Karnataka Budget 2024: ಬಜೆಟ್‌ ಮಂಡಣೆಯಲ್ಲಿ ಕನ್ನಡ ಸಿನಿಮಾಗಳನ್ನು ಉಲ್ಲೇಖಿಸಿದ ಸಿಎಂ!

Kannada Movie Names In Karnataka Budget: ಇಂದು ಕರ್ನಾಟಕ ಬಜೆಟ್‌ 2024 ಮಂಡಣೆ ನಡೆದಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಕನ್ನಡದ 'ಬಂಗಾರದ ಮನುಷ್ಯ' ಮತ್ತು 'ಡೇರ್ ಡೆವಿಲ್ ಮುಸ್ತಫಾ' ಉಲ್ಲೇಖಿಸಿ ಬಜೆಟ್‌ ಮಂಡಣೆ ಮಾಡಿದ್ದಾರೆ. ಇಲ್ಲಿದೆ ಸಂಪೂರ್ಣ ವಿವರ.  

Written by - Zee Kannada News Desk | Last Updated : Feb 16, 2024, 02:53 PM IST
  • ಬಜೆಟ್‌ನ ಪುಸ್ತಕದಲ್ಲಿ 'ಡೇರ್ ಡೆವಿಲ್ ಮುಸ್ತಫಾ' ಹಾಗೂ 'ಬಂಗಾರದ ಮನುಷ್ಯ' ಸಿನಿಮಾದ ಸಂಭಾಷಣೆ ಮತ್ತು ಹಾಡಿನ ಸಾಲುಗಳನ್ನು ಉಪಯೋಗಿಸಲಾಗಿತ್ತು.
  • ಅಲ್ಪ ಸಂಖ್ಯಾತರು ಹಾಗೂ ಕ್ರಿಶ್ಚಿಯನ್ ಸಮುದಾಯಗಳ ಅಭಿವೃದ್ಧಿಗೆ ವಿಶೇಷ ಬಜೆಟ್‌ ಫೋಷಿಸಿದ್ದಾರೆ.
  • ಡೇರ್ ಡೆವಿಲ್ ಮುಸ್ತಫಾ' ಚಿತ್ರಕ್ಕೆ ಈ ವರ್ಷ ಚಂದನವನ ಫಿಲ್ಮ್ ಕ್ರಿಟಿಕ್ಸ್ ಅಕಾಡೆಮಿ ಪ್ರಶಸ್ತಿ ನೀಡಿದ್ದರು.
Karnataka Budget 2024: ಬಜೆಟ್‌ ಮಂಡಣೆಯಲ್ಲಿ ಕನ್ನಡ ಸಿನಿಮಾಗಳನ್ನು ಉಲ್ಲೇಖಿಸಿದ ಸಿಎಂ! title=

Kannada Film Names In Karnataka Budget 2024: ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಕರ್ನಾಟಕ ರಾಜ್ಯ ಬಜೆಟ್ 2024-25ರಲ್ಲಿ ಕನ್ನಡ ಚಲನಚಿತ್ರಗಳನ್ನು ಉಲ್ಲೇಖಿಸಿದ್ದಾರೆ. ಈ ಬಾರಿಯ ಬಜೆಟ್‌ನ ಪುಸ್ತಕದಲ್ಲಿ 'ಡೇರ್ ಡೆವಿಲ್ ಮುಸ್ತಫಾ' ಹಾಗೂ 'ಬಂಗಾರದ ಮನುಷ್ಯ' ಸಿನಿಮಾದ ಸಂಭಾಷಣೆ ಮತ್ತು ಹಾಡಿನ ಸಾಲುಗಳನ್ನು ಉಪಯೋಗಿಸಲಾಗಿತ್ತು. 

ಸಿಎಂ ಸಿದ್ದಾರಾಮಯ್ಯ ಬಜೆಟ್‌ ಮಂಡಣೆ ಆರಂಭಿಸುವ ಮೊದಲು ವರನಟ ಡಾ. ರಾಜ್‌ಕುಮಾರ್‌ ಅಭಿನಯದ ಮನುಷ್ಯ ಸಿನಿಮಾದ "ಆಗದು ಎಂದು ಕೈಕಟ್ಟಿ ಕುಳಿತರೆ ಸಾಗದು ಕೆಲಸವು ಮುಂದೆ" ಎಂಬ ಹಾಡಿನ ಸಾಲುಗಳನ್ನು ಹೇಳುತ್ತಾ ಆರಂಭಿಸಿರುವುದು ವಿಶೇಷವಾಗಿದೆ. ಅಲ್ಪ ಸಂಖ್ಯಾತರು ಹಾಗೂ ಕ್ರಿಶ್ಚಿಯನ್ ಸಮುದಾಯಗಳ ಅಭಿವೃದ್ಧಿಗೆ  ವಿಶೇಷ ಬಜೆಟ್‌ ಫೋಷಿಸಿದ್ದಾರೆ.

ಇದನ್ನೂ ಓದಿ: Darshan: ಚಾಲೆಂಜಿಂಗ್‌ ಸ್ಟಾರ್‌ ಹುಟ್ಟುಹಬ್ಬಕ್ಕೆ ಒಂಬತ್ತು ಸಿನಿಮಾ ಘೋಷಣೆ!

ಬಳಿಕ ಮುಖ್ಯಮಂತ್ರಿ ಸಿದ್ದಾರಾಮಯ್ಯ 'ಡೇರ್ ಡೆವಿಲ್ ಮುಸ್ತಫಾ' ಸಿನಿಮಾದ ಸಾಲುಗಳನ್ನು ಕೂಡ ಬಳಸಿಕೊಂಡಿದ್ದಾರೆ. ಆ ಚಿತ್ರದ "ಒಂದು ತೋಟದಲ್ಲಿ ನೂರು ಹೂವು ಅರಳಿ. ಎಲ್ಲಾ ಕೂಡಿ ಆಡುವಂಥ ಗಾಳಿ ಬೀಸಲಿ" ಸಂಭಾಷಣೆಯ ಸಾಲುಗಳನ್ನು ಹೇಳುವುದರ ಮೂಲಕ ಸಮಾಜ ಕಲ್ಯಾಣ ಇಲಾಖೆಗೆ ಕೊಟ್ಟಿರುವ ಅನುದಾನವನ್ನು ಮಂಡಿಸಿದ್ದಾರೆ.

'ಡೇರ್ ಡೆವಿಲ್ ಮುಸ್ತಫಾ' ಮತ್ತು 'ಬಂಗಾರದ ಮನುಷ್ಯ' ಕನ್ನಡದ ಎರಡು ಸೂಪರ್‌ ಹಿಟ್‌ ಸಿನಿಮಾಗಳನ್ನು ನೆನಪಿಸಿಕೊಂಡು ಉಲ್ಲೇಖಿಸುವುದರ ಮೂಲಕ ಬಜೆಟ್‌ ಹಿರಿಮೆಯನ್ನು ಇನ್ನಷ್ಟು ಹೆಚ್ಚಿಸಿಕೊಂಡಿದ್ದಾರೆ. 'ಡೇರ್ ಡೆವಿಲ್ ಮುಸ್ತಫಾ' ಚಿತ್ರಕ್ಕೆ ಈ ವರ್ಷ ಚಂದನವನ ಫಿಲ್ಮ್ ಕ್ರಿಟಿಕ್ಸ್ ಅಕಾಡೆಮಿ ಪ್ರಶಸ್ತಿ ನೀಡಿದ್ದರು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=I87DcFM35WY

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News