ಒಳ್ಳೆಯವನು ಅನಿಸಿಕೊಳ್ಳೋಕೆ ತುಂಬಾ ಆಕ್ಟ್ ಮಾಡ್ಬೇಕು, ನಾನು ಕೆಟ್ಟವನು ಸ್ವಾಮಿ : ಡಿ ಬಾಸ್ ಈ ರೀತಿ ಹೇಳಿದ್ಯಾಕೆ ?

ಇತ್ತೀಚೆಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮಾತನಾಡಿರುವ ಹೇಳಿಕೆ ಭಾರೀ ವೈರಲ್ ಆಗುತ್ತಿದೆ. ಒಳ್ಳೆಯವನು ಅನಿಸಿಕೊಳ್ಳೋಕೆ ತುಂಬಾ ಆಕ್ಟ್ ಮಾಡಬೇಕು. ನಾನು ಕೆಟ್ಟವನು ಸ್ವಾಮಿ ಅನ್ನೋ ಈ ಮಾತು ಭಾರೀ ವೈರಲ್ ಆಗುತ್ತಿದೆ.

Written by - YASHODHA POOJARI | Last Updated : Mar 2, 2023, 12:52 PM IST
  • ಡಿ ಬಾಸ್ ದರ್ಶನ್ ಏನೇ ಮಾತಾಡಿದರೂ ವೈರಲ್ ಆಗುತ್ತದೆ.
  • ದರ್ಶನ್ ಪ್ರತಿ ಮಾತುಗಳನ್ನು ಅವರ ಅಭಿಮಾನಿಗಳು ಇಷ್ಟಪಡುತ್ತಾರೆ.
  • ಇದೀಗ ಇವರ ಒಂದು ಮಾತು ಸಿಕ್ಕಾಪಟ್ಟೆ ವೈರಲ್ ಆಗಿದೆ.
ಒಳ್ಳೆಯವನು ಅನಿಸಿಕೊಳ್ಳೋಕೆ ತುಂಬಾ ಆಕ್ಟ್ ಮಾಡ್ಬೇಕು, ನಾನು ಕೆಟ್ಟವನು ಸ್ವಾಮಿ : ಡಿ ಬಾಸ್ ಈ ರೀತಿ ಹೇಳಿದ್ಯಾಕೆ ? title=

ಬೆಂಗಳೂರು : ಡಿ ಬಾಸ್ ದರ್ಶನ್ ಏನೇ ಮಾತಾಡಿದರೂ ವೈರಲ್ ಆಗುತ್ತದೆ. ಅಂದರೆ ದರ್ಶನ್ ಪ್ರತಿ ಮಾತುಗಳನ್ನು ಅವರ ಅಭಿಮಾನಿಗಳು ಇಷ್ಟಪಡುತ್ತಾರೆ. ಇದೀಗ ಇವರ ಒಂದು ಮಾತು ಸಿಕ್ಕಾಪಟ್ಟೆ ವೈರಲ್ ಆಗಿದೆ. ಜನ ಕೂಡಾ ಇದನ್ನ ತುಂಬಾ ಖುಷಿಯಿಂದ ಸ್ವೀಕರಿಸಿ ಅಳವಡಿಸಿಕೊಳ್ಳೋ ಪ್ರಯತ್ನ ಮಾಡುತ್ತಾರೆ. ನಮ್ಮ ಬಾಸ್ ಡಿ ಬಾಸ್ ಅಂತ ಜನ ಕೂಡಾ  ಪ್ರೀತಿ ಹರಿಸುತ್ತಾರೆ. ನಮ್ಮನೆ ಮಗ ಇವ ಎಂದು ಬಾಯಿ ತುಂಬಾ  ಕರೆಯುತ್ತಾರೆ. 

ಗೊತ್ತಾ ಡಿ ಬಾಸ್ ಗೆ ಬಹಳಷ್ಟು ಒಳ್ಳೆ ಗುಣಗಳು ಇವೆ. ಅವುಗಳಲ್ಲಿ ಒಂದು ಅವರ ನೇರ ಮಾತು. ನಾನು ಇರೋದೇ ಹಿಂಗೆ ಸ್ವಾಮಿ, ನಾಟಕೀಯವಾಗಿ ಯಾವತ್ತೂ ಬದುಕುವುದಿಲ್ಲ ಅನ್ನೋದು ದರ್ಶನ್ ಮಾತು. ಈ ಮಾತುಗಳನ್ನು ದರ್ಶನ್ ಎಲ್ಲೇ ಹೋದರೂ  ಹೇಳುತ್ತಿರುತ್ತಾರೆ. ಅದರ ಲ್ಲೂ ಇತ್ತೀಚೆಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮಾತನಾಡಿರುವ ಹೇಳಿಕೆ ಭಾರೀ ವೈರಲ್ ಆಗುತ್ತಿದೆ. ಒಳ್ಳೆಯವನು ಅನಿಸಿಕೊಳ್ಳೋಕೆ ತುಂಬಾ ಆಕ್ಟ್ ಮಾಡಬೇಕು. ನಾನು ಕೆಟ್ಟವನು ಸ್ವಾಮಿ ಅನ್ನೋ ಅವರ ಮಾತು ಭಾರೀ ವೈರಲ್ ಆಗುತ್ತಿದೆ.

ಇದನ್ನೂ ಓದಿ : ಮತ್ತೇ ಒಂದಾಗುತ್ತಿದ್ದಾರೆ ಮಾದಕ ಚೆಲುವೆ ಶಿಲ್ಪಾ ಶೆಟ್ಟಿ ಮತ್ತು ಕ್ರೇಜಿ ಸ್ಟಾರ್ ಉಪೇಂದ್ರ..!

ದರ್ಶನ್ ಈ ಹೇಳಿಕೆಯನ್ನು ಅವರ ಅಭಿಮಾನಿಗಳು ಕೂಡಾ ಶೇರ್ ಮಾಡಿ, ಕಾಮೆಂಟ್ ನಲ್ಲಿ ತಮ್ಮ ಅಭಿಪ್ರಾಯ  ಹಂಚಿಕೊಳ್ಳುತ್ತಿದ್ದಾರೆ. ಒಳ್ಳೆ ಮನಸ್ಸು ಇರೋರು ಈ ತರ ಯೋಚನೆ ಮಾಡುತ್ತಾರೆ. ನಾವು ಒಳ್ಳೆಯವರು ಅನಿಸೋಕೆ ನಾನಾ ರೀತಿ ನಾಟಕ ಮಾಡಿ ಮೆಚ್ಚುಗೆ ಗಳಿಸಬೇಕು. ಅದೇ ಕೆಟ್ಟವನು ಅನ್ನೋದನ್ನ ಜನ ಒಂದೇ ಸಲ ತೀರ್ಮಾನ ಮಾಡಿ ಸುಮ್ಮನೇ ಆಗುತ್ತಾರೆ ಅನ್ನೋದು ದರ್ಶನ್ ಅವರ ಮಾತು. ಕ್ರಾಂತಿ ಸಿನಿಮಾ ಬಳಿಕ ಇದೀಗ ಕಾಟೇರ ಸಿನಿಮಾದ ಶೂಟಿಂಗ್ ನಲ್ಲಿ ಬ್ಯುಸಿ ಇದ್ದಾರೆ ದರ್ಶನ್. ಜೊತೆಗೆ ಡಯಟ್ ಮತ್ತು ವರ್ಕೌಟ್ ಅಂತ  ಆ ಕಡೆ ಗಮನಹರಿಸಿದ್ದಾರೆ.

ಇದನ್ನೂ ಓದಿ :  ಈ ನಟ ಮತ್ತು ನಿರ್ದೇಶಕರ ಕಾಂಬಿನೇಷನ್​ನ 2ನೇ ಚಿತ್ರಕ್ಕಾಗಿ ಸಿನಿರಸಿಕರು ಕಾಯುತ್ತಿದ್ದಾರೆ!

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News