Coronavirus ಭೀತಿ, ಮೂರು ದಿನಗಳಿಂದ ಬಟ್ಟೆನೇ ಬದಲಾಯಿಸಿಲ್ವಂತೆ ಈ ನಟಿ

ಸದ್ಯ ದೇಶಾದ್ಯಂತ ಕೊರೊನಾ ವೈರಸ್ ನ ಭೀತಿ ಪಸರಿಸಿದ್ದು, ಜನರು ಪಬ್ಲಿಕ್ ಪ್ಲೇಸ್ ನಲ್ಲಿ ತಿರುಗಾಡಲು ಕೂಡ ಹಿಂಜರಿಯುತ್ತಿದ್ದಾರೆ. ಈ ನಡುವೆ ಖ್ಯಾತ ಬಾಲಿವುಡ್ ನಟಿ ನರ್ಗಿಸ್ ಫಕ್ರಿ ಕುರಿತಾದ ವಿಡಿಯೋವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ವೈರಲ್ ಆಗುತ್ತಿದೆ.

Last Updated : Mar 23, 2020, 01:50 PM IST
Coronavirus ಭೀತಿ, ಮೂರು ದಿನಗಳಿಂದ ಬಟ್ಟೆನೇ ಬದಲಾಯಿಸಿಲ್ವಂತೆ ಈ ನಟಿ title=

ನವದೆಹಲಿ: ಕೊರೊನಾ ವೈರಸ್ ಇಡೀ ದೇಶಾದ್ಯಂತ ಹಾಹಾಕಾರ ಸೃಷ್ಟಿಸಿದೆ. ಎಲ್ಲೆಂದರಲ್ಲಿ ಕೊರೊನಾ ವೈರಸ್ ಚರ್ಚೆಯ ವಿಷಯವಾಗಿ ಪರಿಣಮಿಸಿದೆ. ದೇಶ ವಿದೇಶಗಳಲ್ಲಿ ಜನರು ಮನೆಯಲ್ಲಿಯೇ ಬಂಧನಕ್ಕೆ ಒಳಗಾಗಿದ್ದಾರೆ. ತಮ್ಮನ್ನು ತಾವು ರಕ್ಷಿಸಿಕೊಳ್ಳಲು ಜನರು ಪಬ್ಲಿಕ್ ಪ್ಲೇಸ್ ನಲ್ಲಿ ತಿರುಗಾದಲೂ ಕೂಡ ಹಿಂಜರಿಯುತ್ತಿದ್ದಾರೆ. ಅಷ್ಟೇ ಅಲ್ಲ ತಮ್ಮ ತಮ್ಮ ಮನೆಯಲ್ಲಿಯೇ ಸುರಕ್ಷಿತವಾಗಿರಲು ಪ್ರಯತ್ನಿಸುತ್ತಿದ್ದಾರೆ.ಈ ಸೆಲ್ಫ್ ಕ್ವಾರಂಟೀನ್ ಪರಿಸ್ಥಿತಿಯಿಂದ ಬಾಲಿವುಡ್ ತಾರೆಯರೂ ಕೂಡ ಹೊರತಾಗಿಲ್ಲ. ಕೆಲ ದಿನಗಳ ಹಿಂದೆ ಖ್ಯಾತ ಬಾಲಿವುಡ್ ನಟಿ ನರ್ಗಿಸ್ ಫಕ್ರಿ ತಮ್ಮ ಒಂದು ಫನ್ನಿ ವಿಡಿಯೋ ಹಂಚಿಕೊಂಡಿದ್ದರು . ಈ ವಿಡಿಯೋದಲ್ಲಿ ನರ್ಗಿಸ್ ಮನೆಗೆಲಸದಲ್ಲಿ ನಿರತರಾಗಿರುವುದು ಕಂಡುಬಂದಿತ್ತು. ಅವರ ಈ ವಿಡಿಯೋಗೆ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ಮೆಚ್ಚುಗೆ ವ್ಯಕ್ತವಾಗಿತ್ತು. ಸದ್ಯ ಮತ್ತೊಂದು ವಿಡಿಯೋ ಅನ್ನು ಹಂಚಿಕೊಂಡಿರುವ ನರ್ಗಿಸ್, ತಮ್ಮ ತೊಂದರೆಯನ್ನು ಹಂಚಿಕೊಂಡಿದ್ದಾಳೆ.

ಈ ವಿಡಿಯೋದಲ್ಲಿ ತಾವು ಮನೆಯಲ್ಲಿಯೇ ಇದ್ದುಕೊಂಡು ತುಂಬಾ ಬೋರ್ ಆಗಿರುವುದಾಗಿ ಹೇಳಿಕೊಂಡಿದ್ದಾಳೆ. ಅಷ್ಟೇ ಅಲ್ಲ ಕಳೆದ ಮೂರು ದಿನಗಳಿಂದ ತಾವು ಬಟ್ಟೆಯನ್ನು ಸಹ ಬದಲಾಯಿಸಿಲ್ಲ ಎಂದು ನರ್ಗಿಸ್ ಹೇಳಿಕೊಂಡಿದ್ದಾಳೆ. ಈ ವಿಡಿಯೋ ಹಂಚಿಕೊಂಡಿರುವ ನರ್ಗಿಸ್, 'ಯಾರಾದರೂ ನನಗೆ ಸಹಾಯ ಮಾಡಿ, ಮೂರು ದಿನಗಳಿಂದ ಒಂದೇ ಬಟ್ಟೆಯಲ್ಲಿ ವಾಸಿರುತ್ತಿರುವೆ. ಏನನ್ನು ಧರಿಸಿರುವೆ ಮತ್ತು ಎಷ್ಟು ಬಾರಿ ಧರಿಸಿರುವೆ ಈ ಮಾತಿನಲ್ಲಿ ಯಾವುದೇ ಹುರುಳಿಲ್ಲ. ಹೀಗೆ ನಾವು ಯೋಚಿಸದೆ ಹೋದರೆ ನಾವು ನಮ್ಮ ಹಣವನ್ನು ಉಳಿಸಬಹುದು. ನಾವೆಲ್ಲಾ ಏನ್ ಮಾಡ್ತಾ ಇದ್ದೇವೆ" ಎಂದು ಬರೆದುಕೊಂಡಿದ್ದಾಳೆ .

 
 
 
 

 
 
 
 
 
 
 
 
 

#HELP . been wearing the same clothes for like 3 days now. Cause what’s the point 😟 We’d all save a lot of money if we didn’t care about what we wear and how often we wear it 🤪😀. What y’all doing ? . . . . . . . #whatyoudoing #whatsup #corona #virus #home #athome #bored #notbored #socialdistancing #wondering #lifequestions

A post shared by Nargis Fakhri (@nargisfakhri) on

ಸೆಲ್ಫ್ ಕ್ವಾರಂಟೀನ್ ನಿಂದ ನರ್ಗಿಸ್ ತುಂಬಾ ಬೋರ್ ಆಗಿರುವುದು ವಿಡಿಯೋದಲ್ಲಿ ಸ್ಪಷ್ಟವಾಗಿ ಕಂಡುಬರುತ್ತಿದೆ. ಮನೆಯಲ್ಲಿಯೇ ಬಂಧಿಯಾಗಿರುವ ಕಾರಣ ನರ್ಗಿಸ್ ತಮ್ಮ ಕೆಲಸವನ್ನು ತುಂಬಾ ಮಿಸ್ ಮಾಡುತ್ತಿದ್ದಾರೆ ಮತ್ತು ದುಖಿಯಾಗಿದ್ದಾರೆ.

ಕೆಲ ದಿನಗಳ ನಿಂದೆ ವಿಡಿಯೋವೊಂದನ್ನು ಶೇರ್ ಮಾಡಿದ್ದ ನರ್ಗಿಸ್ ಫಕ್ರಿ, ಮನೆಯಲ್ಲಿನ  ಸ್ವಚ್ಛತಾ ಕೆಲಸದಲ್ಲಿ ನಿರತರಾಗಿರುವುದು ಕಂಡುಬಂದಿತ್ತು. ವಿಡಿಯೋದಲ್ಲಿ ನರ್ಗಿಸ್ ಕಿಚನ್ ನಲ್ಲಿ ಪಾತ್ರೆ ತೊಳೆಯುವುದು, ಟಾಯ್ಲೆಟ್ ಕ್ಲೀನ್ ಮಾಡುವುದು ಹಾಗು ಕಸ ಗೂಡಿಸುತ್ತಿರುವುದಾಗಿ ತೋರಿಸಲಾಗಿದ್ದು .ಸದ್ಯ ನರ್ಗಿಸ್ ಭಾರತದಲ್ಲಿ ಇಲ್ಲ. ಕ್ಯಾಲಿಫೋರ್ನಿಯಾದಲ್ಲಿದಾರೆ ಎಂಬುದು ಇಲ್ಲಿ ಗಮನಾರ್ಹ.

 
 
 
 

 
 
 
 
 
 
 
 
 

Are you bored? . . . . #bored #housearrest #home #corona #virus #staysafe #havefun #tiktok #followme

A post shared by Nargis Fakhri (@nargisfakhri) on

ನರ್ಗಿಸ್ ಅವರ ವೃತ್ತಿ ಜೀವನದ ಕುರಿತು ಹೇಳುವುದಾದರೆ, ಕಳೆದ ಬಾರಿ 'ಅಮಾವಾಸ್' ಚಿತ್ರದಲ್ಲಿ ನರ್ಗಿಸ್ ಕಾಣಿಸಿಕೊಂಡಿದ್ದರು. ಈ ಚಿತ್ರದಲ್ಲಿ ನರ್ಗಿಸ್ ಜೊತೆ ಸಚಿನ್ ಜೋಷಿ ಹಾಗೂ ಮೊನಾ ಸಿಂಗ್ ಕೂಡ ಪ್ರಮುಖ ಭೂಮಿಕೆಯಲ್ಲಿ ಕಂದುಬಂದಿದ್ದರು. 'ರಾಕ್ ಸ್ಟಾರ್' ಚಿತ್ರದ ಮೂಲಕ ನರ್ಗಿಸ್ ಖ್ಯಾತಿಯ ಉತ್ತುಂಗಕ್ಕೆ ಏರಿದ್ದಾರೆ. ಈ ಚಿತ್ರದಲ್ಲಿ ರಣಬೀರ್ ಕಪೂರ್ ಜೊತೆಗೆ ಅವರನ್ನು ಕಾಸ್ಟ್ ಮಾಡಲಾಗಿತ್ತು.

Trending News