Darshan : ಫ್ರೆಂಡ್ಸ್ ಜೊತೆ ದಾಸನ ಜಾಲಿ ಟ್ರಿಪ್..ಬ್ರಿಟನ್‌ನಲ್ಲಿ ದರ್ಶನ್‌ ಮೋಜು ಮಸ್ತಿ..ಪೋಟೋಸ್‌ ವೈರಲ್‌

D boss Viral Photos : ಇತ್ತೀಚೆಗೆ ಯುಕೆ ಫ್ಲೈಟ್ ಏರಿದ್ದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಫ್ರೆಂಡ್ಸ್ ಜೊತೆ ಕಳೆದ 5 ದಿನಗಳಿಂದ ಬ್ರಿಟನ್‌ನಲ್ಲಿ ಜಾಲಿಯಾಗಿ ಸುತ್ತಾಡುತ್ತಿದ್ದಾರೆ. ಅಲ್ಲಿ ಸಿಕ್ಕ ಕನ್ನಡ ಅಭಿಮಾನಿಗಳ ಜೊತೆ ಫೋಟೊ ತೆಗೆಸಿಕೊಂಡಿದ್ದಾರೆ. ಆ ಪೋಟೋಗಳು ಇದೀಗ ಸೋಷಿಯಲ್‌ ಮಿಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿವೆ.   

Written by - Savita M B | Last Updated : Jul 30, 2023, 12:45 PM IST
  • ಕಾಟೇರ ಶೂಟಿಂಗ್‌ನಲ್ಲಿ ಬ್ಯುಸಿಯಾಗಿರುವ ನಟ ದರ್ಶನ್‌ ಕಳೆದ ವಾರವಷ್ಟೆ ಸುದ್ದಿಯಲ್ಲಿದ್ದರು
  • ಕಾಲಿಗೆ ಪೆಟ್ಟಾಗಿ, ಕುಂಟುತ್ತಲೇ ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆದು ಹೋಗಿದ್ದರು.
  • ಇದೀಗ ನಟ ಸಿನಿಮಾ ಶೂಟಿಂಗ್‌ನಿಂದ ಕೊಂಚ ಬ್ರೇಕ್‌ ಸಿಕ್ಕಿದ್ದಕ್ಕೆ ದರ್ಶನ್ ಬ್ರಿಟನ್ ಪ್ರವಾಸ ಕೈಗೊಂಡಿದ್ದಾರೆ
Darshan : ಫ್ರೆಂಡ್ಸ್ ಜೊತೆ ದಾಸನ ಜಾಲಿ ಟ್ರಿಪ್..ಬ್ರಿಟನ್‌ನಲ್ಲಿ ದರ್ಶನ್‌ ಮೋಜು ಮಸ್ತಿ..ಪೋಟೋಸ್‌ ವೈರಲ್‌  title=

Challenging Star Darshan : ಕಾಟೇರ ಶೂಟಿಂಗ್‌ನಲ್ಲಿ ಬ್ಯುಸಿಯಾಗಿರುವ ನಟ ದರ್ಶನ್‌ ಕಳೆದ ವಾರವಷ್ಟೆ ಸುದ್ದಿಯಲ್ಲಿದ್ದರು. ಕಾಲಿಗೆ ಪೆಟ್ಟಾಗಿ, ಕುಂಟುತ್ತಲೇ ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆದು ಹೋಗಿದ್ದರು. ಆಗ ಈ ವಿಡಿಯೋ ಸಹ ಸೋಷಿಯಲ್‌ ಮಿಡಿಯಾದಲ್ಲಿ ವೈರಲ್‌ ಆಗಿ, ನಮ್ ಬಾಸ್ ಆದಷ್ಟು ಬೇಗ ಗುಣಮುಖರಾಗಲಿ ಎಂದು ಅಭಿಮಾನಿಗಳು ಪ್ರಾರ್ಥಿಸಿದ್ದರು. 

ಸಿನಿಮಾ ಶೂಟಿಂಗ್‌ನಿಂದ ಕೊಂಚ ಬ್ರೇಕ್‌ ಸಿಕ್ಕಿದ್ದಕ್ಕೆ ದರ್ಶನ್ ಬ್ರಿಟನ್ ಪ್ರವಾಸ ಕೈಗೊಂಡಿದ್ದು,  ಬ್ರಿಟನ್‌ನ ಪ್ರಮುಖ ಜಾಗಗಳಲ್ಲಿ ದರ್ಶನ್ ತೆಗೆಸಿಕೊಂಡಿರುವ ಫೋಟೊಗಳು ವೈರಲ್ ಆಗುತ್ತಿದೆ. 

ಇದನ್ನೂ ಓದಿ-Tamannaah Bhatia: ರೆಡ್‌ ಸೀರೆಯುಟ್ಟ ಪಡ್ಡೆಹೈಕ್ಳ ಬ್ಲಡ್ ಪ್ರೆಶರ್ ಹೆಚ್ಚಿಸಿದ ʼಮಿಲ್ಕಿ ಬ್ಯೂಟಿʼ ..!

ಯುಕೆ ಟವರ್ ಬ್ರಿಡ್ಜ್, ಕಾರ್ನಬಿ ಮುಂಭಾಗ ಹೀಗೆ ಹಲವು ಸ್ಥಳಗಳಲ್ಲಿ ನಟ ದರ್ಶನ್‌ ಮೋಜು ಮಸ್ತಿ ಮಾಡಿದ್ದಾರೆ. ಸ್ನೇಹಿತರಾದ ಸಚ್ಚಿದಾನಂದ ಸೇರಿದಂತೆ ಮತ್ತಿಬ್ಬರು ಸ್ನೇಹಿತರು ಚಾಲೆಂಜಿಂಗ್ ಸ್ಟಾರ್‌ನೊಂದಿಗೆ ಕಾಲಕಳೆದಿದ್ದಾರೆ. ಇನ್ನು ದರ್ಶನ್‌ ಸಖತ್‌ ಸ್ಟೈಲಿಶ್‌ ಲುಕ್‌ಗೆ ಫಿದಾ ಆದ ಅಭಿಮಾನಿಗಳು ಪೋಟೋಗಳನ್ನು ವೈರಲ್‌ ಮಾಡುತ್ತಿದ್ದಾರೆ.

ಇನ್ನು ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿರುವ ಬಹುನಿರೀಕ್ಷಿತ ಸಿನಿಮಾ ʼಕಾಟೇರʼ ದ ಶೂಟಿಂಗ್‌ ಭರದಿಂದ ಸಾಗುತ್ತಿದ್ದು, ಚಿತ್ರವನ್ನು ದಸರಾ ಸಂಭ್ರಮದಲ್ಲಿ ರಿಲೀಸ್‌ ಮಾಡಲಾಗುತ್ತದೆ ಎಂದು ಗುಸುಗುಸು ಸುದ್ದಿಗಳು ಹರಿದಾಡುತ್ತಿವೆ. ಇನ್ನು ಈ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಗಮನ ಸೆಳೆದಿದ್ದು, ಚಿತ್ರದ ಬಿಡುಗಡೆಗಾಗಿ ಅಭಿಮಾನಿಗಳು ವೇಟ್‌ ಮಾಡುತ್ತಿದ್ದಾರೆ. 

ಇದನ್ನೂ ಓದಿ-Taali Teaser: ನಿಂದನೆಯಿಂದ ಚಪ್ಪಾಳೆಯವರೆಗಿನ ಪಯಣದ ಕಥೆ, ಸುಶ್ಮಿತಾ ಸೇನ್ ನಟನೆಗೆ ಫ್ಯಾನ್ಸ್‌ ಫಿದಾ!

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News