KGF2 Trailer: ‘ಕೆಜಿಎಫ್​ 2’ ಟ್ರೇಲರ್‌ ರಿಲೀಸ್‌ಗೆ ಕೌಂಟ್​ಡೌನ್ ಶುರು!

KGF2 Trailer: ಇಂದು ಸಿನಿಪ್ರಿಯರಿಗೆ ಸಂತಸವಾಗುವ ಸುದ್ದಿಯೊಂದಿದೆ. ‘ಕೆಜಿಎಫ್​ 2’ಗಾಗಿ ಕಾದು ಕುಳಿತಿದ್ದ ಅಭಿಮಾನಿಗಳಿಗೆ‌ ಗುಡ್‌ ನ್ಯೂಸ್‌ ಸಿಕ್ಕಿದೆ.. ಅದೇನು ಅಂತಾ ನೀವೆ ನೋಡಿ.. 

Written by - Chetana Devarmani | Last Updated : Mar 27, 2022, 03:11 PM IST
  • ‘ಕೆಜಿಎಫ್​ 2’ ಟ್ರೇಲರ್‌ ರಿಲೀಸ್‌ಗೆ ಕೌಂಟ್​ಡೌನ್
  • ಫ್ಯಾನ್ಸ್ ಕಡೆಯಿಂದ ನಡೆದಿದೆ ಭರ್ಜರಿ ಸಿದ್ಧತೆ
  • ‘ಕೆಜಿಎಫ್​ 2’ ಕಣ್ತುಂಬಿಕೊಳ್ಳಲು ಕಾದು ಕುಳಿತಿದ್ದಾರೆ ಸಿನಿಪ್ರಿಯರು
  • ಬೆಂಗಳೂರಿನಲ್ಲಿ ಅದ್ಧೂರಿ ‘ಕೆಜಿಎಫ್​ 2’ ಟ್ರೇಲರ್ ರಿಲೀಸ್​ ಕಾರ್ಯಕ್ರಮ
  • ಟ್ರೇಲರ್ ರಿಲೀಸ್ ಇವೆಂಟ್‌ಗೆ ನಟ ಶಿವರಾಜ್‌ಕುಮಾರ್‌ ಮುಖ್ಯ ಅತಿಥಿ
KGF2 Trailer: ‘ಕೆಜಿಎಫ್​ 2’ ಟ್ರೇಲರ್‌ ರಿಲೀಸ್‌ಗೆ ಕೌಂಟ್​ಡೌನ್ ಶುರು!  title=
ಕೆಜಿಎಫ್​ 2

ಇಡೀ ದೇಶವೇ ಕಾತುರದಿಂದ ಕಾಯುತ್ತಿರುವ ಬಹುನಿರೀಕ್ಷಿತ ಚಿತ್ರ ಕೆಜಿಎಫ್ 2 (KGF Chapter 2) ತೆರೆಮೇಲೆ ರಾಕಿಂಗ್ ಸ್ಟಾರ್ ಯಶ್ (Yash) ಆರ್ಭಟ ಕಣ್ತುಂಬಿಕೊಳ್ಳಲು ಇನ್ನು ಕೆಲವೇ ದಿನಗಳು ಮಾತ್ರ ಬಾಕಿ ಇದೆ. ಬಹುನಿರೀಕ್ಷಿತ ಸಿನಿಮಾ ಯಶ್‌ ಅಭಿನಯದ 'ಕೆಜಿಎಫ್ 2' ಚಿತ್ರ ತಂಡ ಅಭಿಮಾನಿಗಳ ದಿಲ್‌ ಖುಷ್‌ ಆಗುವಂತಹ ಕೊಡುಗೆ ನೀಡಿದ್ದಾರೆ. 

ಇದನ್ನೂ ಓದಿ:ಜೇಮ್ಸ್‌ ರಿಲೀಸ್‌ ಆಗಿ 10 ದಿನ ಕಳೆದರೂ ಕುಂದಿಲ್ಲ ಅಭಿಮಾನಿಗಳ ಉತ್ಸಾಹ!

ಒಂದಷ್ಟು ಪೋಸ್ಟರ್, ಟೀಸರ್​ ಮೂಲಕ ಗಮನ ಸೆಳೆದಿದ್ದ ಟೀಂ ಕೆಲ ದಿನಗಳ ಹಿಂದೆ ಮೊದಲ ಸಾಂಗ್​ ಬಿಡುಗಡೆ ಮಾಡಿತ್ತು. 'ತೂಫಾನ್​..'  (Toofan Song) ಲಿರಿಕಲ್​ ವಿಡಿಯೋ ಕಂಡು ಫ್ಯಾನ್ಸ್‌ ಫಿದಾ ಆಗಿದ್ದರು. ರವಿ ಬಸ್ರೂರು ಸಂಗೀತ ನೀಡಿರುವ ಈ ಹಾಡಿನಲ್ಲಿ ಯಶ್ ಅವರನ್ನು ಕಂಡು ಅಭಿಮಾನಿಗಳ ದಿಲ್‌ ಖುಷ್‌ ಆಗಿತ್ತು. ಇದೀಗ ಸಿನಿಪ್ರಿಯರಿಗೆ ಕೆಜಿಎಫ್‌2 (KGF2) ಚಿತ್ರತಂಡದಿಂದ ಮತ್ತೊಂದು ಹ್ಯಾಪಿ ನ್ಯೂಸ್‌ ಸಿಕ್ಕಿದೆ. 

ಪ್ರಶಾಂತ್​ ನೀಲ್​ (Prashanth Neel) ನಿರ್ದೇಶನದ ಈ ಸಿನಿಮಾ ಬಗ್ಗೆ ಕ್ರೇಜ್‌ ಕ್ರಿಯೇಟ್‌ ಆಗಲು ಹಲವು ಕಾರಣಗಳಿವೆ.​ ಕೆಜಿಎಫ್​ 2 ಕನ್ನಡ ಮಾತ್ರವಲ್ಲ, ತೆಲುಗು, ತಮಿಳು, ಮಲಯಾಳಂ, ಹಿಂದಿಯಲ್ಲಿ ರಿಲೀಸ್ ಆಗುತ್ತಿದೆ. ಈಗಾಗಲೇ ‘ಕೆಜಿಎಫ್​’ (KGF) ಚಿತ್ರದ ಮೂಲಕ ಪ್ರಶಾಂತ್​ ನೀಲ್ ತಮ್ಮ ಕೆಲಸ ಏನು ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಹೀಗಾಗಿ, ಅವರ  ನಿರ್ದೇಶನದ ಮೇಲೆ ಸಾಕಷ್ಟು ನಿರೀಕ್ಷೆಗಳಿವೆ.   

ರಾಕಿಂಗ್​ ಸ್ಟಾರ್ ಯಶ್​ ನಟನೆಯ ‘ಕೆಜಿಎಫ್​ 2’ ಚಿತ್ರದ ಟ್ರೇಲರ್ ಇಂದು ರಿಲೀಸ್ ಆಗುತ್ತಿದೆ. ಸಿನಿಮಾದ ಟ್ರೇಲರ್ ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ರಿಲೀಸ್ ಆಗಲಿರುವ ಟ್ರೇಲರ್ ಮೂಲಕ ಸಿನಿಮಾ ಹೇಗಿರಲಿದೆ ಎನ್ನುವ ಬಗ್ಗೆ ಒಂದಿಷ್ಟು ಕ್ಲೂ ಸಿಗಲಿವೆ. 

'ಕೆಜಿಎಫ್ 2' ಟ್ರೇಲರ್‌ ರಿಲೀಸ್‌ ಕಾರ್ಯಕ್ರಮ ಬೆಂಗಳೂರಿನ ಒರಾಯನ್​ ಮಾಲ್​ನಲ್ಲಿರುವ ಪಿವಿಆರ್​ (PVR) ಥಿಯೇಟರ್​ನಲ್ಲಿ ನಡೆಯುತ್ತಿದೆ. ನಟ ಶಿವರಾಜ್​ಕುಮಾರ್ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ್ದಾರೆ. ಬಾಲಿವುಡ್​ನ ಖ್ಯಾತ ನಿರೂಪಕ ಹಾಗೂ ನಿರ್ಮಾಪಕ ಕರಣ್​ ಜೋಹರ್  ಕಾರ್ಯಕ್ರಮದ ನಿರೂಪಣೆ ಮಾಡುತ್ತಿದ್ದಾರೆ. ಚಿತ್ರದ ಹೀರೋ ಯಶ್​, ನಾಯಕಿ ಶ್ರೀನಿಧಿ ಶೆಟ್ಟಿ ಮೊದಲಾದವರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. 

ಇದನ್ನೂ ಓದಿ:Hrithik Roshan-Saba Azad:ಬಹಿರಂಗವಾಯ್ತಾ ಹೃತಿಕ್ ರೋಷನ್-ಸಬಾ ಆಜಾದ್ ಲವ್‌ ಮ್ಯಾಟರ್?

ಅತ್ತ ಅದ್ಧೂರಿಯಾಗಿ ಟ್ರೇಲರ್‌ ರಿಲೀಸ್‌ (KGF2 Trailer) ಇವೆಂಟ್‌ ನಡೆಯುತ್ತಿದ್ದರೆ.. ಇತ್ತ ಯಶ್ ಫ್ಯಾನ್ಸ್​ ಕೂಡ ಒಂದಷ್ಟು ಸಿದ್ಧತೆಗಳನ್ನು ಮಾಡಿಕೊಂಡಿದ್ದಾರೆ. ಕರುನಾಡಿನಾದ್ಯಂತ ವಿಶೇಷ ರೀತಿಯಲ್ಲಿ ಕೆಜಿಎಫ್‌2 ಟ್ರೇಲರ್‌ ಸ್ವಾಗತಕ್ಕೆ ಸಿದ್ಧತೆಗಳಾಗಿವೆ. 

‘ಕೆಜಿಎಫ್ 2’ ಏಪ್ರಿಲ್ 14ರಂದು ವಿಶ್ವಾದ್ಯಂತ ರಿಲೀಸ್ ಆಗುತ್ತಿದೆ. ಸಂಜಯ್ ದತ್, ರವೀನಾ ಟಂಡನ್, ಪ್ರಕಾಶ್ ರಾಜ್, ಶ್ರೀನಿಧಿ ಶೆಟ್ಟಿ ಮೊದಲಾದ ಖ್ಯಾತ ಕಲಾವಿದರ ದಂಡೇ ಚಿತ್ರದಲ್ಲಿದೆ. ಚಿತ್ರದ ಟ್ರೇಲರ್‌ ಗೆ ಹೇಗಿರಲಿದೆ ಫ್ಯಾನ್ಸ್‌ ರಿಸ್ಪಾನ್ಸ್‌ ಅನ್ನೋದನ್ನ ಕಾದು ನೋಡಬೇಕಿದೆ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News