರಾಹಕರಿಗೆ ಸೆಟ್ಟಪ್ ಬಾಕ್ಸ್‌ ಮೇಲೆ  ಐದು ವರ್ಷಗಳ ಖಾತರಿ ನೀಡಲಾಗುವುದು ಎಂದು ಕಂಪನಿ ಹೇಳಿದೆ. ಈ ಪ್ರಯೋಜನವನ್ನು ನೀವು ಹೇಗೆ ಪಡೆಯಬಹುದು ಎಂಬುದನ್ನೊಮ್ಮೆ ತಿಳಿದುಕೊಳ್ಳೋಣ ಬನ್ನಿ.

ಟೆಕ್ ಸೈಟ್ ಆಗಿರುವ TELECOMTALK ನಲ್ಲಿ ಪ್ರಕಟಗೊಂಡ ವರದಿಯೊಂದರ ಪ್ರಕಾರ ಡಿಶ್ ಟಿವಿ ತನ್ನ D2H ಗ್ರಾಹಕರಿಗಾಗಿ ಒಂದು ನೂತನ ಪ್ಲಾನ್ ಬಿಡುಗಡೆ ಮಾಡಿದೆ. ಕಂಪನಿಯ ಪ್ರಕಾರ D2H ಗ್ರಾಹಕರಿಗೆ ಪೂರ್ಣ ಐದು ವರ್ಷ ಸೆಟಪ್ ಬಾಕ್ಸ್ ಮೇಲೆ ವಾರಂಟಿ ನೀಡಲಾಗುವುದು ಎಂದಿದೆ. ಇದಕ್ಕೂ ಮೊದಲು ಗ್ರಾಹಕರಿಗೆ ಕೇವಲ ಮೂರು ವರ್ಷಗಳ ವಾರಂಟಿ ಮಾತ್ರ ಸಿಗುತ್ತಿತ್ತು. 

ವರದಿಗಳ ಪ್ರಕಾರ D2H (Direct To Home ) ಗ್ರಾಹಕರಿಗೆ ನಾಲ್ಕು ವಿಧದ ಸೆಟಪ್ ಬಾಕ್ಸ್ ಗಳನ್ನು ನೀಡಲಾಗುತ್ತದೆ. ಇದರಲ್ಲಿ  Android TV-based box ಬೆಲೆ ರೂ. 3,999 ಆಗಿದೆ.  D2H Digital HD Set-Top Box ಬೆಲೆ ರೂ.1,799 , D2H Digital HD Set-Top Box ಬೆಲೆ ರೂ.1,599  ಆಗಿದ್ದರೆ  D2H Digital SD Set-Top Box 1,499 ರೂ.ಗಳಷ್ಟಾಗಿದೆ.

ಅಂಟಿನಾನಲ್ಲಿಯೂ ಕೂಡ ಆಯ್ಕೆ ಸಿಗುತ್ತಿದೆ
ಡಿ 2 ಹೆಚ್ ಗ್ರಾಹಕರು ಈಗ ಯಾವುದೇ ಆಂಟೆನಾ ಸಹಿತ ಅಥವಾ ಅಂಟಿನಾ ರಹಿತ ಸೆಟಪ್ ಬಾಕ್ಸ್ ಗಳನ್ನು ಸ್ಥಾಪಿಸಬಹುದು. ಸೆಟ್ ಟಾಪ್ ಬಾಕ್ಸ್ ಪಡೆಯಲು ನೀವು ಗ್ರಾಹಕ ಆರೈಕೆ ಕೇಂದ್ರವನ್ನು ಸಂಪರ್ಕಿಸಬಹುದು. ಇದಲ್ಲದೆ, ಕಂಪನಿಯ ವೆಬ್‌ಸೈಟ್‌ನಿಂದ ಕೂಡ ನೀವು ಹೊಸ ಸಂಪರ್ಕಕ್ಕಾಗಿ ಕೋರಬಹುದು.

ಇದನ್ನೂ ಓದಿ-ಫೆಬ್ರವರಿ 1ರಿಂದ ಹೊಸ ಕೇಬಲ್ ನೀತಿ ಜಾರಿಗೆ! ಗ್ರಾಹಕರು ತಿಳಿಯಲೇಬೇಕಾದ ಮಾಹಿತಿ...

ಬ್ರಾಡ್ಬ್ಯಾಂಡ್ ಸಂಪರ್ಕಕ್ಕಾಗಿ ಹೆಚ್ಚುತ್ತಿರುವ ಬೇಡಿಕೆಯ ಹಿನ್ನೆಲೆ ಇತ್ತೀಚಿನ ದಿನಗಳಲ್ಲಿ  ಡೈರೆಕ್ಟ್ ಟು ಹೋಮ್ ಸೇವೆಗಳು ಪ್ರಭಾವಿತಗೊಂಡಿವೆ ಎಂಬುದು ಇಲ್ಲಿ ಉಲ್ಲೇಖನೀಯ. ಕಳೆದ ತ್ರೈಮಾಸಿಕದ ಫಲಿತಾಂಶಗಳು ಸಹ ಉತ್ತಮವಾಗಿಲ್ಲ.

ಇದನ್ನೂ ಓದಿ-DTH, CABLE TV ಬಳಕೆದಾರರಿಗೆ ಹೊಸವರ್ಷದ ಗಿಫ್ಟ್ ನೀಡಿದ TRAI

ಕೆಲವು ಸಮಯದ ಹಿಂದೆ ಡಿಶ್ ಟಿವಿ (Dish TV) ತನ್ನ ಡಿ 2 ಹೆಚ್ ಗ್ರಾಹಕರಿಗೆ  99 ರೂಗಳಿಗೆ ವಿಸ್ತೃತ ಖಾತರಿ ಯೋಜನೆಯನ್ನು ಘೋಷಿಸಿತ್ತು. ಈ ವಿಸ್ತೃತ ಖಾತರಿ ಯೋಜನೆಯಲ್ಲಿ ಜಿಎಸ್‌ಟಿಯಿಂದ ಆವೃತವಾದ ಸೆಟ್-ಟಾಪ್ ಬಾಕ್ಸ್ (STB) ಸೇರಿದೆ.

ಇದನ್ನೂ ಓದಿ-DTH ಮಾರ್ಗಸೂಚಿಗಳ ಪರಿಷ್ಕರಣೆಗೆ ಕೇಂದ್ರ ಕ್ಯಾಬಿನೆಟ್ ಒಪ್ಪಿಗೆ

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News