ಕರೋನಾ ಪಾಸಿಟಿವ್ ಐಶ್ವರ್ಯಾ ರೈ, ಆರಾಧ್ಯ ಬಚ್ಚನ್ ನಾನಾವತಿ ಆಸ್ಪತ್ರೆಗೆ ಶಿಫ್ಟ್

ಪತಿ ಅಭಿಷೇಕ್ ಬಚ್ಚನ್ ಹಾಗೂ ಮಾವ ಅಮಿತಾಬ್ ಬಚ್ಚನ್ ಬಳಿಕ ಕರೋನಾ ಪಾಸಿಟಿವ್ ದೃಢಪಟ್ಟಿದ್ದ ಬಾಲಿವುಡ್ ಖ್ಯಾತ ನಟಿ ಹಾಗೂ ಮಾಜಿ ವಿಶ್ವ ಸುಂದರಿ ಐಶ್ವರ್ಯಾ ರೈ ಹಾಗೂ ಅವರ ಮಗಳನ್ನು ಮನೆಯಿಂದ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.  

Last Updated : Jul 18, 2020, 06:19 AM IST
ಕರೋನಾ ಪಾಸಿಟಿವ್ ಐಶ್ವರ್ಯಾ ರೈ, ಆರಾಧ್ಯ ಬಚ್ಚನ್ ನಾನಾವತಿ ಆಸ್ಪತ್ರೆಗೆ ಶಿಫ್ಟ್ title=

ಮುಂಬೈ: ಕರೋನಾ ಪಾಸಿಟಿವ್ ದೃಢಪಟ್ಟ ಬಳಿಕ ಹೋಂ ಕ್ವಾರಂಟೈನ್ ನಲ್ಲಿದ್ದ ಬಾಲಿವುಡ್ ಖ್ಯಾತ ನಟಿ ಹಾಗೂ ಮಾಜಿ ವಿಶ್ವ ಸುಂದರಿ ಐಶ್ವರ್ಯಾ ರೈ (Aishwarya Rai) ಹಾಗೂ ಅವರ ಮಗಳು ಆರಾಧ್ಯ ಬಚ್ಚನ್ (Aaradhya Bachchan) ಅವರನ್ನು ಇದೀಗ ಮನೆಯಿಂದ ನಾನಾವತಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ನಿಯಮಿತ ತಪಾಸಣೆಗಾಗಿ ಅವರನ್ನು ಮನೆಯಿಂದ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.

ಗಮನಾರ್ಹವಾಗಿ ಐಶ್ವರ್ಯಾ ರೈ ಬಚ್ಚನ್ ಅವರ ಪತಿ ಅಭಿಷೇಕ್ ಬಚ್ಚನ್ ಹಾಗೂ ಮಾವ ಅಮಿತಾಬ್ ಬಚ್ಚನ್ ಕೂಡಾ ಅದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಕರೋನಾ ವೈರಸ್‌ನಿಂದ ಹೇಗೆ ಸುರಕ್ಷಿತವಾಗಿರಬೇಕು: Watch ಅಮಿತಾಬ್ video

ವಿಶೇಷವೆಂದರೆ, ಕಳೆದ ವಾರ ಬಾಲಿವುಡ್‌ನ ಬಿಗ್ ಬಿ ಎಂದೇ ಖ್ಯಾತಿ ಪಡೆದಿರುವ ಅಮಿತಾಬ್ ಬಚ್ಚನ್  (Amitabh Bachchan) ಅವರಿಗೆ ಕರೋನಾ ಪಾಸಿಟಿವ್ ಎಂದು ತಿಳಿದುಬಂದಾಗ ಇಡೀ ದೇಶ ಆತಂಕದಲ್ಲಿ ಮುಳುಗಿತ್ತು. ಅವರ ಮಗ ಅಭಿಷೇಕ್ ಬಚ್ಚನ್ (Abhishek Bachchan), ಸೊಸೆ ಐಶ್ವರ್ಯಾ ರೈ ಬಚ್ಚನ್ ಮತ್ತು ಮೊಮ್ಮಗಳು ಆರಾಧ್ಯ ಬಚ್ಚನ್ ಅವರ ವರದಿಗಳು ಸಹ ಪಾಸಿಟಿವ್ ಬಂದವು. ಅದರ ನಂತರ ಜನರು ಇಡೀ ಕುಟುಂಬಕ್ಕಾಗಿ ಪ್ರಾರ್ಥಿಸಲು ಪ್ರಾರಂಭಿಸಿದರು. 

ಅಭಿಮಾನಿಗಳ ಅಪಾರ ಅಕ್ಕರೆ-ಪ್ರೀತಿಯನ್ನು ಕಂಡ ಅಮಿತಾಬ್ ಬಚ್ಚನ್ ಸೋಷಿಯಲ್ ಮೀಡಿಯಾದಲ್ಲಿ ಎಲ್ಲರೊಂದಿಗೆ ಸಂಪರ್ಕದಲ್ಲಿರಲು ನಿರ್ಧರಿಸಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್‌ಗಳನ್ನು ಬರೆಯುವ ಮೂಲಕ ಅವರು ನಿರಂತರವಾಗಿ  ಜನರಿಗೆ ಧೈರ್ಯದ ಉದಾಹರಣೆಗಳನ್ನುನೀಡುತ್ತಿದ್ದಾರೆ. ಇಂದಿಗೂ ಅವರು ತಮ್ಮ ಮತ್ತು ಅಭಿಷೇಕ್ ಅವರ ಉತ್ತಮ ಚಿತ್ರವನ್ನು ಹಂಚಿಕೊಂಡಿದ್ದಾರೆ.

ಈ ಚಿತ್ರದಲ್ಲಿ ಅಭಿಷೇಕ್ ಬಚ್ಚನ್ ಮತ್ತು ಅಮಿತಾಬ್ ಬಚ್ಚನ್ ತುಂಬಾ ಸಂತೋಷದಿಂದ ಇರುವುದನ್ನು ಕಾಣಬಹುದು. ಈ ಚಿತ್ರವು ಸ್ವಲ್ಪ ಸಮಯದ ಹಿಂದೆ ತೆಗೆದಿರುವುದು ಎಂದು ತೋರುತ್ತದೆ. ಆದರೆ ಈ ಚಿತ್ರವನ್ನು ನೋಡಿದಾಗ ಈ ದಿನಗಳಲ್ಲಿ ಅಮಿತಾಬ್ ಬಚ್ಚನ್ ಅವರು ತಮ್ಮ ಜೀವನದ ಸಂತೋಷದ ಕ್ಷಣಗಳನ್ನು ನೆನಪಿಸಿಕೊಳ್ಳುತ್ತಿದ್ದಾರೆ ಮತ್ತು ಅದನ್ನು ತಮ್ಮ ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಿದ್ದಾರೆ ಎಂದು ತಿಳಿದುಬಂದಿದೆ. ಇದರೊಂದಿಗೆ ಅವರು ತಮ್ಮ ಹಿತೈಷಿಗಳಿಗೂ ಧನ್ಯವಾದ ಅರ್ಪಿಸಿದ್ದಾರೆ.

ಬಚ್ಚನ್ ಕುಟುಂಬದವರಿಗೆ Covid-19 ಪಾಸಿಟಿವ್ ಸುದ್ದಿ ಬೆನ್ನಲ್ಲೇ ಫ್ಯಾಮಿಲಿ ಪೋಟೋಸ್ ವೈರಲ್

ಈ ಚಿತ್ರದೊಂದಿಗೆ ಅವರು ಶೀರ್ಷಿಕೆಯಲ್ಲಿ ಸಂತೋಷದ ಸಮಯದಲ್ಲಿ, ಅನಾರೋಗ್ಯದ ಸಮಯದಲ್ಲಿ ನಮ್ಮ ಜೊತೆಗಿರುವ ನಮ್ಮ ಪ್ರೀತಿಯ ಹಿತೈಷಿಗಳು, ನಮ್ಮ ಅಭಿಮಾನಿಗಳು ನಮ್ಮ ಆರೋಗ್ಯಕ್ಕಾಗಿ ಪ್ರೀತಿ, ವಾತ್ಸಲ್ಯ, ಕಾಳಜಿ ತೋರಿದ ನಮಗಾಗಿ ಪ್ರಾರ್ಥಿಸಿದ ಎಲ್ಲರಿಗೂ ಕೃತಜ್ಞತೆಗಳನ್ನು ಅರ್ಪಿಸುತ್ತಿದ್ದೇನೆ. ಈ ಸಂದರ್ಭದಲ್ಲಿ ಪ್ರೋಟೋಕಾಲ್ ನಿರ್ಬಂಧಿತವಾಗಿದೆ. ಆದ್ದರಿಂದ ವೈಯಕ್ತಿಕ ಪ್ರತಿಕ್ರಿಯೆಗಳು ಸಾಧ್ಯವಿಲ್ಲ... ಆದರೆ ನಾವು ನಿಮ್ಮೆಲ್ಲರನ್ನೂ ನೋಡುತ್ತೇವೆ, ನಿಮ್ಮ ಅನಿಸಿಕೆಗಳನ್ನು ಓದುತ್ತೇವೆ, ನಿಮ್ಮ ಮಾತುಗಳನ್ನು ಕೇಳುತ್ತೇವೆ ಎಂದು ಬರೆದಿದ್ದಾರೆ.
 

Trending News