Devil: ಇವತ್ತು ಇವಳಿರ್ತಾಳೆ, ನಾಳೆ ಅವಳಿರ್ತಾಳೆ, ನಾನ್ಯಾಕೆ ತಲೆ ಕೆಡಿಸಿಕೊಳ್ಳಲಿ ಎಂದ ದರ್ಶನ್!

Challenging star Darshan Thoogudeep: ಕನ್ನಡ ಚಿತ್ರರಂಗಕ್ಕೆ ದರ್ಶನ್ ನೀಡಿದ ಕೊಡುಗೆ ಸ್ಮರಿಸಲು ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ಶನಿವಾರ ರಾತ್ರಿ ಅದ್ಧೂರಿಯಾಗಿ ʼಬೆಳ್ಳಿ ಪರ್ವ D-25ʼ ಕಾರ್ಯಕ್ರಮ ಆಯೋಜಿಸಲಾಗಿತ್ತು. 

Written by - Puttaraj K Alur | Last Updated : Feb 18, 2024, 02:50 PM IST
  • ಸುದೀರ್ಘ ಚಿತ್ರರಂಗದ ಪ್ರಯಾಣವನ್ನು ಟಾಂಗಾ ಕುದುರೆಗೆ ಹೋಲಿಸಿಕೊಂಡ ನಟ ದರ್ಶನ್‌
  • ಯಾವುದೇ ಕ್ಷೇತ್ರದಲ್ಲಿ ಬೆಳಿಬೇಕು ಅಂದರೆ, ಶ್ರದ್ಧೆ ಬೇಕೇ ಬೇಕು, ಆರಂಭದಲ್ಲಿ ಅವಮಾನ ಎದುರಿಸಲೇಬೇಕು
  • ಇವತ್ತು ಇವಳಿರ್ತಾಳೆ, ನಾಳೆ ಅವಳಿರ್ತಾಳೆ. ನಾನ್ಯಾಕೆ ಇವರ ಬಗ್ಗೆ ತಲೆ ಕೆಡಿಸಿಕೊಳ್ಳಲಿ ಎಂದ ದಾಸ
Devil: ಇವತ್ತು ಇವಳಿರ್ತಾಳೆ, ನಾಳೆ ಅವಳಿರ್ತಾಳೆ, ನಾನ್ಯಾಕೆ ತಲೆ ಕೆಡಿಸಿಕೊಳ್ಳಲಿ ಎಂದ ದರ್ಶನ್! title=
ʼಬೆಳ್ಳಿ ಪರ್ವ D-25ʼ

Devil Actor Darshan: ನಟ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಕನ್ನಡ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿ 25 ವರ್ಷಗಳಿವೆ. ಈ ಹಿನ್ನೆಲೆ ಚಿತ್ರರಂಗಕ್ಕೆ ದರ್ಶನ್ ನೀಡಿದ ಕೊಡುಗೆ ಸ್ಮರಿಸಲು ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ಶನಿವಾರ ರಾತ್ರಿ ಅದ್ಧೂರಿಯಾಗಿ ʼಬೆಳ್ಳಿ ಪರ್ವ D-25ʼ ಕಾರ್ಯಕ್ರಮ ಆಯೋಜಿಸಲಾಗಿತ್ತು. 

ಈ ವೇಳೆ ತಮ್ಮ 25 ವರ್ಷದ ಸುದೀರ್ಘ ಚಿತ್ರರಂಗದ ಪ್ರಯಾಣವನ್ನು ಹಿಂತಿರುಗಿ ನೋಡಿದ ದರ್ಶನ್, ತಮ್ಮನ್ನು ಟಾಂಗಾ ಕುದುರೆಗೆ ಹೋಲಿಸಿಕೊಂಡರು. ಯಾವುದೇ ಕ್ಷೇತ್ರದಲ್ಲಿ ಬೆಳೆಯಬೇಕು ಅಂದರೆ, ಶ್ರದ್ಧೆ ಬೇಕೇ ಬೇಕು. ಆರಂಭದಲ್ಲಿ ಅವಮಾನಗಳನ್ನು ಎದುರಿಸಲೇಬೇಕು. ಅವಮಾನಗಳು ಆದರೆ ಮುಂದೊಂದು ದಿನ ಸನ್ಮಾನ ಸಿಗುತ್ತದೆ ಎಂದರು.

ಇದನ್ನೂ ಓದಿ: ಅರ್ಧ ಡಜನ್‌ ನಟರ ಜೊತೆ ಅಫೇರ್ಸ್‌, ಒಂದು ಕಾಲದಲ್ಲಿ ಇಂಡಸ್ಟ್ರಿ ಆಳಿದ ಸ್ಟಾರ್ ಹೀರೋಯಿನ್.. ಯಾರು ಗೊತ್ತೇ!

ಇಷ್ಟೆಲ್ಲಾ ಮಾತಾನಾಡಿದ ಸ್ಯಾಂಡಲ್‌ವುಡ್‌ ʼದಾಸʼ ಕೊನೆಗೆ ಫ್ಯಾಮಿಲಿ ಸಮಸ್ಯೆಗಳು, ಎಲ್ಲಾ ಸಮಸ್ಯೆಗಳನ್ನು ಪಕ್ಕಕ್ಕೆ ಇಡುತ್ತೇನೆ. ಇವತ್ತು ಇವಳಿರ್ತಾಳೆ, ನಾಳೆ ಅವಳಿರ್ತಾಳೆ. ನಾನ್ಯಾಕೆ ಇವರ ಬಗ್ಗೆ ತಲೆ ಕೆಡಿಸಿಕೊಳ್ಳಲಿ. ನನಗೆ ನನ್ನ ಸೆಲೆಬ್ರೆಟಿಸ್, ನನ್ನ ಕೆಲಸ ಅಷ್ಟೇ ಮುಖ್ಯ ಎಂದರು.

ತಮ್ಮ ಈ ಮಾತುಗಳ ಮೂಲಕ ಅನೇಕರಲ್ಲಿರುವ ಪ್ರಶ್ನೆಗಳಿಗೆ ಉತ್ತರಿಸಿದ ದರ್ಶನ್‌, ವೈಯಕ್ತಿಕ ಹಾಗೂ ಯಾವುದೇ ಮುಚ್ಚು ಮರೆಯಿಲ್ಲದೇ ವೃತ್ತಿಪರ ವಿಚಾರಗಳನ್ನು ಹಂಚಿಕೊಂಡರು. ಇತ್ತೀಚೆಗಷ್ಟೇ ದರ್ಶನ್‌ ಪತ್ನಿ ವಿಜಯಲಕ್ಷ್ಮಿ ಮತ್ತು ಪವಿತ್ರಾ ಗೌಡ ನಡೆದಿದ್ದ ಸೋಷಿಯಲ್‌ ಮೀಡಿಯಾ ವಾರ್‌ಗೆ ಸಂಬಂಧಿಸಿದಂತೆ ದರ್ಶನ್‌ ಈ ಕಾರ್ಯಕ್ರಮದಲ್ಲಿ ಸ್ಪಷ್ಟನೆ ನೀಡಿದ್ದಾರೆ ಅಂತಾ ನೆಟಿಜನ್ಸ್‌ ಮಾತನಾಡಿಕೊಳ್ಳುತ್ತಿದ್ದಾರೆ.

ಇದನ್ನೂ ಓದಿ: Sunny Leone: ಕಾನ್ ಸ್ಟೇಬಲ್ ಹುದ್ದೆಗೆ ಅರ್ಜಿ ಹಾಕಿದ ಸನ್ನಿ ಲಿಯೋನ್!? ಅಡ್ಮಿಟ್ ಕಾರ್ಡ್‌ ವೈರಲ್!! 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News