'ನನ್ನ ನಿಭಾಯಿಸಲು ಬಾಲಿವುಡ್‌ ಕೈಯಲ್ಲಿ ಆಗಲ್ಲ': ಟಾಲಿವುಡ್‌ ಸೂಪರ್‌ ಸ್ಟಾರ್..!

ಬಾಲಿವುಡ್‌ & ಸೌತ್‌ ಸಿನಿ ಇಂಡಸ್ಟ್ರಿಗಳ ಮಧ್ಯೆ ಫೈಟ್‌ ಮುಂದುವರಿದಿದೆ. ಈ ಜ್ವಾಲೆಗೆ ತೆಲುಗು ನಟ ಮಹೇಶ್‌ ಬಾಬು ನೀಡಿರುವ ಹೇಳಿಕೆ ತುಪ್ಪ ಸುರಿದಿದೆ.ಅಂದಹಾಗೆ 'ಸರ್ಕಾರು ವಾರಿ ಪಾಠ' ಸಿನಿಮಾ ಮೂಲಕ ಮತ್ತೆ ಬೆಳ್ಳಿತೆರೆಯ ಮೇಲೆ ಮಿಂಚು ಹರಿಸಲು ಮಹೇಶ್‌ ಬಾಬು ಸಜ್ಜಾಗಿದ್ದಾರೆ. ಆದರೆ ಈ ಮಧ್ಯೆ ನಟ ಮಹೇಶ್‌ ಬಾಬು ಅವರು ನೀಡಿರುವ ಹೇಳಿಕೆ ಸಂಚಲನ ಸೃಷ್ಟಿಸಿದೆ.

Written by - Malathesha M | Edited by - Manjunath N | Last Updated : May 12, 2022, 05:27 PM IST
  • ಬಾಲಿವುಡ್‌ & ಸೌತ್‌ ಸಿನಿ ಇಂಡಸ್ಟ್ರಿಗಳ ಮಧ್ಯೆ ಫೈಟ್‌ ಮುಂದುವರಿದಿದೆ.
  • ಈ ಜ್ವಾಲೆಗೆ ತೆಲುಗು ನಟ ಮಹೇಶ್‌ ಬಾಬು ನೀಡಿರುವ ಹೇಳಿಕೆ ತುಪ್ಪ ಸುರಿದಿದೆ ಬಾಲಿವುಡ್‌ & ಸೌತ್‌ ಸಿನಿ ಇಂಡಸ್ಟ್ರಿಗಳ ಮಧ್ಯೆ ಫೈಟ್‌ ಮುಂದುವರಿದಿದೆ.
'ನನ್ನ ನಿಭಾಯಿಸಲು ಬಾಲಿವುಡ್‌ ಕೈಯಲ್ಲಿ ಆಗಲ್ಲ': ಟಾಲಿವುಡ್‌ ಸೂಪರ್‌ ಸ್ಟಾರ್..! title=

ಬೆಂಗಳೂರು: ಬಾಲಿವುಡ್‌ & ಸೌತ್‌ ಸಿನಿ ಇಂಡಸ್ಟ್ರಿಗಳ ಮಧ್ಯೆ ಫೈಟ್‌ ಮುಂದುವರಿದಿದೆ. ಈ ಜ್ವಾಲೆಗೆ ತೆಲುಗು ನಟ ಮಹೇಶ್‌ ಬಾಬು ನೀಡಿರುವ ಹೇಳಿಕೆ ತುಪ್ಪ ಸುರಿದಿದೆ.ಅಂದಹಾಗೆ 'ಸರ್ಕಾರು ವಾರಿ ಪಾಠ' ಸಿನಿಮಾ ಮೂಲಕ ಮತ್ತೆ ಬೆಳ್ಳಿತೆರೆಯ ಮೇಲೆ ಮಿಂಚು ಹರಿಸಲು ಮಹೇಶ್‌ ಬಾಬು ಸಜ್ಜಾಗಿದ್ದಾರೆ. ಆದರೆ ಈ ಮಧ್ಯೆ ನಟ ಮಹೇಶ್‌ ಬಾಬು ಅವರು ನೀಡಿರುವ ಹೇಳಿಕೆ ಸಂಚಲನ ಸೃಷ್ಟಿಸಿದೆ.

ಇದನ್ನೂ ಓದಿ: ಸಿನಿಪ್ರಿಯರಿಗೆ ವೀಕೆಂಡ್ ಧಮಾಕಾ..ಮೇ 13ಕ್ಕೆ ಜೀ5 ಒಟಿಟಿಯಲ್ಲಿ ಮೂರು ಬ್ಲಾಕ್ ಬಸ್ಟರ್ ಸಿನಿಮಾಗಳು ರಿಲೀಸ್..!

ನಟ ಮಹೇಶ್‌ ಬಾಬು ಹತ್ತಾರು ಸೂಪರ್‌ ಹಿಟ್‌ ಸಿನಿಮಾ ನೀಡಿದವರು.ಇತ್ತೀಚೆಗೆ ಸಂದರ್ಶನದಲ್ಲಿ ಮಾತನಾಡುತ್ತಾ ಮಹೇಶ್‌ ಬಾಬು ಬಾಲಿವುಡ್‌ಗೆ ಟಾಂಗ್‌ ಕೊಟ್ಟಿದ್ದರು. 'ಬಾಲಿವುಡ್‌ ನನ್ನ‌ ನಿಭಾಯಿಸೋದಕ್ಕೆ ಆಗೋದಿಲ್ಲ. ಹಿಂದಿಯಲ್ಲಿ ಸಾಕಷ್ಟು ಆಫರ್ಸ್ ಬಂದಿವೆ. ಆದರೆ ಅವರೆಲ್ಲಾ ನನ್ನ ಭರಿಸಲು ಸಾಧ್ಯವೇ ಇಲ್ಲ.ಇದೇ ಕಾರಣಕ್ಕೆ ಅಲ್ಲಿ ಕೆಲಸ ಮಾಡುತ್ತಾ ನನ್ನ ಟೈಂ ವ್ಯರ್ಥ ಮಾಡಲು ಬಯಸಲ್ಲ.ನನಗೆ ಇಲ್ಲಿ ಸಿಗುವ ಗೌರವ ದೊಡ್ಡದು.ಹಾಗಾಗಿ ನನ್ನ ಇಂಡಸ್ಟ್ರಿ ಬಿಟ್ಟು ಬೇರೆ ಇಂಡಸ್ಟ್ರಿಗೆ ಹೋಗಲ್ಲ.' ಅಂತಾ ಕಡ್ಡಿಯನ್ನ ತುಂಡು ಮಾಡಿದಂತೆ ಮಾತನಾಡಿದ್ದರು ನಟ ಮಹೇಶ್‌ ಬಾಬು.ಇದು ಈಗಾಗಲೇ ಹೊತ್ತಿ ಉರಿಯುತ್ತಿರುವ ಜ್ವಾಲೆಗೆ ತುಪ್ಪ ಸುರಿದಂತಾಗಿದೆ.

ಇದನ್ನೂ ಓದಿ: ಮೇ 20ಕ್ಕೆ 'ಸಕುಟುಂಬ ಸಮೇತ' ಚಿತ್ರಮಂದಿರಕ್ಕೆ ಬನ್ನಿ

ಬಾಲಿವುಡ್‌ v/s ಸೌತ್‌
ದಕ್ಷಿಣ ಭಾರತದ ಸಿನಿಮಾಗಳು ಪ್ಯಾನ್‌ ಇಂಡಿಯಾ ಲೆವೆಲ್‌ನಲ್ಲಿ ಮಿಂಚುವ ಹೊತ್ತಿಗೆ ಬಾಲಿವುಡ್‌ ಮಂಕಾಗಿ ಹೋಗಿದೆ. ಈಗಾಗಲೇ ಸೌತ್‌ ಸಿನಿ ಇಂಡಸ್ಟ್ರಿ ಹಿಟ್‌ ಮೇಲೆ ಹಿಟ್‌ ಕೊಟ್ಟು ಬಾಲಿವುಡ್‌ ಸ್ಟಾರ್‌ ನಟರ ಚಳಿ ಬಿಡಿಸುತ್ತಿದೆ. ಈ ಹೊತ್ತಲ್ಲೇ ಅಜಯ್‌ ದೇವಗನ್‌ ಸೇರಿದಂತೆ ಹಲವು ಬಾಲಿವುಡ್‌ ಸ್ಟಾರ್‌ಗಳು ದಕ್ಷಿಣ ಭಾರತದ ಚಿತ್ರರಂಗದ ವಿರುದ್ಧ ಗರಂ ಆಗಿದ್ದಾರೆ.ಆದರೆ ಇದ್ಯಾವ ವಿಚಾರಕ್ಕೂ ಕೇರ್‌ ಮಾಡದೆ ನಟ ಮಹೇಶ್‌ ಬಾಬು, ಬಾಲಿವುಡ್‌ ದೊರೆಗಳ ಕಾಲು ಎಳೆದಿದ್ದಾರೆ.

ಒಟ್ಟಾರೆ ಹೇಳೋದಾದ್ರೆ ಸೌತ್‌ v/s ಬಾಲಿವುಡ್‌ ಕದನ ಮುಂದುವರಿದಿದ್ದು, ಮುಂದಿನ ದಿನಗಳಲ್ಲಿ ಈ ಫೈಟ್‌ ಮತ್ತೊಂದು ಲೆವೆಲ್‌ಗೆ ಹೋಗುವ ಎಲ್ಲಾ ಮುನ್ಸೂಚನೆ ಸಿಕ್ಕಿದೆ. ಹಾಗೇ ಮಹೇಶ್‌ ಬಾಬು ಅವರ ಹೇಳಿಕೆಯನ್ನ ಅವರ ಫ್ಯಾನ್ಸ್‌ ಬೆಂಬಲಿಸುತ್ತಿದ್ದು, ಬಾಲಿವುಡ್‌ ಸ್ಟಾರ್‌ಗಳು ಯಾವ ರೀತಿ ರಿಯಾಕ್ಟ್‌ ಮಾಡುತ್ತಾರೆ ಅನ್ನೋದನ್ನ ಕಾದು ನೋಡಬೇಕಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

 

Trending News