Amitabh Bachchan: ಬಿಗ್ ಬಿ ಅಮಿತಾಬ್ ಆಸ್ಪತ್ರೆಗೆ ದಾಖಲು: ಬಚ್ಚನ್ ಕುಟುಂಬದಲ್ಲಿ ಹೆಚ್ಚಾದ ಆತಂಕ

Amitabh Bachchan hospitalized: ಖ್ಯಾತ ಬಾಲಿವುಡ್‌ ನಟ ಬಿಗ್ ಬಿ ಅಮಿತಾಬ್ ಬಚ್ಚನ್ ಮುಂಬೈನ ಕೋಕಿಲಾಬೆನ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸದ್ಯ ಅಭಿಮಾನಿಗಳು ಹಾಗೂ ಬಚ್ಚನ್ ಕುಟುಂಬದಲ್ಲಿ ಆತಂಕ ಹೆಚ್ಚಾಗಿದೆ..

Written by - Savita M B | Last Updated : Mar 15, 2024, 02:28 PM IST
  • ಬಾಲಿವುಡ್ ಸೂಪರ್ ಸ್ಟಾರ್ ಅಮಿತಾಬ್ ಬಚ್ಚನ್ ಅವರ ಆರೋಗ್ಯ ಇತ್ತೀಚೆಗೆ ಹದಗೆಟ್ಟಿದ್ದು, ಅವರನ್ನು ಮುಂಬೈನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ
  • ನಟ ಆಸ್ಪತ್ರೆಗೆ ದಾಖಲಾದ ಬಗ್ಗೆ ತಿಳಿಯುವ ಒಂದು ಗಂಟೆಯ ಮೊದಲು ಬಿಗ್ ಬಿ ತಮ್ಮ ಎಕ್ಸ್‌ (ಟ್ವಿಟರ್‌) ಖಾತೆಯಲ್ಲಿ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದಾರೆ
Amitabh Bachchan: ಬಿಗ್ ಬಿ ಅಮಿತಾಬ್ ಆಸ್ಪತ್ರೆಗೆ ದಾಖಲು: ಬಚ್ಚನ್ ಕುಟುಂಬದಲ್ಲಿ ಹೆಚ್ಚಾದ ಆತಂಕ  title=

Amitabh Bachchan: ಬಾಲಿವುಡ್ ಸೂಪರ್ ಸ್ಟಾರ್ ಅಮಿತಾಬ್ ಬಚ್ಚನ್ ಅವರ ಆರೋಗ್ಯ ಇತ್ತೀಚೆಗೆ ಹದಗೆಟ್ಟಿದ್ದು, ಅವರನ್ನು ಮುಂಬೈನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ವರದಿಗಳ ಪ್ರಕಾರ, 81 ವರ್ಷದ ಈ ನಟನಿಗೆ ಇಂದು ಅನಾರೋಗ್ಯ ಉಂಟಾಗಿದೆ ಎನ್ನಲಾಗಿದ್ದು.. ಕೋಕಿಲಾಬೆನ್ ಆಸ್ಪತ್ರೆಯಲ್ಲಿ ತಪಾಸಣೆ ನಡೆಸಿ ಆಂಜಿಯೋಪ್ಲಾಸ್ಟಿ ಚಿಕಿತ್ಸೆಗೆ ದಾಖಲಿಸಲಾಗಿದೆ..  ವೈದ್ಯರು ನಿಗಾ ವಹಿಸಿ ಚಿಕಿತ್ಸೆ ನೀಡುತ್ತಿದ್ದಾರೆ ಎಂದು ತಿಳಿದು ಬಂದಿದೆ.  

 ಇದನ್ನೂ ಓದಿ-Sai Pallavi: ನನಗೆ ಪಿರಿಯಡ್ಸ್‌ ಅದಾಗ್ಲೆ ಹೆಚ್ಚು ಡಾನ್ಸ್‌ ಮಾಡಿದ್ದು..! ಸಾಯಿ ಪಲ್ಲವಿ ಹೇಳಿಕೆ ವೈರಲ್‌

ನಟ ಆಸ್ಪತ್ರೆಗೆ ದಾಖಲಾದ ಬಗ್ಗೆ ತಿಳಿಯುವ ಒಂದು ಗಂಟೆಯ ಮೊದಲು ಬಿಗ್ ಬಿ ತಮ್ಮ ಎಕ್ಸ್‌ (ಟ್ವಿಟರ್‌) ಖಾತೆಯಲ್ಲಿ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದು.. "ಟಿ 4950 - ಎಂದೆಂದಿಗೂ ಕೃತಜ್ಞತೆ." ಎಂದು ಬರೆದುಕೊಂಡಿದ್ದಾರೆ.. ಇಷ್ಟೇ ಅಲ್ಲ.. ಇತ್ತೀಚೆಗಷ್ಟೇ ISPL ನಲ್ಲಿ ಕಾಣಿಸಿಕೊಂಡ ವೀಡಿಯೊವನ್ನು ಸಹ ಹಂಚಿಕೊಂಡಿದ್ದಾರೆ. ಸದ್ಯ ಆಸ್ಪತ್ರೆಗೆ ದಾಖಲಾಗಿರುವ ನಟ ಅಮಿತಾಬ್ ಬಚ್ಚನ್ ಅವರು ಆದಷ್ಟು ಬೇಗ ಚೇತರಿಸಿಕೊಳ್ಳಲಿ ಎಂದು ಅಭಿಮಾನಿಗಳು ಅವರ ಪೋಸ್ಟ್‌ಗೆ ಕಾಮೆಂಟ್‌ ಮಾಡುತ್ತಿದ್ದಾರೆ..

ಇದನ್ನೂ ಓದಿ-ತಾಜಾ ಸುದ್ದಿಯ ಲಿರಿಕಲ್ ವೀಡಿಯೋ ಮೂಲಕ ನಿಗಿನಿಗಿಸಿತು ಗಂಟುಮೂಟೆ ತಂಡದ `ಕೆಂಡ!

ಇನ್ನು ನಟ ಅಮಿತಾಬ್ ಬಚ್ಚನ್ ಸದ್ಯ ಪ್ರಭಾಸ್‌ ಅಭಿನಯಿಸುತ್ತಿರುವ 2989 AD ಕಲ್ಕಿ ಚಿತ್ರದ ಭಾಗವಾಗಿದ್ದಾರೆ.. ಮೊನ್ನೆಯಷ್ಟೇ ಈ ಚಿತ್ರದ ಅಪ್‌ಡೇಟ್‌ವೊಂದನ್ನು ಹಂಚಿಕೊಂಡಿದ್ದು.."ನಿನ್ನೆ ರಾತ್ರಿ ಶೂಟಿಂಗ್ ಮುಗಿಸಿ ಬಂದಿದ್ದೇನೆ.. ಚಿತ್ರದ ಚಿತ್ರೀಕರಣ ಎಲ್ಲವೂ ಮುಗಿದಿದೆ. ಅಂದುಕೊಂಡಂತೆ ಮೇ 9ಕ್ಕೆ ಚಿತ್ರ ತೆರೆಕಾಣಲಿದೆ ಎಂದು" ಮಾಹಿತಿಯನ್ನು ಹಂಚಿಕೊಂಡಿದ್ದರು.. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News