ʼಕಬ್ಜʼ ಚಿತ್ರದ ವಿಶೇಷ ವರದಿ, ಕಲರ್ ಫುಲ್ ಕವರ್‌ಪೇಜ್ ಮತ್ತು ಪೋಸ್ಟರ್ ರಿಲೀಸ್..!

ಎಲ್ಲೇ ನೋಡಿದ್ರೂ ಈಗ ಬರೀ ಕಬ್ಜ ಸಿನಿಮಾದ ಹವಾ ಜೋರಾಗಿದೆ. ಎಲ್ಲೆಲ್ಲೂ ಕಬ್ಜ ಮೇನಿಯ ಅಂದ್ರೆ ತಪ್ಪಿಲ್ಲ ನೋಡಿ. ಇದರ ಜೊತೆಗೆ ಸದ್ಯ ಪ್ಯಾನ್ ಇಂಡಿಯಾ ಹಂತದಲ್ಲಿ ಟ್ರೆಂಡಿಂಗ್‌ನಲ್ಲಿರುವ ಸಿನಿಮಾ ಎಂದರೆ ‘ಕಬ್ಜ’. ಈಗಾಗಲೇ ರಿಲೀಸ್ ಆಗಿರೋ ಟೀಸರ್, ಎರಡು ಹಾಡುಗಳಿಂದ ಕಂಪ್ಲೀಟ್ ಆಗಿ ಜನರ ಮನ ಗೆದ್ದಿರುವ ʼಕಬ್ಜʼ ಚಿತ್ರದಿಂದ ಇದೀಗ ಪಡ್ಡೆ ಹುಡುಗರ ಹೃದಯಕ್ಕೆ ಹತ್ತಿರವಾಗುವ ಹಾಡೊಂದು ಬಿಡುಗಡೆಯಾಗಿದೆ. 

Written by - YASHODHA POOJARI | Edited by - Krishna N K | Last Updated : Feb 28, 2023, 12:41 PM IST
  • ಎಲ್ಲೇ ನೋಡಿದ್ರೂ ಈಗ ಬರೀ ಕಬ್ಜ ಸಿನಿಮಾದ ಹವಾ ಜೋರಾಗಿದೆ.
  • ಈಗಾಗಲೇ ಚಿತ್ರದ ಟೀಸರ್ ಹಾಗೂ ಎರಡು ಹಾಡುಗಳು ರಿಲೀಸ್‌ ಆಗಿವೆ.
  • ಇದೀಗ ʼಕಬ್ಜʼ ಚಿತ್ರದ ವಿಶೇಷ ವರದಿ ಹೊತ್ತ ʼಚಿತ್ತಾರʼ ಕವರ್ಪೇಜ್ ಮತ್ತು ಪೋಸ್ಟರ್ ಕೂಡ ಬಿಡುಗಡೆಯಾಗಿದೆ.
 ʼಕಬ್ಜʼ ಚಿತ್ರದ ವಿಶೇಷ ವರದಿ, ಕಲರ್ ಫುಲ್ ಕವರ್‌ಪೇಜ್ ಮತ್ತು ಪೋಸ್ಟರ್ ರಿಲೀಸ್..! title=

Kabzaa : ಎಲ್ಲೇ ನೋಡಿದ್ರೂ ಈಗ ಬರೀ ಕಬ್ಜ ಸಿನಿಮಾದ ಹವಾ ಜೋರಾಗಿದೆ. ಎಲ್ಲೆಲ್ಲೂ ಕಬ್ಜ ಮೇನಿಯ ಅಂದ್ರೆ ತಪ್ಪಿಲ್ಲ ನೋಡಿ. ಇದರ ಜೊತೆಗೆ ಸದ್ಯ ಪ್ಯಾನ್ ಇಂಡಿಯಾ ಹಂತದಲ್ಲಿ ಟ್ರೆಂಡಿಂಗ್‌ನಲ್ಲಿರುವ ಸಿನಿಮಾ ಎಂದರೆ ‘ಕಬ್ಜ’. ಈಗಾಗಲೇ ರಿಲೀಸ್ ಆಗಿರೋ ಟೀಸರ್, ಎರಡು ಹಾಡುಗಳಿಂದ ಕಂಪ್ಲೀಟ್ ಆಗಿ ಜನರ ಮನ ಗೆದ್ದಿರುವ ʼಕಬ್ಜʼ ಚಿತ್ರದಿಂದ ಇದೀಗ ಪಡ್ಡೆ ಹುಡುಗರ ಹೃದಯಕ್ಕೆ ಹತ್ತಿರವಾಗುವ ಹಾಡೊಂದು ಬಿಡುಗಡೆಯಾಗಿದೆ. 

ಡೈರೆಕ್ಟರ್ ಆರ್.ಚಂದ್ರು ಅವರ ಹುಟ್ಟೂರು ಶಿಡ್ಲಘಟ್ಟದಲ್ಲಿ "ಕಬ್ಜ" ಚಿತ್ರದ ‘ಚುಮ್ ಚುಮ್ ಚಳಿ ಚಳಿ... ತಬ್ಕೊ ಚಳುವಳಿ’ ಎಂಬ ಮಾಸ್ ಹಾಡು ಅಪಾರ ಜನಸಾಗರದ ನಡುವೆ ಬಿಡುಗಡೆಯಾಯಿತು. ಪ್ರಮೋದ್ ಮರವಂತೆ ಬರೆದಿರುವ ಈ ಹಾಡನ್ನು  ಐರಾ ಉಡುಪಿ, ಮನೀಶ್ ದಿನಕರ್ ಹಾಗೂ ಸಂತೋಷ್ ವೆಂಕಿ ಹಾಡಿದ್ದಾರೆ. ರವಿ ಬಸ್ರೂರ್ ಸಂಗೀತ ನೀಡಿರುವ ಈ ಹಾಡು ಆನಂದ್ ಆಡಿಯೋ ಮೂಲಕ ಬಿಡುಗಡೆಯಾಗಿದೆ.ಇದೇ ಸಂದರ್ಭದಲ್ಲಿ `ಕಬ್ಜ’ ಚಿತ್ರದ ವಿಶೇಷ ವರದಿ ಹೊತ್ತ `ಚಿತ್ತಾರ’ ಕವರ್ಪೇಜ್ ಮತ್ತು ಪೋಸ್ಟರ್ ಕೂಡ ಬಿಡುಗಡೆಯಾಯ್ತು. 

ಇದನ್ನೂ ಓದಿ:Video Viral : "ಅಮ್ಮನಿಗೆ ಹೊಡಿಬೇಡ ಅಂತ ಹೇಳ್ದೆತಾನೆ.." ಅಪ್ಪನಿಗೆ ಪುಟ್ಟ ಪೋರಿಯ ಅವಾಜ್‌
 
ಶಿಡ್ಲಘಟ್ಟದ ಜೂನಿಯರ್ ಕಾಲೇಜ್ ನೆಹರು ಮೈದಾನದಲ್ಲಿ ನಡೆದ ಹಾಡು ಬಿಡುಗಡೆ ಕಾರ್ಯಕ್ರಮದಲ್ಲಿ ನಟ ಶಿವರಾಜ್ಕುಮಾರ್, ಗೀತಾ ಶಿವರಾಜ್ಕುಮಾರ್, ಆರೋಗ್ಯ ಸಚಿವ ಡಾಕ್ಟರ್ ಕೆ. ಸುಧಾಕರ್ ಮುಂತಾದ ಗಣ್ಯರು ಪಾಲ್ಗೊಂಡು ಖುಷಿಪಟ್ಟರು.  ಅಪ್ಪು ಹುಟ್ಟುಹಬ್ಬದ ಪ್ರಯುಕ್ತ ಪ್ಯಾನ್ ಇಂಡಿಯಾ ಸಿನಿಮಾ "ಕಬ್ಜ" ಇದೇ ಮಾರ್ಚ್ 17ರಂದು ವಿಶ್ವದಾದ್ಯಂತ ಬಿಡುಗಡೆಯಾಗುತ್ತಿದೆ.  ಈ ಚಿತ್ರದ ಮುಖ್ಯವಾದ ಪಾತ್ರವೊಂದರಲ್ಲಿ ಕಿಚ್ಚ ಸುದೀಪ್ ಅಭಿನಯ ಮಾಡಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News