ವೂಟ್ ನಲ್ಲಿ ‘ಸೈಬರ್ ವಾರ್’: ತೆರೆಗೆ ಬರಲಿದೆ ‘ಮುಂಬೈ ಅಪರಾಧ ಲೋಕ‘

ವಿಶೇಷ ಕಮಾಂಡೊ ಪಾತ್ರದಾರಿಯಾಗಿ ಅಭಿನವ್ ಕಾಸಿಕೊಳ್ಳುತ್ತಿದ್ದಾರೆ. ಇನ್ನು ಅಭಿನವ್  ಅವರನ್ನು ಅನಾವಶ್ಯಕವಾಗಿ ಬಾಲಕಿಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲಿಗೆ ಕಳುಹಿಸಲಾಗಿರುತ್ತದೆ. ಇನ್ನು ಆಕಾಶ್ ಗೆ ಮಾತ್ರ ಆ ಕೊಲೆ ಪ್ರಕರಣದ ನಿಜಶಾಂಶ ಗೊತ್ತಿರುತ್ತದೆ.

Written by - YASHODHA POOJARI | Edited by - Bhavishya Shetty | Last Updated : Aug 21, 2022, 10:09 AM IST
    • ವೂಟ್‌ನ ಪ್ರಸಿದ್ಧ ವೆಬ್ ಸೀರಿಸ್ ‘ಸೈಬರ್ ವಾರ್- ಹರ್ ಸ್ಕ್ರೀನ್ ಕ್ರೈಂ ಸೀನ್’
    • ಈ ಸಿರೀಸ್ ನ ಮತ್ತೆರಡು ಹೊಸ ಶೋ ಆರಂಭಗೊಳ್ಳುತ್ತಿವೆ
    • ಅಭಿನವ್ ಶುಕ್ಲಾ, ವಿಕ್ರಮ್ ಪಾತ್ರದಾರಿಯಾಗಿ ಕಾಸಿಕೊಳ್ಳುತ್ತಿದ್ದಾರೆ
ವೂಟ್ ನಲ್ಲಿ ‘ಸೈಬರ್ ವಾರ್’: ತೆರೆಗೆ ಬರಲಿದೆ ‘ಮುಂಬೈ ಅಪರಾಧ ಲೋಕ‘ title=
Cyber War Har screen Crime Scene

ತನ್ವೀರ್ ಬೂಕ್ವಾಲಾ ನಿರ್ಮಾಣದ, ಅಂಕುಶ್ ಭಟ್ ನಿರ್ದೇಶನದ ವೂಟ್‌ನ ಪ್ರಸಿದ್ಧ ವೆಬ್ ಸೀರಿಸ್ ‘ಸೈಬರ್ ವಾರ್- ಹರ್ ಸ್ಕ್ರೀನ್ ಕ್ರೈಂ ಸೀನ್’ ನಲ್ಲಿ ಶೀಘ್ರವೇ ಮತ್ತೆರಡು ಹೊಸ ಶೋ ಆರಂಭಗೊಳ್ಳುತ್ತಿವೆ. ಅಭಿನವ್ ಶುಕ್ಲಾ, ವಿಕ್ರಮ್ ಪಾತ್ರದಾರಿಯಾಗಿ ಕಾಸಿಕೊಳ್ಳುತ್ತಿದ್ದರೆ, ಯುವಿಕಾ ಚೌಧರಿ ಗೌರಿ ಪಾತ್ರಕ್ಕೆ ಬಣ್ಣ ಹಚ್ಚುತ್ತಿದ್ದಾರೆ, ಜತೆಗೆ ಅನನ್ಯಾ  (ಶನಯಾ ಇರಾನಿ) ಸಹೋದರಿಯ ಜತೆಗೆ ಪ್ರಸಿದ್ಧ ಪತ್ರಕರ್ತೆಯಾಗಿ ಕಾಸಿಕೊಳ್ಳಲಿದ್ದಾರೆ. 

ಇದನ್ನೂ ಓದಿ: Horoscope Today: ಈ ರಾಶಿಯವರಿಗೆ ಉತ್ತಮ ಉದ್ಯೋಗಾವಕಾಶಗಳು ದೊರೆಯುತ್ತವೆ

ವಿಶೇಷ ಕಮಾಂಡೊ ಪಾತ್ರದಾರಿಯಾಗಿ ಅಭಿನವ್ ಕಾಸಿಕೊಳ್ಳುತ್ತಿದ್ದಾರೆ. ಇನ್ನು ಅಭಿನವ್  ಅವರನ್ನು ಅನಾವಶ್ಯಕವಾಗಿ ಬಾಲಕಿಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲಿಗೆ ಕಳುಹಿಸಲಾಗಿರುತ್ತದೆ. ಇನ್ನು ಆಕಾಶ್ ಗೆ ಮಾತ್ರ ಆ ಕೊಲೆ ಪ್ರಕರಣದ ನಿಜಶಾಂಶ ಗೊತ್ತಿರುತ್ತದೆ. ಅನನ್ಯಾ, ಅಭಿನವ್ ಅವರನ್ನು ಬಿಡುಗಡೆಗೊಳಿಸಲು ಸಾಕಷ್ಟು ಪ್ರಯತ್ನವನ್ನು ನಡೆಸುತ್ತಾರೆ. ಇನ್ನೊಂದೆಡೆ ಪತ್ರಕರ್ತೆ ಯುವಿಕಾ ಚೌಧರಿ, ಬಾಲಕಿಯ ಕೇಸ್‌ಗೆ ಸಂಬಂಧಿಸಿದಂತೆ ಪ್ರಮುಖ ಸಾಕ್ಷಿಯಾಗಿ ಗುರುತಿಸಿಕೊಂಡಿರುತ್ತಾರೆ.

ತಮ್ಮ ಪಾತ್ರದ ಕುರಿತು ಪ್ರತಿಕ್ರಿಯಿಸಿರುವ ಯುವಿಕಾ ಚೌಧರಿ, ಇಂಥ ಪಾತ್ರವನ್ನು ಹಿಂದೆಂದು ಮಾಡಿರಲಿಲ್ಲ. ಸಾಕಷ್ಟು ಉತ್ಸುಕನಾಗಿದ್ದೇನೆ, ಶೂಟಿಂಗ್‌ನಲ್ಲಿ ಅತ್ಯುತ್ತಮ ಸಮಯವನ್ನು ಕಳೆದಿದ್ದು, ಸಕರಾತ್ಮಕ ಫಲಿತಾಂಶಕ್ಕೆ ಎದುರು ನೋಡುತ್ತಿದ್ದೇನೆ. ಇಂಥ ಪಾತ್ರಗಳಲ್ಲಿ ನಟಿಸಲು ನನಗೆ ಆಸಕ್ತಿಯಿದೆ’ ಎಂದು ತಿಳಿಸಿದ್ದಾರೆ.

‘ಸ್ಟೋರಿ ಲೈನ್ ನನಗೆ ತುಂಬಾ ಇಷ್ಟವಾಯಿತು. ಹೀಗಾಗಿ ಸಾಕಷ್ಟು ಆಸಕ್ತಿ ವಹಿಸಿ ಈ ಪಾತ್ರ ಮಾಡಿರುವೆ. ಸ್ಕ್ರಿಪ್ಟ್ ತುಂಬಾ ಚೆನ್ನಾಗಿ ಮೂಡಿಬಂದಿದೆ. ಇದು ಪ್ರತಿಯೊಬ್ಬರಿಗೆ ಇಷ್ಟವಾಗುವ ಸೀರಿಸ್ ಆಗಲಿದೆ’ಎಂದು ಅಭಿನವ್ ಶುಕ್ಲಾ ತಿಳಿಸಿದ್ದಾರೆ. 

ಇದನ್ನೂ ಓದಿ: ‘ಡೊಳ್ಳು’ ಟ್ರೇಲರ್ ರಿಲೀಸ್ ಮಾಡಿದ ಗೋಲ್ಡನ್ ಸ್ಟಾರ್: ಕಲೆಯ ಬೆಲೆ ಬಗ್ಗೆ ಹೇಳಿದ್ದು ಹೀಗೆ

ಸೈಬರ್ ವಾರ್-ಹರ್ ಸ್ಕ್ರೀನ್ ಕ್ರೈಮ್ ಸೀನ್’ಮುಂಬೈನಲ್ಲಿ ನಡೆದಿರುವ ಸೈಬರ್‌ ಕ್ರೈಮ್‌ಗಳ ಆಧಾರದ ಮೇಲೆ ನಿರ್ದೇಶಿಸಲಾಗಿದೆ. ಎಸಿಪಿ ಅಕಾಶ್ ಮಲಿಕ್, ಸೈಬರ್ ತಜ್ಞ ಶನಾಯ ಸೈನಿ ಹಾಗೂ ಟಿ.ಆರ್.ಎ.ಸಿ.ಇ ತಂಡ ಮುಂಬೈ ನಗರದ ಸೈಬರ್‌ಕ್ರೈಮ್‌ಗಳನ್ನು ಕುರಿತು ಸಂಶೋಧಿಸಿದೆ. ನಟ ಮೋಹಿತ್ ಮಲಿಕ್, ಥ್ರಿಲ್ಲರ್ ಕ್ರೈಮ್‌ನಲ್ಲಿ ನಾಯಕನಾಗಿ ನಟಿಸಿದರೆ, ಶನಾಯ ಇರಾನಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅಲ್ಲದೆ, ಮೋಹಿತ್ ಶನಾಯ, ಕೇಶವ್ ಉಪ್ಪಾಳ್, ನೇಹಾ ಖಾನ್, ಅಮಿತಾಭ್ ಘಾನೆಕರ್, ಇಂದ್ರಾನೀಲ್ ಭಟ್ಟಾಚಾರ್ಯ ಪ್ರಮುಖ ಪಾತ್ರದಲ್ಲಿದ್ದಾರೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News