50ನೇ ದಿನದ ಸಂಭ್ರಮದಲ್ಲಿ ʼಹಾಸ್ಟೆಲ್‌ ಹುಡುಗರು ಬೇಕಾಗಿದ್ದಾರೆʼ

Hostel Hudugaru Bekagiddare : ಪರಂವಾ ಪಿಕ್ಚರ್ಸ್ ಅಡಿಯಲ್ಲಿ 21 ಜುಲೈ 2023ರಂದು ರಿಲೀಸ್‌ ಆದ ʼಹಾಸ್ಟೆಲ್‌ ಹುಡುಗರು ಬೇಕಾಗಿದ್ದಾರೆʼ ಸಿನಿಮಾ ತಂಡ ಇವತ್ತು 50ನೇ ದಿನ ಸಂಭ್ರಮಾಚರಣೆಯಲ್ಲಿದ್ದಾರೆ.

Written by - Zee Kannada News Desk | Last Updated : Sep 9, 2023, 11:34 AM IST
  • ʼಹಾಸ್ಟೆಲ್‌ ಹುಡುಗರು ಬೇಕಾಗಿದ್ದಾರೆʼ ಸಿನಿಮಾಕ್ಕೆ 50ನೇ ದಿನದ ಸಂಭ್ರಮ.
  • ಆರಂಭದಿಂದಲೇ ಸಿನಿಮಾಕ್ಕೆ ಬೆನ್ನೆಲುಬಾಗಿ ನಿಂತಿದ್ದ ಪವರ್‌ಸ್ಟಾರ್‌ ಪುನೀತ್‌‌ ರಾಜಕುಮಾರ್.
  • ‌ಕಾಂತಾರದ ನಂತರ ಸಖತ್ ಸದ್ದು‌ ಮಾಡಿದ ಸದ್ದು ಮಾಡಿದ ಕನ್ನಡ ಸಿನಿಮಾ ಇದಾಗಿದೆ.
50ನೇ ದಿನದ ಸಂಭ್ರಮದಲ್ಲಿ ʼಹಾಸ್ಟೆಲ್‌ ಹುಡುಗರು ಬೇಕಾಗಿದ್ದಾರೆʼ title=

Celebrating 50 Days : ʼಹಾಸ್ಟೆಲ್‌ ಹುಡುಗರು ಬೇಕಾಗಿದ್ದಾರೆʼ ನಿತಿನ್‌ ಕೃಷ್ಣಮೂರ್ತಿ ಅವರ ನಿರ್ದೇಶನದಲ್ಲಿ, ರಕ್ಷಿತ್‌ ಶೆಟ್ಟಿಯವರ ಪರಂವಾ ಪಿಕ್ಚರ್ಸ್‌ ಬ್ಯಾನರ್‌ ಅಡಿಯಲ್ಲಿ ಬಿಡುಗಡೆಗೊಂಡ ಈ ಸಿನಿಮಾ ಇವತ್ತಿಗೆ 50ನೇ ದಿನ ಸಂಭ್ರಮಾಚರಣೆಯಲ್ಲಿದೆ. 2021ರಲ್ಲಿ ಜನವರಿಯಲ್ಲಿ ಮೇಕಿಂಗ್‌ ಶುರುಮಾಡಿದ್ದ ಚಿತ್ರ ಕೊರೊನಾ, ಲಾಕ್‌ಡೌನ್‌ ಎಲ್ಲಾ ಸಂಕಷ್ಟಗಳನ್ನು ಎದುರಿಸಿ ಕೊನೆಗೂ ಸಿನಿಮಾ ರಿಲೀಸ್‌ ಮಾಡಿ, ಇವತ್ತು 50ನೇ ದಿನ ದಾಟಿಕೊಂಡು ಬಂದಿದೆ. 

ಆರಂಭದಿಂದಲೇ ಸಿನಿಮಾ ತಂಡಕ್ಕೆ ಬೆನ್ನೆಲುಬಾಗಿ ಪವರ್‌ಸ್ಟಾರ್‌ ಪುನೀತ್‌‌ ರಾಜಕುಮಾರ್ ನಿಂತಿದ್ದರು. ʼಹಾಸ್ಟೆಲ್‌ ಹುಡುಗರು ಬೇಕಾಗಿದ್ದಾರೆʼ ಸಿನಿಮಾಕ್ಕೆ ಓಂಕಾರ ಹೇಳಿದ್ದೇ ಅಪ್ಪು. ಅಲ್ಲದೇ ಸಿನಿಮಾ ಪ್ರಚಾರವನ್ನು ವಿಭಿನ್ನವಾಗಿ ಆರಂಭ ಮಾಡಿದ್ದರು.

ಇದನ್ನು ಓದಿ- ʼಬಭ್ರುವಾಹನʼದ ಚಿತ್ರಾಂಗದೆಗೆ ರಾಜಕುಮಾರ್‌ ಸಂಸ್ಕೃತಿ ದತ್ತಿ ಪ್ರಶಸ್ತಿ

ಇನ್ನೂ ಸಿನಿಮಾದ ಕುರಿತು ಹೇಳುವುದಾದರೆ ಚಿತ್ರದಲ್ಲಿ ಹೆಚ್ಚಿನ ಸಮಯವನ್ನು ರಾತ್ರಿಗಳಲ್ಲಿಯೇ ಚಿತ್ರೀಕರಣ ಮಾಡಲಾಗಿದ್ದು, ಸತತವಾಗಿ 85 ರಾತ್ರಿಗಳಲ್ಲಿ ಶೂಟಿಂಗ್‌ ಮಾಡಿದ್ದಾರೆ.. ಮತ್ತು ಸಿನಿಮಾದ ಶೂಟಿಂಗ್‌ ಮಂಗಳೂರು ವಿಶ್ವವಿದ್ಯಾನಿಲಯದ ಬಾಯ್ಸ್‌ ಹಾಸ್ಟೆಲ್‌ನಲ್ಲಿ ನಡೆದಿದ್ದು, 500ಕ್ಕೂ ಹೆಚ್ಚಿನ ಯುವ ಪ್ರತಿಭೆಗಳು ನಟಿಸಿದ್ದಾರೆ. ಚಿತ್ರದಲ್ಲಿ ವಿಶೇಷ ಪಾತ್ರದಲ್ಲಿ ರಿಷಬ್‌ ಶೆಟ್ಟಿ, ದಿವ್ಯ ಸ್ಪಂದನ, ನಿರ್ದೇಶಕ ಪವನ್‌ಕುಮಾರ್‌, ದಿಗಂತ್‌ ಮಂಚಾಲೆ, ಶೈನ್‌ ಶೆಟ್ಟಿ ಕಾಣಿಸಿಕೊಂಡಿದ್ದಾರೆ.

ಚಿತ್ರವು ಹಾಸ್ಟೆಲ್‌ನಲ್ಲಾಗುವ ವಾರ್ಡನ್‌ ಮತ್ತು ಹುಡುಗರ ಕಿತ್ತಾಟದ ಕುರಿತು ತಿಳಿಸುವ ಈ ಸಿನಿಮಾ,  ಕ್ಲೈಮ್ಯಾಕ್ಸ್‌ನಲ್ಲಿ ಏನಾಗಲಿದೆ ಎಂಬ ಕೌತುಕವೂ ಕೊನೆವರೆಗೂ ನೋಡುಗರನ್ನು ಹಿಡಿದಿಟ್ಟುಕೊಳ್ಳುತ್ತದೆ. ‌ಕಾಂತಾರದ ನಂತರ ಸಖತ್ ಸದ್ದು‌ ಮಾಡಿದ  ಕನ್ನಡ ಸಿನಿಮಾ ಇದಾಗಿದ್ದು, ಇದೀಗ 50ನೇ ದಿನದ ಸಂಭ್ರಮಾಚರಣೆಯಲ್ಲಿದೆ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ. 

Trending News